ಶಿರೂರು ಗುಡ್ಡ ಕುಸಿತದ ದೃಶ್ಯ  
ಉತ್ತರ ಕನ್ನಡ

Shirur Landslide ಗುಡ್ಡ ಕುಸಿತವಾಗಿ 2ವರ್ಷ: ಜನರಲ್ಲಿಲ್ಲ ಹರ್ಷ

ಪ್ರಮುಖ ಮುಖ್ಯಾಂಶಗಳು

  • ಅಂಕೋಲಾ ಶಿರೂರಿನಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡ ಕುಸಿತ
  • ನಾಪತ್ತೆಯಾಗಿದ್ವರ ಪೈಕಿ ಇನ್ನೂ ಇಬ್ಬರ ಪತ್ತೆಯಿಲ್ಲ
  • ಹೆದ್ದಾಯಲ್ಲಿ ಸಂಚಾರಕ್ಕೆ ಇನ್ನೂ ಆತಂಕ ದೂರವಾಗಿಲ್ಲ
ಕಾರವಾರ: ಉತ್ತರ ಕನ್ನಡ ಕಂಡ ಅತಿ ಭೀಕರ ದುರಂತಗಳಲ್ಲಿ ಒಂದಾದ Shirur Landslide ಶಿರೂರು ಗುಡ್ಡ ಕುಸಿತ ಸಂಭವಿಸಿ ಜು.16 ಕ್ಕೆ ಎರಡು ವರ್ಷ ಗತಿಸಿದೆ. ಆದರೆ, ದುರ್ಘಟನೆಯಿಂದಾದ ನೋವು, ಆತಂಕ ಇನ್ನೂ ಮಾಸಿಲ್ಲ. ಇನ್ನೂ ಇಬ್ಬರು ನಾಪತ್ತೆಯಾಗೇ ಇದ್ದು, ಆ ಪ್ರದೇಶದಲ್ಲಿ ಮತ್ತಷ್ಟು ಗುಡ್ಡ ಕುಸಿತದ ಭಯವೂ ದೂರವಾಗಿಲ್ಲ.
2024 ರಲ್ಲಿ ಘಟನೆ ಸಂಭವಿಸಿತ್ತು. 11 ಜನ ನಾಪತ್ತೆಯಾಗಿದ್ದರು. ಹೆದ್ದಾರಿ ಪಕ್ಕ ಹೋಟೆಲ್ ನಡೆಸುತ್ತಿದ್ದ ಲಕ್ಷ÷್ಮಣ ನಾಯ್ಕ ಅವರ ಪತ್ನಿ, ಮಕ್ಕಳು ಸೇರಿ ಇಡೀ ಕುಟುಂಬವೇ ನಾಶವಾಗಿತ್ತು. ಒಂದು ಲಾರಿ, ಎರಡು ಟ್ಯಾಂಕರ್‌ಗಳು ನದಿಯಲ್ಲಿ ಲೀನವಾಗಿದ್ದವು. 75 ಕ್ಕೂ ಅಧಿಕ ದಿನ ಮಣ್ಣು ತೆರವು ಹಾಗೂ ನಾಪತ್ತೆಯಾದವರ ಹುಡುಕಾಟದ ಕಾರ್ಯಾಚರಣೆ ನಡೆದಿತ್ತು. ಕೇರಳದ ಅರ್ಜುನ್ ಎಂಬ ಲಾರಿ ಚಾಲಕನ ನಾಪತ್ತೆಯಾದ ವಿಚಾರ ದೊಡ್ಡ ಚರ್ಚೆಗೆ ಕಾರಣವಾಗಿತ್ತು.

ಇನ್ನೂ ಮುಗಿದಿಲ್ಲ ಆತಂಕ:

ಶಿರೂರು ಗುಡ್ಡ ಕುಸಿತದ ನಂತರ ಜಿಯಾಲಜಿಕಲ್ ಸರ್ವೇ ಆಫ್ ಇಂಡಿಯಾ ತಜ್ಞರ ಸೂಚನೆಯಂತೆ ಗುತ್ತಿಗೆ ಕಂಪನಿ ಐಆರ್‌ಬಿ ಸುರಕ್ಷತಾ ಕಾಮಗಾರಿಗಳನ್ನು ಕೈಗೊಳ್ಳಲು ಜಿಲ್ಲಾಡಳಿತ ಎನ್‌ಎಚ್‌ಎಐ ಮೂಲಕ ಸೂಚಿಸಿತ್ತು. ಗುಡ್ಡ ಕುಸಿದ ಸ್ಥಳದಲ್ಲಿ 120 ಮೀಟರ್ ಗೇಬಿಯನ್ ವಾಲ್ ಕಟ್ಟಿದ್ದು, ಬಿಟ್ಟಿರೆ ಐಆರ್‌ಬಿ ಯಾವುದೇ ಸುರಕ್ಷತಾ ಕ್ರಮ ವಹಿಸಿಲ್ಲ. ಶಿರೂರಿನಲ್ಲಿ ಇನ್ನೂ ಸುಮಾರು ಅರ್ಧ ಕಿಮೀ ವ್ಯಾಪ್ತಿಯಲ್ಲಿ ಗುಡ್ಡ ಕುಸಿಯುವ ಆತಂಕವಿದೆ. ಅಲ್ಲಿ ರಕ್ಷಣಾ ಗೋಡೆ ಹಾಗೂ ಮೆಷ್ ಹೊಡೆಯುವ ಕಾಮಗಾರಿ ಇನ್ನೂ ಬಾಕಿ ಇದೆ.

ಮಣ್ಣು ತೆರವು:

ಕುಸಿದ ಗುಟ್ಟದ ಭಾರಿ ಮಣ್ಣು ಗಂಗಾವಳಿ ನದಿಯಲ್ಲಿ ಬಿದ್ದು ನದಿಯ ನಡುವೆ ದ್ವೀಪವೊಂದು ಸೃಷ್ಟಿಯಾಗಿತ್ತು. ಇದರಿಂದ ನದಿಯ ಹರಿವಿಗೆ ಅಡಚಣೆಯಾಗಿ. ಗಂಗಾವಳಿ ಪಾತ್ರದ ಹಲವು ಗ್ರಾಮಗಳಿಗೆ ಪ್ರವಾಹದ ಆತಂಕ ಉಂಟಾಗಿತ್ತು. ಉಳುವರೆ ಗ್ರಾಮವೇ ಕೊಚ್ಚಿ ಹೋಗುವ ಅಪಾಯವಿದೆ. ಮಣ್ಣು ತೆರವು ಮಾಡಲು ಬಂದರು ಇಲಾಖೆ ಟೆಂಡರ್ ಕರೆದರೂ ಯಾರೂ ಕಾಮಗಾರಿ ನಡೆಸಲು ಬಂದಿಲ್ಲ. ನಂತರ ಗುಡ್ಡ ಕುಸಿತದ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಅಭಿಷೇನಿಯಾ ಎಂಬ ಕಂಪನಿಗೇ ಮಣ್ಣು ತೆರವಿನ ಜವಾಬ್ದಾರಿ ವಹಿಸಲಾಗಿದೆ. ರಾಷ್ಟಿçÃಯ ಹೆದ್ದಾರಿ ಪ್ರಾಽಕಾರದಿಂದ 2 ಕೋಟಿ ರೂ. ನೀಡಿದ್ದರೆ, ಕರ್ನಾಟಕ ಸರ್ಕಾರ 2 ಕೋಟಿ ರೂ. ನೀಡಿದೆ.ಶಾಸಕ ಸತೀಶ ಸೈಲ್ ಸತತ ಪ್ರಯತ್ನದಿಂದ ಕಂಪನಿಗೆ 4ಜಿ ತೆರಿಗೆ ವಿನಾಯಿತಿ ಕೂಡ ಸಿಕ್ಕಿದೆ. ಒಟ್ಟಾರೆ 4 ಕೋಟಿ ರೂ. ವೆಚ್ಚದಲ್ಲಿ ಮಣ್ಣು ತೆರವು ಕಾರ್ಯವನ್ನು ಜೂನ್ ತಿಂಗಳಿAದ ಪ್ರಾರಂಭಿಸಲಾಗಿದೆ.
ನಮ್ಮ ತಂದೆಯನ್ನು ಹುಡುಕಿಕೊಡಿ
ನಾಪತ್ತೆಯಾಗಿದ್ದ 11 ಜನರ ಪೈಕಿ ಜನನ್ನಾಥ ನಾಯ್ಕ ಹಾಗೂ ಲೋಕೇಶ ನಾಯ್ಕ ಎಂಬ ಇಬ್ಬರು ಸ್ಥಳೀಯರು ಇದುವರೆಗೂ ನಾಪತ್ತೆಯಾಗೇ ಇದ್ದಾರೆ. ಈಗ ಮಣ್ಣು ತೆರವು ಕಾರ್ಯಾಚರಣೆಯಲ್ಲಾದರೂ ಅವರನ್ನು ಹುಡುಕಿಕೊಡಿ ಎಂಬುದು ಜನನ್ನಾಥ ನಾಯ್ಕ ಕುಟುಂಬಸ್ಥರ ಮನವಿ. ಜಗನ್ನಾಥ ನಾಯ್ಕ ಅವರಿಗೆ ಪತ್ನಿ ಮೂವರು ಹೆಣ್ಣು ಮಕ್ಕಳಿದ್ದಾರೆ. ಇದುವರೆಗೂ ಕುಟುಂಬ ತಂದೆ ಕಾಣೆಯಾದ ಆಘಾತದಿಂದ ಹೊರ ಬಂದಿಲ್ಲ.

ನದಿಯಾಚೆ ಆತಂಕ

ಶಿರೂರು ಭೂ ಕುಸಿತ ಸ್ಥಳದ ವಿರುದ್ಧ ದಿಕ್ಕಿನಲ್ಲಿ ಗಂಗಾವಳಿ ನದಿಯಾಚೆಯ ಉಳುವರೆ ಎಂಬ ಗ್ರಾಮದಲ್ಲಿ ಭಾರಿ ಹಾನಿಯಾಗಿತ್ತು. ವೇಗವಾಗಿ ಹರಿಯುವ ನದಿಗೆ ಗುಡ್ಡದ ಮಣ್ಣು ರಭಸದಿಂದ ಬಂದು ಬಿದ್ದ ಪರಿಣಾಮ ನದಿಯ ಇನ್ನೊಂದು ದಡದಲ್ಲಿ ಸುನಾಮಿ ಸೃಷ್ಟಿಯಾಗಿತ್ತು. ಕಲ್ಲು, ಮಣ್ಣುಗಳಿಂದ ಕೂಡಿದ ರಾಡಿ ನೀರು ನದಿಯ ದಡದ ಉಳುವರೆ ಗ್ರಾಮಕ್ಕೆ ಅಪ್ಪಳಿಸಿತ್ತು. ಎರಡು ಮನೆಗಳು ಅಡಿಪಾಯವೂ ಇಲ್ಲದಂತೆ ನಾಶವಾಗಿದ್ದರೆ, ಏಳು ಮನೆಗಳಿಗೆ ಭಾರಿ ಹಾನಿಯಾಗಿತ್ತು. ಒಬ್ಬ ವೃದ್ಧೆ ಮೃತಪಟ್ಟಿದ್ದು, ಮಕ್ಕಳು, ಮಹಿಳೆಯರು ಸೇರಿ 14 ಜನ ಗಾಯಗೊಂಡಿದ್ದರು.
ನದಿಯ ರೌದ್ರಾವತಾರವನ್ನು ಕಣ್ಣಾರೆ ನೋಡಿದವರು ದಂಗಾಗಿದ್ದರು. ಆ ಗ್ರಾಮದ ಜನರ ಆತಂಕ ಎರಡು ವರ್ಷ ಕಳೆದರೂ ದೂರವಾಗಿಲ್ಲ. ಮನೆ ಕಳೆದುಕೊಂಡವರಿಗೆ ಅದೇ ಗ್ರಾಮದಲ್ಲಿ ಸರ್ಕಾರ ನಿವೇಶನ ನೀಡಿದೆ. ತಲಾ 1.20 ಲಕ್ಷ ರೂ. ಪರಿಹಾರ ನೀಡಲಾಗಿದೆ. ರಾಜೀವ ಗಾಂಽ ವಸತಿ ನಿಗಮದಿಂದ ಮನೆ ನಿರ್ಮಾಣಕ್ಕೆ ಅನುದಾನ ನೀಡಲಾಗುತ್ತಿದೆ. ಸದ್ಯ ಒಂದು ಮನೆ ಮಾತ್ರ ಪೂರ್ಣವಾಗಿದ್ದು, ಆರು ಮನೆಗಳು ನಿರ್ಮಾಣ ಹಂತದಲ್ಲಿವೆ ಎನ್ನುತ್ತಾರೆ ತಹಸೀಲ್ದಾರ್ ನಿಶ್ಚಲ ನರೋನಾ.
ಉಳುವರೆ ಗ್ರಾಮದಲ್ಲಿ ರೈತರು, ಮೀನುಗಾರರಿದ್ದಾರೆ. ಪಕ್ಕದಲ್ಲಿ ಹರಿಯುವ ಗಂಗಾವಳಿ ಅವರಿಗೆ ಅನ್ನ ನೀಡಿದೆ. ಆದರೆ, ಅದೇ ನದಿ ರೌದ್ರ ರೂಪ ತಾಳಿದ್ದು, ಗ್ರಾಮಸ್ಥರಲ್ಲಿ ತಲ್ಲಣ ಮೂಡಿಸಿದೆ. ಮಳೆಗಾಲ ಬಂತು ಎಂದರೆ ಗ್ರಾಮಸ್ಥರಿಗೆ ಭಯ ಪಡುತ್ತಿದ್ದಾರೆ. ದೊಡ್ಡ ಶಬ್ದವಾದರೆ ಓಡಿ ಹೋಗುತ್ತಿದ್ದಾರೆ.

ಹೆದ್ದಾರಿ ಆತಂಕ

ಗುಡ್ಡ ಕುಸಿತದ ಕಾರಣಕ್ಕೆ ಶಿರೂರಿನಲ್ಲಿ ಒಂದು ದಾರಿಯ
ನ್ನು ಬಂದ್ ಮಾಡಿ ಒನ್‌ವೇ ಮಾಡಲಾಗಿತ್ತು. ಎರಡು ವರ್ಷ ಕಳೆದರೂ ಇದುವರೆಗೂ ಅಲ್ಲಿ ಚತುಷ್ಪಥ ಪ್ರಾರಂಭವಾಗಿಲ್ಲ. ಇದರಿಂದ ವಾಹನ ಸವಾರರು ಆತಂಕದಲ್ಲೇ ವಾಹನ ಚಲಾಯಿಸುವ ಪರಿಸ್ಥಿತಿ ಇದೆ.
"

ಶಿರೂರು ಗೇಬಿಯನ್ ವಾಲ್ ಕಾಮಗಾರಿ ಮುಕ್ತಾಯವಾಗಿದೆ. ಆದರೆ, ಇನ್ನಷ್ಟು ಸುರಕ್ಷತಾ ಕಾಮಗಾರಿಯನ್ನು ಶೀಘ್ರ ಮಾಡುವಂತೆ ಗುತ್ತಿಗೆ ಕಂಪನಿ ಐಆರ್‌ಬಿಗೆ ಸೂಚಿಸಿದ್ದು, ನೋಟಿಸ್ ಕೂಡ ನೀಡಲಾಗಿದೆ.

ಶಿವಕುಮಾರ್ ಎನ್‌ಎಚ್‌ಎಐ ಪಿಡಿ