ಶಿರಸಿಯ ಟಿಎಂಎಸ್​ ಕಚೇರಿ.  
ಉತ್ತರ ಕನ್ನಡ

ಶಿರಸಿ ಟಿಎಂಎಸ್​ಗೆ 2.26 ಕೋಟಿ ರೂ. ನಿವ್ವಳ ಲಾಭ

ಪ್ರಮುಖ ಮುಖ್ಯಾಂಶಗಳು

  • 1,22,441 ಕ್ವಿಂಟಾಲ್​ ಉತ್ಪನ್ನ ಮಾರಾಟ
  • ಸಂಸ್ಥೆಯ ಅಧ್ಯಕ್ಷ ಜಿ.ಟಿ. ಹೆಗಡೆ ತಟ್ಟಿಸರ ಮಾಹಿತಿ

ಶಿರಸಿ:

ನಗರದ ಪ್ರಮುಖ ಅಡಿಕೆ ವಹಿವಾಟು ಸಂಸ್ಥೆಗಳಲ್ಲಿ ಒಂದಾಗಿರುವ ಟಿಎಂಎಸ್​ ಕಳೆದ ಆಥಿರ್ಕ ವರ್ಷದಲ್ಲಿ ಪ್ರಗತಿಯ ದಾಪುಗಾಲು ಹಾಕಿದ್ದು, 2.26 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ ಎಂದು ಸಂಸ್ಥೆಯ ಅಧ್ಯಕ್ಷ ಜಿ.ಟಿ. ಹೆಗಡೆ ತಟ್ಟಿಸರ ಹೇಳಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 1,22,441 ಕ್ವಿಂಟಾಲ್​ಗಳಷ್ಟು ಉತ್ಪನ್ನವನ್ನು ಸಂಘದ ಮೂಲಕ ಮಾರಾಟ ಮಾಡಿಸಲಾಗಿದೆ. ಸಂಘ ಈಗ 43ನೇ ವರ್ಷದಲ್ಲಿದ್ದು, ಹವಾಮಾನ ವೈಪರೀತ್ಯ ಹಾಗೂ ಅಡಕೆ ಬೆಳೆಯಲ್ಲಿ ಎಲೆ ಚುಕ್ಕಿ ರೋಗದಂತಹ ಸವಾಲುಗಳ ನಡುವೆಯೂ ಸದಸ್ಯರ, ಸದಸ್ಯ ಸಂಘಗಳ ಹಾಗೂ ಖರೀದಿದಾರರ ಸಹಕಾರದಿಂದ ಉತ್ತಮ ಬೆಳವಣಿಗೆಯೊಂದಿಗೆ ಮುನ್ನಡೆಯುತ್ತಿದೆ ಎಂದರು.
ಸಂಘದ ಒಟ್ಟು ವಹಿವಾಟು 564,95,46,289 ರೂ.ಗಳಿಗೆ ತಲುಪಿದ್ದು, ಸ್ವಂತ ಬಂಡವಾಳ ರೂ. 60,09,07,838 ರೂ. ಹಾಗೂ ಸದಸ್ಯರ ಠೇವಣಿ 124,27,59,185 ರೂ. ಸಂಗ್ರಹವಾಗಿದೆ. ಅಡಿಕೆ ಮತ್ತು ಕಾಳುಮೆಣಸು ಸೇರಿ ಒಟ್ಟು 1,22,441 ಕ್ವಿಂಟಲ್​ ಮಹಸೂಲು ವಿಕ್ರೆಯಾಗಿದ್ದು, ನೇರ ಖರೀದಿ ವಿಭಾಗದ ಮೂಲಕ ಸದಸ್ಯರಿಂದ ಟೆಂಡರ್​ನಲ್ಲಿ 27,089.72 ಕ್ವಿಂಟಲ್​ ಅಡಿಕೆ ಹಾಗೂ ಕಾಳುಮೆಣಸು ಖರೀದಿಸಿ ರೂ. 136.14 ಕೋಟಿಗೂ ಅಧಿಕ ವಿಕ್ರಿ ವ್ಯವಹಾರದ ಮೂಲಕ 80,21,421.51 ರೂ. ನಿವ್ವಳ ಲಾಭ ಗಳಿಸಲಾಗಿದೆ ಎಂದರು.
ಎಲೆ ಚುಕ್ಕಿ ರೋಗದಿಂದ ತತ್ತರಿಸಿದ ರೈತರಿಗೆ ನೆರವಾಗಲು ಸಂವು ಸುಮಾರು 200 ಸದಸ್ಯರಿಗೆ ಅಧ್ಯಯನ ಪ್ರವಾಸ ಆಯೋಜಿಸಿದ್ದು, ಬಾಗಲಕೋಟೆಯ ತೋಟಗಾರಿಕಾ ಕಾಲೇಜಿನ ಸಹಯೋಗದೊಂದಿಗೆ 40 ಸಾವಿರ ಕಾಳುಮೆಣಸು ಗಿಡಗಳು ಮತ್ತು 20 ಸಾವಿರ ಚಂದ್ರಗಿರಿ ಕಾಫಿ ಸಸಿಗಳನ್ನು ರಿಯಾಯಿತಿ ದರದಲ್ಲಿ ವಿತರಿಸಿದೆ.
ಸದಸ್ಯರ ಉತ್ಪನ್ನಗಳ ಸಂಗ್ರಹಣೆಗಾಗಿ ದಾಸನಕೊಪ್ಪ ಶಾಖೆಯಲ್ಲಿ 5,700 ಚ.ಅಡಿಯ ಗೋದಾಮು ನಿಮಿರ್ಸಿ ಉದ್ಘಾಟಿಸಲಾಗಿದ್ದು, 30 ಸಾವಿರ ಚ.ಅಡಿಗೂ ಹೆಚ್ಚಿನ ವಿಸ್ತೀರ್ಣದ ನಾಲ್ಕು ಅಂತಸ್ತಿನ ಬೃಹತ್​ ಗೋದಾಮಿನ ನಿರ್ಮಾಣ ಕಾರ್ಯದಲ್ಲಿ ಈಗಾಗಲೇ 12 ಸಾವಿರ ಚ.ಅಡಿಯಷ್ಟು ಭಾಗ ರ್ಪೂಣಗೊಂಡಿದೆ. ಹಸಿ ಅಡಿಕೆ ವ್ಯವಹಾರಕ್ಕಾಗಿ ಶಿರಸಿಯ ಚಿಪಗಿ ಗ್ರಾಮದಲ್ಲಿ 22 ಗುಂಟೆ ಜಾಗವನ್ನು ಖರೀದಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದೆ ಎಂದರು.
ಸಂದ ಸೂಪರ್​ ಮಾರ್ಕೆಟ್​ ವಿಭಾಗವು 14 ಕೋಟಿ ರೂ.ಗಿಂತ ಹೆಚ್ಚಿನ ವಹಿವಾಟಿನೊಂದಿಗೆ 1.59 ಕೋಟಿ ರೂ.ಗೂ ಹೆಚ್ಚಿನ ವ್ಯಾಪಾರಿ ಲಾಭ ಹಾಗೂ ಕೃಷಿ ವಿಭಾಗವು 14.63 ಕೋಟಿ ರೂ.ವಹಿವಾಟಿನೊಂದಿಗೆ 1.14 ರೂ. ಕೋಟಿ ವ್ಯಾಪಾರಿ ಲಾಭ ಗಳಿಸಿವೆ. ಬನವಾಸಿ ಹಾಗೂ ದಾಸನಕೊಪ್ಪ ಶಾಖೆಗಳು ಸಹ ಲಾಭ ಗಳಿಸಿವೆ. ಎಪಿಎಂಸಿ ಶಿರಸಿಯಿಂದ 10 ವರ್ಷಗಳ ಲೀಸ್​ ಮೇಲೆ ಪಡೆದ ಜಮೀನನ್ನು ನೋಂದಾಯಿಸಲು ಕ್ರಮ ಕೈಗೊಳ್ಳಲಾಗುತ್ತಿದ್ದು, ಆ ಜಾಗದಲ್ಲಿ ಪಶು ಆಹಾರ ತಯಾರಿಕಾ ಘಟಕ, ಭೂ&ಸುರಾ ಸಾವಯವ ಗೊಬ್ಬರ ತಯಾರಿಕಾ ಘಟಕ ಹಾಗೂ ಹಸಿ ಅಡಿಕೆ ಪ್ರೊಸೆಸಿಂಗ್​ ಯೂನಿಟ್​ ಆರಂಭಿಸಲು ಚಿಂತಿಸಲಾಗಿದೆ. ಸದಸ್ಯರ ಕಲ್ಯಾಣಕ್ಕಾಗಿ ಜಾರಿಯಲ್ಲಿರುವ ಆರೋಗ್ಯ ಸುರಾಕ್ಷಾ ಯೋಜನೆಯಡಿಯಲ್ಲಿ 4,300 ಸದಸ್ಯರು ನೋಂದಾಯಿಸಿಕೊಂಡಿದ್ದು, ವರದಿ ವರ್ಷದಲ್ಲಿ ಅನಾರೋಗ್ಯಕ್ಕೀಡಾದ 692 ಸದಸ್ಯರಿಗೆ 1,49,79,600 ರೂ.ಗಳಿಗೂ ಹೆಚ್ಚಿನ ಧನ ಸಹಾಯ ನೀಡಲಾಗಿದೆ. ಜತೆಗೆ, ಸದಸ್ಯರಿಗೆ ಮತ್ತು ಸದಸ್ಯ ಸಂಗಳಿಗೆ 1.61 ರೂ. ಕೋಟಿಗೂ ಅಧಿಕ ರಿಬೇಟ್​ ನೀಡಲಾಗಿದೆ ಎಂದರು.
ಉಪಾಧ್ಯಕ್ಷ ಜಿ.ಎಂ. ಹೆಗಡೆ ಮುಳಖಂಡ, ನಿರ್ದೇಶಕರಾದ ಜಿ.ಎಂ. ಹೆಗಡೆ ಹುಳಗೋಳ, ಎಂ.ಪಿ. ಹೆಗಡೆ ಕೊಟ್ಟೆಗದ್ದೆ, ಎನ್​. ಎಸ್​. ಹೆಗಡೆ ಕೋಟಿಕೊಪ್ಪ, ಚಾರುಚಂದ್ರ ಶಾಸ್ಸತ್ರಿ, ರಾಜಶೇಖರ ಗೌಡ, ರತ್ನಾಕರ ನಾಯ್ಕ, ಇಂದಿರಾ ಹೆಗಡೆ, ಸೌಭಾಗ್ಯ ಹೆಗಡೆ ಕೆರೆಗದ್ದೆ, ಮುಖ್ಯ ಕಾರ್ಯನಿರ್ವಾಹಕ ವಿನಯ ಹೆಗಡೆ ಮಂಡೆಮನೆ ಇತರರಿದ್ದರು.

ವಾಷಿರ್ಕ ಸರ್ವ ಸಾಧಾರಣ ಸಭೆ ಮತ್ತು ಸಾಂಸತಿಕ ಕಾರ್ಯಕ್ರಮ:


ಸಂದ ವಾಷಿರ್ಕ ಸರ್ವಸಾಧಾರಣ ಸಭೆ ಆ. 26ರಂದು ಸಂದ ಸಭಾಮಂಡಲದಲ್ಲಿ ಮಧ್ಯಾಹ್ನ 3.30ಕ್ಕೆ ನಡೆಯಲಿದೆ. ವಾರ್ಷಿಕ ಸರ್ವ ಸಾಧಾರಣ ಸಭೆಯ ಬಳಿಕ ಆತಿಥಿ ಕಲಾವಿದರ ಕೂಡುವಿಕೆಯಲ್ಲಿ "ದ್ರೌಪದಿ ಪ್ರತಾಪ' ಯಕ್ಷಗಾನ ಪ್ರದರ್ಶನ ನಡೆಯಲಿದೆ. ಪ್ರಸಿದ್ಧ ಕಲಾವಿದರಾದ ರಾವೇಂದ್ರ ಆಚಾರ್ಯ, ಜನ್ನಾಳೆ, ರಾಮಕೃಷ್ಣ ಹೆಗಡೆ, ಒಲ್ಗಾರು, ಅನಿರುದ್ಧ ಹೆಗಡೆ, ವರ್ಗಾಸರ, ಪ್ರಸನ್ನ ಭಟ್​, ಹೆಗ್ಗಾರ, ಪ್ರಜ್ವಲ್​ ಮುಂಡಾಡಿ ಹಾಗೂ ಇತರೆ ಪ್ರಮುಖ ಕಲಾವಿದರು ಭಾಗವಹಿಸಲಿದ್ದಾರೆ.
ೋಟೋ: 19ಶಿರಸಿ2: