ಸಿದ್ದಾಪುರ ತಾಲೂಕಿನ ಹಸ್ಲರ್ ಕ್ಷೇಮಾಭಿವೃದ್ಧಿ ಸಂಘದವರು ಹಾಗೂ ಪ್ರಮುಖರು ತಹಸೀಲ್ದಾರ್ ಎಂ.ಆರ್. ಕುಲಕರ್ಣಿ ಅವರಿಗೆ ಮನವಿ ಸಲ್ಲಿಸಿದರು. ನಂದನ ಬೋರಕರ್, ಎಚ್.ಕೆ. ಶಿವಾನಂದ, ಅಣ್ಣಪ್ಪ ಹಸ್ಲರ್, ವೆಂಕಟರಮಣ ಹಸ್ಲರ್ ಇತರರಿದ್ದರು.  
ಉತ್ತರ ಕನ್ನಡ

ಪ್ರಕರಣದ ತನಿಖೆ ಚುರುಕುಗೊಳಿಸಿ

ಸಿದ್ದಾಪುರ: ಹೊನ್ನಾವರ ತಾಲೂಕಿನ ಗೇರುಸೊಪ್ಪ ಸುಳೆಮುರ್ಕಿಯ ಇಳಿಜಾರಿನ ತಿರುವಿನಲ್ಲಿ ಕಾರು ಪಲ್ಟಿಯಾಗಿ ಬೆಂಕಿಹೊತ್ತಿಕೊಂಡು ಸಿದ್ದಾಪುರ ತಾಲೂಕಿನ ಕುಡಗುಂದದ ಸಹೋದರರಿಬ್ಬರು ಸಜೀವ ದಹನವಾಗಿರುವ ಘಟನೆಯಲ್ಲಿ ಅನುಮಾನಗಳು ಕಂಡುಬಂದಿರುವುದರಿಂದ ಸೂಕ್ತ ತನಿಖೆ ನಡೆಸುವಂತೆ ಆಗ್ರಹಿಸಿ ಜಿಲ್ಲಾ ಹಸ್ಲರ್ ಕ್ಷೇಮಾಭಿವೃದ್ಧಿ ಸಂಘದವರು ಸಿಪಿಐ ಹಾಗೂ ತಹಸೀಲ್ದಾರ್ ಮೂಲಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಹಾಗೂ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಕುಡಗುಂದದ ಮಂಜುನಾಥ ಹಸ್ಲರ್ ಹಾಗೂ ಚಂದ್ರಶೇಖರ ಹಸ್ಲರ್ ಸಹೋದರರು ಸಜೀವ ದಹನವಾಗಿರುವುದು ಅನುಮಾನಕ್ಕೆ ಕಾರಣವಾಗಿದೆ. ಈ ಕುರಿತು ಕೂಡಲೇ ಸೂಕ್ತ ತನಿಖೆ ನಡೆಸಬೇಕು. ಮನವಿಯಲ್ಲಿ ತಿಳಿಸಲಾಗಿದೆ.
ತಾಲೂಕು ಅಂಬೇಡ್ಕರ್ ಶಕ್ತಿ ಸಂಘದ ಅಧ್ಯಕ್ಷ ನಂದನ ಬೋರಕರ್, ಡಿಎಸ್‌ಎಸ್ ಸಂಚಾಲಕ ಎಚ್.ಕೆ.ಶಿವಾನಂದ, ತಾಲೂಕು ಹಸ್ಲರ್ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಅಣ್ಣಪ್ಪ ಹಸ್ಲರ್, ಗೌರವ ಅಧ್ಯಕ್ಷ ವೆಂಕಟರಮಣ ಹಸ್ಲರ್, ಕಾರ್ಯದರ್ಶಿ ಸಂದೇಶ, ಪ್ರಮುಖರಾದ ವಸಂತ ನಾಯ್ಕ, ವಿನಾಯಕ ನಾಯ್ಕ, ಮಂಜುನಾಥ ನಾಯ್ಕ ಇತರರಿದ್ದರು.