ಹೊನ್ನಾವರ: ಕಲೆ ಹಾಗೂ ಕಲಾವಿದರನ್ನು ಸಮಾಜ ಗುರುತಿಸಿ ಗೌರವಿಸುವ ಕಾರ್ಯವಾಗಬೇಕು ಎಂದು ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ನುಡಿದರು.
ಪಟ್ಟಣದ ಶ್ರೀ ಮೂಡಗಣಪತಿ ಸಭಾಭವನದಲ್ಲಿ ಆಯೋಜಿಸಿದ್ದ ಯಗಾನ ಕಲಾವಿದ ವಿದ್ಯಾಧರ ಜಲವಳ್ಳಿ ಅವರಿಗೆ ಹುಟ್ಟೂರು ಸನ್ಮಾನ "ಜಲವಳ್ಳಿ ಸುವರ್ಣ ಸಂಭ್ರಮ' ಕಾರ್ಯಕ್ರಮ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.
ಯಗಾನ ಕಲೆಯನ್ನು ಪಠ್ಯವಾಗಿ ಅಧ್ಯಯನ ನಡೆಸಿದರೆ, ಕಲಾವಿದರಾಗಿ ಮಕ್ಕಳು ರೂಪುಗೊಳ್ಳಲು ಸಾಧ್ಯವಾಗದಿದ್ದರೂ, ಆ ಕಲೆಯ ಸಂಸ್ಕಾರವಾದರೂ ದೊರೆಯಲಿದೆ. ಪಾಲಕರು ತಮ್ಮ ಮಕ್ಕಳಿಗೆ ಯಗಾನದ ಬಗ್ಗೆ ಆಸಕ್ತಿ ಮೂಡಿಸಬೇಕು ಎಂದರು.
ಯಗಾನ ಕಲಾವಿದ ವಿದ್ಯಾಧರ ಮತ್ತು ಜಾಹ್ನವಿ ದಂಪತಿಯನ್ನು ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿದ ವಿದ್ಯಾಧರ ಮಾತನಾಡಿ ಮೂವತ್ತು ವರ್ಷಗಳ ಯಗಾನ ಪಯಣದಲ್ಲಿ ಅಭಿಮಾನಿಗಳನ್ನು ಯಗಾನ ದೇವಿ ವರದ ರೂಪದಲ್ಲಿ ಅನುಗ್ರಹಿಸಿದ್ದಾಳೆ. ಹಲವು ಏಳು ಬೀಳುಗಳನ್ನು ಅನುಭವಿಸಿದರೂ, ಕಲಾಭಿಮಾನಿಗಳು ಪ್ರೀತಿ ತೋರಿ ಈ ಮಟ್ಟಕ್ಕೆ ಬೆಳೆಸಿದ್ದಾರೆ. ಕಲಾಪೋಷಕರು, ಕಲಾಭಿಮಾನಿಗಳ ಸಹಕಾರವೇ ನನ್ನ ಈ ಮಟ್ಟಿನ ಸಾಧನೆಗೆ ಪ್ರೇರಣೆ ಎಂದರು.
ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ದಿನಕರ ಶೆಟ್ಟಿ, ಮಾನವ ಹಕ್ಕುಗಳ ಆಯೋಗದ ಅಧ್ಯ ಟಿ. ಶ್ಯಾಮ ಭಟ್, ಗೋಪಾಲಕೃಷ್ಣ ಶರ್ಮ, ಪೆರ್ಡೂರು ಮೇಳದ ಯಜಮಾನ ಕರುಣಾಕರ ಶೆಟ್ಟಿ, ರಾವೇಂದ್ರ ಆಚಾರ್ಯ ಜನ್ಸಾಲೆ, ಆನಂದ ಮಡಿವಾಳ, ಪ್ರಕಾಶ ಶೆಟ್ಟಿ, ಶಿವಾನಂದ ಹೆಗಡೆ ಕಡತೋಕ ಮಾತನಾಡಿದರು.
ವಿದ್ಯಾಧರ ಅವರ ಆತ್ಮಕಥೆ "ವಿದ್ಯಾಧರ ರಂಗವಿಹಾರ', ಅಭಿನಂದನಾ ಗ್ರಂಥ "ವಿದ್ಯಾಧರ ಭವವಿಭವ' ಪುಸ್ತಕಗಳನ್ನು ಬಿಡುಗಡೆಗೊಳಿಸಲಾಯಿತು. ಪತ್ರಕರ್ತ ಬಿ.ಗಣಪತಿ ಅಭಿನಂದನಾ ನುಡಿಯನ್ನಾಡಿದರು. ಸಮಿತಿಯ ಅಧ್ಯ ರಾಜು ಭಂಡಾರಿ, ನಾಗರಾಜ ಹೆಗಡೆ ಕಾರ್ಯಕ್ರಮ ನಿರ್ವಹಿಸಿದರು. "ಸುದರ್ಶನ ವಿಜಯ' ಮತ್ತು "ದ್ರೌಪದಿ ಪ್ರತಾಪ' ಯಗಾನ ಪ್ರದರ್ಶನಗೊಂಡವು.