ಶಿರಸಿ ಬಸವೇಶ್ವರ ಕಾಲನಿ ನಿವಾಸಿಗಳ ಜಾಗವನ್ನು ಸಕ್ರಮ ಮಾಡುವಂತೆ ಆಗ್ರಹಿಸಿ ಅಲ್ಲಿನ ನಿವಾಸಿಗಳು ಪೌರಾಯುಕ್ತರಿಗೆ ಮನವಿ ಸಲ್ಲಿಸಿದರು. ರಮೇಶ ಚಂದಾವರ, ಶಿವನಗೌಡ ಪಾಟೀಲ, ಅನಂತ ಶಿರಸಿಕರ್, ನಂದನ ಸಾಗರ ಇತರರಿದ್ದರು. 
ಉತ್ತರ ಕನ್ನಡ

ಶಿರಸಿ ಬಸವೇಶ್ವರ ಕಾಲನಿ ಜಾಗ ಸಕ್ರಮಗೊಳಿಸಲು ಆಗ್ರಹ govt land

ಪ್ರಮುಖ ಮುಖ್ಯಾಂಶಗಳು

  • ಶಿರಸಿ ಬಸವೇಶ್ವರ ಕಾಲನಿ ನಿವಾಸಿಗಳಿಂದ ಪೌರಾಯುಕ್ತರಿಗೆ ಮನವಿ

ಶಿರಸಿ: ನಗರಸಭೆವ್ಯಾಪ್ತಿಯ ಬಸವೇಶ್ವರ ಕಾಲನಿಯಸ.ನಂ.104 ಮತ್ತು105ರಲ್ಲಿರುವನಿವಾಸಿಗಳಿಗೆ ಲೀಸ್ ಆಧಾರದಲ್ಲಿನೀಡಲಾಗಿದ್ದ ಜಾಗವನ್ನು ಸಕ್ರಮಮಾಡಿಕೊಡಬೇಕು ಎಂದು ಆಗ್ರಹಿಸಿಇಲ್ಲಿಯ ನೂರಾರು ನಿವಾಸಿಗಳುಮತ್ತು ಬಸವೇಶ್ವರ ಕಾಲನಿ ಹಿತರಕ್ಷಣಾಸಂಘದ ಸದಸ್ಯರು ಪೌರಾಯುಕ್ತರಿಗೆಬುಧವಾರ ಮನವಿ ಸಲ್ಲಿಸಿದರು.

1948ರಲ್ಲಿಬಸವೇಶ್ವರ ಕಾಲನಿ ನಗರದ ಹೊರಪ್ರದೇಶವಾಗಿತ್ತಲ್ಲದೇ ಇಲ್ಲಿಸುತ್ತಲೂ ಕಾಡು ಆವರಿಸಿಕೊಂಡಿತ್ತು.ಆಗಈ ಜಾಗವನ್ನು ಕಂದಾಯ ಇಲಾಖೆ ನಗರಸಭೆಗೆಹಸ್ತಾಂತರಿಸಿ,ಇಲ್ಲಿ70 ನಿವೇಶನಗಳನ್ನು30 ವರ್ಷಗಳಲೀಸ್‌ಗೆ ನೀಡಲಾಗಿತ್ತು.ಅಂದಿನದಿನದಲ್ಲಿ ಕಾಡು ಪ್ರಾಣಿಗಳಭಯದಿಂದಾಗಿ ನಿವೇಶನ ಪಡೆದುಕೊಂಡವರುಮನೆ ನಿರ್ಮಿಸಿಕೊಳ್ಳಲು ಹೆದರಿನಿವೇಶನಗಳನ್ನು ಹಾಗೆಯೇ ಬಿಟ್ಟಿದ್ದರು.ಆದರೆ,ಈಜಾಗದಲ್ಲಿ ಮನೆ ನಿರ್ಮಿಸಿಕೊಂಡುವಾಸ್ತವ್ಯ ಮಾಡಲೇಬೇಕೆಂದು ನಗರಸಭೆ1952-53ರವೇಳೆ ತಿಳಿಸಿದ್ದರಿಂದ ಅಂದಿನಿಂದಮನೆ ನಿರ್ಮಿಸಿಕೊಂಡು ವಾಸ್ತವ್ಯಮಾಡಿಕೊಂಡು ಬಂದಿದ್ದೇವೆ.ಲೀಸ್ಅವಧಿ ಮುಕ್ತಾಯವಾದ ಬಳಿಕ ನಗರಸಭೆಅಂದಿನ ದಿನಗಳಲ್ಲಿ 2ಸಾವಿರತುಂಬಿಸಿಕೊಂಡು ಲೀಸ್ ಅವಧಿಯನ್ನುಮುಂದುವರಿಸಿದೆ.

ಅನುರಾಧಾಹೆರವಟ್ಟಾ ಅವರು ನಗರಸಭೆಯಅಧ್ಯಕ್ಷರಾಗಿದ್ದ ಅವಧಿಯಲ್ಲಿಪ್ರತಿ ಗುಂಟೆಗೆ 500ರೂ.ದರವಿಧಿಸಿ ಜಾಗದ ಮಾಲೀಕತ್ವವನ್ನುವಾಸ್ತವ್ಯ ಇದ್ದವರಿಗೆ ಮಾಡಿಕೊಡುವಸಲುವಾಗಿ ಠರಾವು ಸಹ ಆಗಿತ್ತು.ಆದರೆ,ಈಠರಾವು ಕಾರ್ಯರೂಪಕ್ಕೆ ಬಂದಿಲ್ಲಎಂದು ಇಲ್ಲಿಯ ನಿವಾಸಿಗಳು ಅಸಮಾಧಾನವ್ಯಕ್ತಪಡಿಸಿದರು.

ಬಸವೇಶ್ವರಕಾಲನಿ ನಿವಾಸಿಗಳಿಗೆ ಜಾಗಹಸ್ತಾಂತರಿಸಿ ಕೊಡುವ ಯತ್ನ2005ರಲ್ಲಿಮತ್ತೆ ನಡೆದಿದೆ.ರಂಗಸ್ವಾಮಿಪೌರಾಯುಕ್ತರಾಗಿದ್ದ ವೇಳೆ ಚದರಅಡಿಗೆ 8ರೂ.ನಂತೆಕರ ತುಂಬಿಸಿಕೊಂಡು ಜಾಗವನ್ನುಸಕ್ರಮ ಮಾಡಿಕೊಡುವ ಸಲುವಾಗಿಜಿಲ್ಲಾಧಿಕಾರಿಗೆ ಪ್ರಸ್ತಾವನೆಯನ್ನೂಕಳಿಸಿದ್ದರು.2016ರಲ್ಲಿಮಹೇಂದ್ರಕುಮಾರ ಪೌರಾಯುಕ್ತರಾಗಿದ್ದವೇಳೆ ಬಸವೇಶ್ವರ ಕಾಲನಿಯ ಎಲ್ಲಮಾಹಿತಿಗಳನ್ನು ಪಡೆದು ಜಾಗದಮಂಜೂರಿಗಾಗಿ ಮತ್ತೊಮ್ಮೆ ಪ್ರಸ್ತಾವನೆಕಳಿಸಿಕೊಟ್ಟಿದ್ದಾರೆ.

ಶಿವಮೊಗ್ಗದಸಾಗರ ನಗರಸಭೆ ವ್ಯಾಪ್ತಿ,ಬಿಜಾಪುರ,ಹಳಿಯಾಳಹಾಗೂ ದಾಂಡೇಲಿಯಲ್ಲಿ 2012ರಲ್ಲಿಯೇಲೀಸ್ ಆಧಾರದಲ್ಲಿ ವಾಸ್ತವ್ಯದಮನೆಗೆ ನೀಡಿರುವ ಜಾಗವನ್ನುರಿಯಾಯಿತಿ ದರದಲ್ಲಿ ಶುಲ್ಕ ಭರಣಮಾಡಿಸಿಕೊಂಡು ಸಕ್ರಮ ಮಾಡಿಕೊಡಲಾಗಿದೆ.ಅದೇರೀತಿ ಶಿರಸಿಯಲ್ಲೂ ಮಾಡಬೇಕುಎಂದು ಇಲ್ಲಿಯ ನಿವಾಸಿಗಳುಆಗ್ರಹಿಸಿದರು.

ಇಲ್ಲಿಯನಿವಾಸಿಗಳಾದ ಶಿವರಾಮ ಚಂದಾವರ,ರಮೇಶಚಂದಾವರ,ಶಿವನಗೌಡಪಾಟೀಲ,ತುಕಾರಾಮಅಂಕೋಲೇಕರ್,ಆರ್.ವಿ.ಭಾಗ್ವತ್,ಅನಂತಶಿರಸಿಕರ್,ಆನಂದಸಾಲೇರ,ನಂದನಸಾಗರ,ನಾಗರಾಜನಾಯ್ಕ,ಕಷ್ಣಮೂರ್ತಿಇತರರಿದ್ದರು.

"

ಬಸವೇಶ್ವರ ಕಾಲನಿ ಜಾಗವನ್ನು ಅಲ್ಲಿಯ ನಿವಾಸಿಗಳಿಗೆ ಹಸ್ತಾಂತರಿಸುವ ಕುರಿತಂತೆ ಪ್ರಸ್ತಾವನೆ ಸರ್ಕಾರದ ಹಂತದಲ್ಲಿದೆ. ಸರ್ಕಾರದಿಂದ ಸೂಚನೆ ಬಂದ ಬಳಿಕ ಮುಂದಿನ ಪ್ರಕ್ರಿಯೆ ಜರುಗಿಸುತ್ತೇವೆ.ಪ್ರಕಾಶ ಚೆನ್ನಪ್ಪನವರ್ ಪೌರಾಯುಕ್ತ, ಶಿರಸಿ