ಸಿದ್ದಾಪುರದ ನಾಗರಾಜ ಹೆಗಡೆ ಖ್ಯಾತ ಕ್ರಿಕೆಟ್ ಆಟಗಾರ ವಿರಾಟ ಕೊಹ್ಲಿಯೊಂದಿಗೆ.  
ಉತ್ತರ ಕನ್ನಡ

ಕೊಹ್ಲಿ ಜತೆ ತೆರೆ ಹಂಚಿಕೊಂಡ ಸಿದ್ದಾಪುರದ ನಾಗರಾಜ

ಸಿದ್ದಾಪುರ: ತಾಲೂಕಿನ ಯುವ ಪ್ರತಿಭೆ ನಾಗರಾಜ ಹೆಗಡೆ, ಭಾರತದ ಖ್ಯಾತ ಕ್ರಿಕೆಟ್ ಆಟಗಾರ ವಿರಾಟ್ ಕೊಹ್ಲಿ ಅವರೊಂದಿಗೆ ಜಾಹೀರಾತಿನಲ್ಲಿ ನಟಿಸುವ ಮೂಲಕ ಗಮನ ಸೆಳೆದಿದ್ದಾರೆ.
ಮೂಲತಃ ಸಿದ್ದಾಪುರ ತಾಲೂಕಿನ ಮಕ್ಕಿಗದ್ದೆಯವರಾದ ನಾಗರಾಜ ಹೆಗಡೆ, ಸಿದ್ದಾಪುರ ವಿದ್ಯಾಗಿರಿಯಲ್ಲಿ ವಾಸವಿರುವ ಶಿಕ್ಷಕ ಜಿ.ಜಿ ಹೆಗಡೆ ಮತ್ತು ರೂಪಾ ಹೆಬ್ಬಾರ ದಂಪತಿಯ ಪುತ್ರ.
ಇವರು ಸ್ಟ್ರೆಂತ್ ಮತ್ತು ಕಂಡಿಷನಿಂಗ್ ಕೋಚ್ ಆಗಿ ಬೆಂಗಳೂರಿನ 91 ಸ್ಪೋರ್ಟಿಂಗ್ ಕಂಪನಿಯಲ್ಲಿ ವೃತ್ತಿ ನಿರ್ವಹಿಸುತ್ತ ಕ್ರಿಕೆಟ್ ಆಡುತ್ತಿದ್ದಾರೆ. ಇವರು ಆಡುತ್ತಿರುವ ಕ್ಲಬ್‌ಗೆ ಜಾಹೀರಾತು ಆಫರ್ ಬಂದಿದ್ದು, 30 ಜನರಲ್ಲಿ ಇವರು ಆಯ್ಕೆಯಾಗಿ ಅಂತಾರಾಷ್ಟ್ರೀಯ ಕ್ರಿಕೆಟ್ ಆಟಗಾರ ವಿರಾಟ್ ಕೊಹ್ಲಿ ಜತೆ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುವ ಅವಕಾಶ ಪಡೆದಿದ್ದಾರೆ.