ಕಾರವಾರ: ಕಿವಿ ಕೇಳದು, ಮಾತೂ ಬಾರದು ಆದರೂ ವಿದ್ಯಾರ್ಥಿಗಳು ನಗರದ ಆಶಾನಿಕೇತನ ಕಿವುಡ ಮತ್ತು ಮೂಕ ಮಕ್ಕಳ ಶಾಲೆಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಯಶಸ್ವಿಯಾಗಿ ಬರೆದು, ಉತ್ತಮ ಅಂಕ ಪಡೆದಿದ್ದಾರೆ.
ಆಶಾನಿಕೇತನ ಶಾಲೆಯ 7 ಬಾಲಕರು ಹಾಗೂ ಇಬ್ಬರು ಬಾಲಕಿಯರು ಸೇರಿ 9 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಎಲ್ಲರೂ ಉತ್ತೀರ್ಣರಾಗಿದ್ದು, ಶೇ.100 ರಷ್ಟು ಫಲಿತಾಂಶ ಬಂದಿದೆ. ಶಾಲೆಯ ಸ್ನೇಹಬಾಲು (ಶೇ.71.70) ಅಂಕದೊAದಿಗೆ ಶಾಲೆಗೆ ಪ್ರಥಮ, ಶ್ರೀನಿಕೇತ್ (ಶೇ.68.47) ರಷ್ಟು ಅಂಕದೊAದಿಗೆ ಶಾಲೆಗೆ ದ್ವಿತೀಯ, ಸಾವಿಯೋ ಅಂಥೋನ್ ಕಂಜುತ್ತೇರ್ (ಶೇ.61.40)ಶಾಲೆಗೆ ತೃತೀಯ ಸ್ಥಾನ ಪಡೆದಿದ್ದಾರೆ.