ಮೇಟಿ ದೀಪ ಉರಿಸಿ ದೇವಸ್ಥಾನದ ಎದುರು ಕಲ್ಯಾಣ ಮಂಟಪದಲ್ಲಿ ತಂದಿರಿಸಲಾಯಿತು.  
ಉತ್ತರ ಕನ್ನಡ

ಯುಗಾದಿವರೆಗಿನ್ನು ಅಮ್ಮನ ದರ್ಶನವಿಲ್ಲ

ಸುಭಾಸ ಹೆಗಡೆ ಧೂಪದಹೊಂಡ
ಶಿರಸಿ: ಎರಡು ವರ್ಷಗಳಿಗೊಮ್ಮೆ ನಡೆಯುವ ಸುಪ್ರಸಿದ್ಧ ಮಾರಿಕಾಂಬಾ ಜಾತ್ರೆಯ ಧಾರ್ಮಿಕ ಹಾಗೂ ಸಾಂಪ್ರದಾಯಿಕ ವಿಧಿಗಳು ಪ್ರಾರಂಭವಾಗಿವೆ.ಫೆ.24 ರಿಂದ ಮಾ.4ರವರೆಗೆ ನಡೆಯಲಿದೆ.
ಬುಧವಾರ ಅಂಕೆ ಹಾಕುವ ಸಂಪ್ರದಾಯದ ನಂತರ ದೇವಸ್ಥಾನದಲ್ಲಿ ದೇವಿಗೆ ಮಂಗಳಾರತಿ ಮಾಡಿ, ಗರ್ಭಗುಡಿ ಬಾಗಿಲು ಮುಚ್ಚಲಾಯಿತು. ಇನ್ನು ಮುಂಬರುವ ಯುಗಾದಿಯವರೆಗೂ ಗರ್ಭಗುಡಿಯಲ್ಲಿ ದೇವಿಯ ದರ್ಶನವಿರುವುದಿಲ್ಲ.
ಬಿಡಕಿ ಬೈಲಿನ ಜಾತ್ರಾ ಗದ್ದುಗೆಯಲ್ಲಿ ಹೊರಬಿಡಿನ ನಂತರದ ಅಂಕೆ ಹಾಕುವ ಸಂಪ್ರದಾಯ ಬುಧವಾರ ನಡೆಯಿತು. ಬೆಳಗ್ಗೆ ಪಲ್ಲಕ್ಕಿಯೊಂದಿಗೆ ಜಾತ್ರಾ ಗದ್ದುಗೆಗೆ ಉತ್ಸವ ಮೂರ್ತಿಯನ್ನು ತರಲಾಯಿತು. ನಂತರ ಅಸಾದಿಗಳು ಉತ್ಸವ ಮೂರ್ತಿಗೆ, ದೇವಸ್ಥಾನದ ಧರ್ಮದರ್ಶಿಗಳಿಗೆ, ಬಾಬದಾರರಿಗೆಲ್ಲ ಕಂಕಣ ಕಟ್ಟಿದರು. ಈ ವೇಳೆ ಮೇತ್ರಿ ಕುಟುಂಬದವರು ಮಾರಿಕೋಣನಿಗೂ ಕಂಕಣ ಕಟ್ಟಿದರು. ಅಸಾದಿಗಳು ರಂಗ ಹಾಕಿದರು. ನಂತರ ಮೆರವಣಿಗೆಯಲ್ಲಿ ಬಂದ ಮೇಟಿಯವರು ದೀಪ ಬೆಳಗಿದರು. ದೀಪವನ್ನು ಗದ್ದುಗೆಯಿಂದ ಮಾರಿಕಾಂಬಾ ಕಲ್ಯಾಣಮಂಟಪಕ್ಕೆ ಕೊಂಡೊಯ್ದು, ಇಡಲಾಗಿದ್ದು, ಮೇಟಿಯವರು ಜಾತ್ರೆ ಮುಗಿರುವವರೆಗೂ ಅದು ಆರದಂತೆ ಕಾಯುತ್ತಾರೆ. ಈ ನಡುವೆ ನಗರದಲ್ಲಿ ಮಾರಿ ಕೋಣನ ಸಂಚಾರ ಪ್ರಾರಂಭವಾಗಿದ್ದು, ಮೇತ್ರಿ ಕುಟುಂಬದವರು ಅದರ ಜವಾಬ್ದಾರಿ ವಹಿಸಿದ್ದಾರೆ. ಮಾರಿಕಾಂಬೆಯ ಸಹೋದರಿಯರು ಎನ್ನಲಾಗುವ ಮರ್ಕಿದುರ್ಗಿ ದೇವಿಯರನ್ನು ಸಹ ದೇವಾಲಯಕ್ಕೆ ಮೆರವಣಿಗೆಯಲ್ಲಿ ತರಲಾಯಿತು.
ಧರ್ಮದರ್ಶಿ ಮಂಡಳಿ ಅಧ್ಯಕ್ಷ ಆರ್.ಜಿ.ನಾಯ್ಕ, ಉಪಾಧ್ಯಕ್ಷ ಸುಧೇಶ ಜೋಗಳೇಕರ, ಟ್ರಸ್ಟಿನ ಸುಽÃರ ಹಂದ್ರಾಳ, ವತ್ಸಲಾ ಹೆಗಡೆ, ಬಾಬುದಾರ ಪ್ರಮುಖ ಜಗದೀಶ ಗೌಡ ಇತರರು ಇದ್ದರು.
ಪರಿಶೀಲನೆ
ಶಾಸಕ ಬೀಮಣ್ಣ ನಾಯ್ಕ ನೇತೃತ್ವದಲ್ಲಿ ಜಿಲ್ಲಾಽಕಾರಿ ಕೆ.ಲಕ್ಷ್ಮೀಪ್ರಿಯಾ, ಎಸ್‌ಪಿ ದೀಪನ್ ಎಂ.ಎನ್.ಅವರು ಜಾತ್ರೆಯ ತಯಾರಿ ಹಾಗೂ ಭದ್ರತೆಯ ಪರಿಶೀಲನೆ ನಡೆಸಿದರು. ನಂತರ ಸಭೆ ನಡೆಸಿ ಮಾಹಿತಿ ಪಡೆದರು.