ರಸ್ತೆ ಸುರಕ್ಷತೆ ಜಾಗೃತಿ ಸಪ್ತಾಹಕ್ಕೆ ಜಿಲ್ಲಾ ನ್ಯಾಯಾಧೀಶರು ಚಾಲನೆ ನೀಡಿದರು.
ಕಾರವಾರ: ಜಿಲ್ಲೆಯ ವಿವಿಧೆಡೆ ಸಂಭವಿಸುತ್ತಿರುವ ರಸ್ತೆ ಅಪಘಾತಗಳನ್ನು ತಡೆಯಲು ಗಂಭೀರ ಕ್ರಮಗಳನ್ನು ವಹಿಸಲಾಗುತ್ತಿದ್ದು, ಇದರಿಂದ ಅಪಘಾತಗಳ ಸಂಖ್ಯೆ ಹಂತ, ಹಂತವಾಗಿ ಇಳಿಕೆಯಾಗುತ್ತಿದೆ ಎಂದು ಎಸ್‌ಪಿ ದೀಪನ್ ಎಂಎನ್ ತಿಳಿಸಿದರು.
ಜಿಲ್ಲೆಯಲ್ಲಿ 2023 ರಲ್ಲಿ 1029 ಅಪಘಾತಗಳು ಸಂಭವಿಸಿದ್ದು, 248 ಜನ ಮೃತಪಟ್ಟು, 1739 ಜನ ಗಾಯಗೊಂಡಿದ್ದರು. 2024 ರಲ್ಲಿ 974 ಅಪಘಾತಗಳ ಸಂಭವಿಸಿದ್ದು, 264 ಜನ ಮೃತಪಟ್ಟಿದ್ದು, 1622 ಜನ ಗಾಯಗೊಂಡಿದ್ದರು. 2025 ರಲ್ಲಿ ಒಟ್ಟಾರೆ ಅಪಘಾತಗಳ ಸಂಖ್ಯೆ 809 ಕ್ಕೆ ಇಳಿದಿದೆ. ಮೃತರ ಸಂಖ್ಯೆ 214 ಹಾಗೂ ಗಾಯಾಳುಗಳ ಸಂಖ್ಯೆ 1736 ಆಗಿದೆ.
ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅಪಘಾತಗಳಲ್ಲಿ ಮೃತಪಡುವವರ ಸಂಖ್ಯೆ ಹೆಚ್ಚುತ್ತಿದೆ. 2025 ರಲ್ಲಿ 88 ಕ್ಕೂ ಹೆಚ್ಚು ಜನ ರಾಷ್ಟ್ರೀಯ ಹೆದ್ದಾರಿ ಅಪಘಾತಗಳಲ್ಲಿ ಸಾವನ್ನಪ್ಪಿದ್ದಾರೆ. ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸಿದ್ದಲ್ಲಿ, ಕಾರು ಚಾಲಕರು ಸೀಟ್ ಬೆಲ್ಟ್ ಧರಸಿದ್ದಲ್ಲಿ ಜೀವ ಉಳಿಯುವ ಸಾಧ್ಯತೆ ಹೆಚ್ಚು ಇದರಿಂದ ಹೆಲ್ಮೆಟ್ ಧರಿಸಿ ಚಾಲನೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ನಿಯಮಿತವಾಗಿ ತಪಾಸಣೆ ಕೈಗೊಂಡು ಅತಿ ವೇಗದ ಚಾಲನೆ ಹಾಗೂ ಸಂಚಾರಿ ನಿಯ ಉಲ್ಲಂಘನೆಗೆ ದಂಡ ಆಕರಣೆ ಹೆಚ್ಚಿಸಲಾಗಿದೆ. ಮೂರು ವರ್ಷಗಳಲ್ಲಿ 240 ಅತಿ ವೇಗದ ಚಾಲನೆ ಪ್ರಕರಣ ದಾಖಲಿಸಲಾಗಿದೆ. ಇತರ ಗಂಭೀರ ಸಂಚಾರ ನಿಯಮ ಉಲ್ಲಂಘನೆ ಬಗ್ಗೆ 1,168 ಜನರ ಚಾಲನಾ ಪರವಾನಗಿ ರದ್ದು ಮಾಡಲಾಗಿದೆ. ಒಟ್ಟಾರೆ ಮೂರು ವರ್ಷಗಳಲ್ಲಿ ಸುಮಾರು 4.96 ಕೋಟಿ ರೂ.ಗಳಷ್ಟು ದಂಡ ವಸೂಲಿ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.ಅಪಘಾತ ತಡೆಗೆ ಐಎಂಪಿಎಸ್, ಹಾಗೂ ಎಐ ಆಧಾರಿತ ಕ್ಯಾಮರಾ ಅಳವಡಿಕೆ ಕಾರ್ಯ ಪ್ರಗತಿಯಲ್ಲಿದ್ದು, ಆಗ ವಾಹನ ಸಂಚಾರ ನಿಯಂತ್ರಣಕ್ಕೆ ಅಪಘಾತ ತಡೆಗೆ ಇನ್ನಷ್ಟು ಅನುಕೂಲವಾಗಲಿದೆ ಎಂದರು.
ರಸ್ತೆ ಅಸಮರ್ಪಕತೆ ಸರಿಪಡಿಸಲು ರಾಷ್ಟ್ರೀಯ ಹೆದ್ದಾರಿ ಪಿಡಬ್ಲುಡಿ ಇಲಾಖೆ ಜೊತೆ ನಿರಂತರ ಸಭೆ ನಡೆಸಿ ಕ್ರಮ ವಹಿಸಲಾಗುತ್ತಿದೆ. ಸೈನ್ ಬೋರ್ಡ್, ರಿಫ್ಲೆಕ್ಟರ್ ಅಳವಡಿಕೆ, ಬ್ಯಾಂಕ್ ಸ್ಪಾಟ್ ಗುರುತಿಸಿ, ಅದನ್ನು ಸರಿಪಡಿಸುವುದು. ಹೀಗೆ ಹಲವು ಕ್ರಮ ವಹಿಸಲಾಗುತ್ತಿದೆ ಎಂದರು. ಎಎಸ್‌ಪಿ ಜಗದೀಶ್ ಎನ್.ಸುದ್ದಿಗೋಷ್ಠಿಯಲ್ಲಿ ಇದ್ದರು.
ಮಾದಕ ದ್ರವ್ಯ ತಡೆಗೆ ನಿರಂತರ ಪ್ರಕರಣ ದಾಖಲಿಸಲಾಗುತ್ತಿದೆ. 2023 ರಲ್ಲಿ 101, 2024 ರಲ್ಲಿ 87 ಹಾಗೂ 2025 ರಲ್ಲಿ 295 ಪ್ರಕರಣ ದಾಖಲಿಸಿ, ಒಟ್ಟು 156 ಜನರನ್ನು ಬಂಽಸಲಾಗಿದೆ. ಒಟ್ಟಾರೆ ಈ ಅವಽಯಲ್ಲಿ 71 ಕೆಜಿ 966 ಗ್ರಾಂ ಮಾದಕ ದ್ರವ್ಯಗಳನ್ನು ವಶಕ್ಕೆ ಪಡೆಯಲಾಗಿದೆ. ಮಾದಕ ದ್ರವ್ಯ ಸೇವಿಸುತ್ತಿರುವ ಆರೋಪದ ಮೇಲೆ 492 ಜನರನ್ನು ಬಂಽಸಲಾಗಿದೆ ಎಂದು ಎಸ್‌ಪಿ ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ 2023 ರಿಂದ 1072 ನಾಪತ್ತೆ ಪ್ರಕರಣಗಳಾಗಿವೆ, ಶೇ.90 ಕ್ಕಿಂತ ಹೆಚ್ಚು ಜನರನ್ನು ಪತ್ತೆ ಮಾಡಲಾಗಿದೆ. ಇನ್ನೂ 68 ಜನರ ಹುಡುಕಾಟ ಬಾಕಿ ಇದೆ. ಮುಖ್ಯವಾಗಿ ಮಕ್ಕಳ ನಾಪತ್ತೆ ಪ್ರಕರಣಗಳಲ್ಲಿ ಒಂದು ಪ್ರಕರಣ ಮಾತ್ರ ಪತ್ತೆಯಾಗಿಲ್ಲ ಉಳಿದೆಲ್ಲವನ್ನೂ ಪತ್ತೆ ಮಾಡಲಾಗಿದೆ. 2021 ಕ್ಕಿಂತ ಹಿಂದೆ ನಾಪತ್ತೆಯಾದವರನ್ನು ಹುಡುಕಲು ಕ್ರಮ ವಹಿಸಲಾಗುತ್ತಿದೆ ಎಂದು ಎಸ್‌ಪಿ ದೀಪನ್ ಎಂ.ಎನ್.ತಿಳಿಸಿದರು. ಪ್ರತಿ ಪೊಲೀಸ್ ಠಾಣೆಯಲ್ಲಿ ಪಿಎಸ್‌ಐ ನೇತೃತ್ವದಲ್ಲಿ ನಾಲ್ವರು ಸಿಬ್ಬಂದಿ ಇರುವ ಕಾಣೆಯಾದವರ ಘಟಕ ಪ್ರಾರಂಭಿಸಲಾಗಿದೆ ಎಂದು ತಿಳಿಸಿದರು.
ಎರಡನೇ ಹಂತದಲ್ಲಿ ಮನೆ, ಮನೆ ಪೊಲೀಸ್
ಅಪರಾಧ ಪ್ರಕರಣ ತಡೆಯಲು ಗಂಭೀರ ಕ್ರಮಗಳನ್ನು ವಹಿಸಲಾಗುತ್ತಿದೆ. ಪ್ರಕರಣಗಳಲ್ಲಿ ಬಂಧನವಾದವರ ಶಿಕ್ಷೆಗೊಳಪಡಿಸಲು ಬೇಕಾದ ಎಲ್ಲ ಕ್ರಮ ವಹಿಸಲಾಗುತ್ತಿದೆ. ಮುಖ್ಯವಾಗಿ ಮನೆ, ಮನೆಗೆ ಪೊಲೀಸ್ ಕಾರ್ಯಕ್ರಮದಿಂದ ಪೊಲೀಸ್ ಇಲಾಖೆ ಜನ ಸಂಪರ್ಕ ಹೆಚ್ಚಿದೆ. ನಮ್ಮ ಜಿಲ್ಲೆಯಲ್ಲಿ ಪೊಲೀಸ್ ಸಿಬ್ಬಂದಿ 3,57,944 ಮನೆಗಳನ್ನು ಸುಮಾರು 16.35 ಲಕ್ಷ ಜನಸಂಖ್ಯೆಯನ್ನು ತಲುಪಿದ್ದಾರೆ. ಮೊದಲ ಭೇಟಿಯಲ್ಲಿ 112 ವಾಹನ ಹಾಗೂ ಅದರ ಬಳಕೆಯ ಬಗ್ಗೆ ನಾವು ಮಾಹಿತಿ ನೀಡಿದ್ದೆವು. ಮೊದಲು ಪ್ರತಿ ವಾಹನಕ್ಕೆ ದಿನಕ್ಕೆ 15 ರಿಂದ 20 ಕರೆಗಳು ಬರುತ್ತಿದ್ದವು. ಈಗ ಆ ಕರೆಗಳ ಸಂಖ್ಯೆ 40 ರಿಂದ 45 ಕ್ಕೆ ಹೆಚ್ಚಿದೆ. ಕುಡಿದು ಗಲಾಟೆ, ಗಂಡ ಹೆಂಡತಿ ಜಗಳ ಮುಂತಾದ ಕರೆಗಳು ಬರುತ್ತಿವೆ ನಿಜ. ಆದರೆ, ಅದರಿಂದ ಆಗುವ ಅಪರಾಧಗಳನ್ನು ತಡೆಲು ಸಾಧ್ಯವಾಗುತ್ತಿದೆ. ಈಗ ಎರಡನೇ ಹಂತದಲ್ಲಿ ಮನೆ, ಮನೆ ಪೊಲೀಸ್ ಕಾರ್ಯಕ್ರಮ ಕೈಗೊಳ್ಳಲಾಗುತ್ತಿದ್ದು, ಪೊಕ್ಸೊ ಹಾಗೂ ಹೆಲ್ಮೆಟ್ ಧಾರಣೆ ಬಗ್ಗೆ ನಾವು ಕೇಂದ್ರೀಕರಿಸಲು ತಿಳಿಸಲಾಗಿದೆ ಎಂದು ಎಸ್‌ಪಿ ದೀಪನ್ ತಿಳಿಸಿದರು.
ಸೈಬರ್ ಅಪರಾಧಗಳ ಸಂಖ್ಯೆ ಹೆಚ್ಚುತ್ತಿದೆ. 2023 ರಿಂದ 25 ರವರೆಗೆ 178 ಸೈಬರ್ ಅಪರಾಧ ಪ್ರಕರಣಗಳು ದಾಖಲಾಗಿದ್ದು, ಜನ ಸುಮಾರು 23.58 ಕೋಟಿ ರೂ ಕಳೆದುಕೊಂಡಿದ್ದಾರೆ. ಅದರಲ್ಲಿ 1.27 ಕೋಟಿ ರೂ.ಗಳನ್ನು ಮಾತ್ರ ಫ್ರೀಸ್ ಮಾಡಲು ಸಾಧ್ಯವಾಗಿದ್ದು, 59.29 ಲಕ್ಷ ರೂ.ಗಳನ್ನು ಮಾತ್ರ ಮರಳಿಸಲು ಸಾಧ್ಯವಾಗುತ್ತಿದೆ. ಮುಖ್ಯವಾಗಿ ಇದರಲ್ಲಿ ಜನರಲ್ಲಿ ಜಾಗೃತಿ ಅಗತ್ಯವಾಗಿದೆ. ಹಾಗಾಗಿ ಕಾಲೇಜ್‌ಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಎಸ್‌ಪಿ ದೀಪನ್ ಎಂ.ಎನ್.ತಿಳಿಸಿದರು.
2023 ರಿಂದ 2025 ರವರೆಗೆ ಪ್ರಮುಖ ಅಪರಾಧ ಪ್ರಕರಣಗಳು
ಯಾವ ಅಪರಾಧ ದಾಖಲಾದ ಪ್ರಕರಣಗಳು ಪತ್ತೆಯಾದ ಪ್ರಕರಣಗಳು