ಶೇಜವಾಡ ಕ್ಷೇತ್ರಕ್ಕೆ ಬಂದ ಶಿಲೆ  
ಉತ್ತರ ಕನ್ನಡ

ಶೇಜವಾಡ ಜೀರ್ಣೋದ್ಧಾರಕ್ಕೆ ಬಂದ 72 ಟನ್‌ ಶಿಲೆ

ಸುಭಾಸ ಹೆಗಡೆ ಧೂಪದಹೊಂಡ
ಕಾರವಾರ: ಪುರಾಣ ಪ್ರಸಿದ್ಧ ಪಂಚ ಕ್ಷೇತ್ರದಲ್ಲಿ ಒಂದಾದ ಕಾರವಾರದ ಶೆಜ್ಜೇಶ್ವರ ದೇವಸ್ಥಾನ ಪುನರ್ನಿರ್ಮಾಣ ಪ್ರಕ್ರಿಯೆಗೆ ಚಾಲನೆ ದೊರಕಿದೆ.
ಸುಮಾರು ರೂ.22 ಕೋಟಿ ಮೊತ್ತದಲ್ಲಿ ಸಂಪೂರ್ಣ ಶಿಲಾಮಯ ದೇವಸ್ಥಾನ ನಿರ್ಮಾಣಕ್ಕೆ ಯೋಜಿಸಲಾಗಿದ್ದು, ಸೋಮವಾರ ಕ್ಷೇತ್ರಕ್ಕೆ ಆಗಮಿಸಿದ 70ಟನ್ ಪ್ರಥಮ ಶಿಲೆಯನ್ನು ಜೀರ್ಣೋದ್ಧಾರ ಸಮಿತಿ ಹಾಗೂ ಅರ್ಚಕರು,ದೇವಳಿಯರು, ಭಕ್ತರು ಡೊಳ್ಳು ವಾದ್ಯದೊಂದಿಗೆ ವಿಶೇಷ ಬೈಕ್ ರ‍್ಯಾಲಿ ಮೂಲಕ ಬರಮಾಡಿಕೊಂಡರು. ಜೀರ್ಣೋದ್ಧಾರ ಸಮಿತಿಯ ಗೌರವ ಅಧ್ಯಕ್ಷರಾದ ಶಾಸಕ ಸತೀಶ ಸೈಲ್ ಪೂಜೆ ಸಲ್ಲಿಸಿದರು. ಮಹಿಳೆಯರು ಪೂರ್ಣಕುಂಭದೊಂದಿಗೆ ಸ್ವಾಗತಿಸಿದರು. ಶಿಲ್ಪಿ ಕೇಶವ ನಾಯ್ಕ ನಿರ್ಮಾಣದ ಜವಾಬ್ದಾರಿ ವಹಿಸಿದ್ದಾರೆ.
ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಸಮೀರ ನಾಯ್ಕ, ಕಾರ್ಯದರ್ಶಿ ಜಯಪ್ರಕಾಶ ಜಿ.ಕೆ.ರಾಮ್, ಸದಸ್ಯರಾದ ಕ್ರಷ್ಣಾನಂದ ಕೋಲ್ವೇಕರ್,ವಿಘ್ನೇಶ ಮೋಘೇ,ಆತ್ಮಾರಾಮ ಶೇಜವಾಡಕರ, ಲವಕುಮಾರ ನಾಯ್ಕ ಇತರರು ಇದ್ದರು.