ಅಂಕೋಲಾ ನ್ಯಾಯಾಲಯದಲ್ಲಿ ಮಾ.14 ರಂದು ಆಯೋಜಿಸಿರುವ ರಾಷ್ಟ್ರೀಯ ಲೋಕಅದಾಲತ್ ಕಾರ್ಯಕ್ರಮ ಅಂಗವಾಗಿ ನ್ಯಾ. ಪ್ರಿಯಾ ಜೋಗಳೇಕರ್ ಅಧ್ಯಕ್ಷತೆಯಲ್ಲಿ ತುರ್ತುಸಭೆ ನಡೆಯಿತು. ಅಣ್ಣಪ್ಪ ನಾಯ್ಕ, ಶಿಲ್ಪಾ ನಾಯ್ಕ, ಗುರುನಾಥ ಹಾದಿಮನೆ, ಪ್ರತಿಭಾ ನಾಯ್ಕ, ಮಮತಾ ಕೆರೆಮನೆ, ನಿತ್ಯಾನಂದ ಕವರಿ, ಗುರು ನಾಯ್ಕ, ಶಾಂತಾ ಹೆಗಡೆ, ದಿಕ್ಷೀತ್ ನಾಯಕ, ಆರ್.ಟಿ. ಗೌಡ, ಗಜಾನನ ನಾಯ್ಕ ಇತರರಿದ್ದರು. 
ಉತ್ತರ ಕನ್ನಡ

ಲೋಕ ಅದಾಲತ್‌ನಲ್ಲಿ ಪ್ರಕರಣ ಇತ್ಯರ್ಥಪಡಿಸಿಕೊಳ್ಳಿ

ಅಂಕೋಲಾ: ನ್ಯಾಯಾಲಯದಲ್ಲಿ ಸಾಕ್ಷಿ ಪುರಾವೆಗಳ ಮೂಲಕ ಇತ್ಯರ್ಥಗೊಳ್ಳಬೇಕಾದ ಕೆಲವು ಕ್ಲಿಷ್ಟಕರ ಪ್ರಕರಣ ಹಾಗೂ ಇಲಾಖಾ ಮಟ್ಟದಲ್ಲೇ ಬಗೆಹರಿಸಿಕೊಳ್ಳುವ ಪ್ರಕರಣ ಹೊರತುಪಡಿಸಿ, ಇನ್ನುಳಿದ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಲೋಕ ಅದಾಲತ್‌ನಲ್ಲಿ ಇತ್ಯರ್ಥಪಡಿಸಿಕೊಳ್ಳಿ ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ಪ್ರಿಯಾ ಜೋಗಳೇಕರ್ ಹೇಳಿದರು.
ರಾಜ್ಯ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ನಿರ್ದೇಶನದ ಮೇರೆಗೆ ಮಾ. 14 ರಂದು ಆಯೋಜಿಸಿರುವ ರಾಷ್ಟ್ರೀಯ ಲೋಕ ಅದಾಲತ್ ಕಾರ್ಯಕ್ರಮ ಅಂಗವಾಗಿ ಬುಧವಾರ ಹಮ್ಮಿಕೊಂಡ ತುರ್ತು ಸಭೆ ಉದ್ದೇಶಿಸಿ ಅವರು ಮಾತನಾಡಿದರು.
ಬಹುತೇಕ ಹಣಕಾಸು ಸಂಸ್ಥೆಗಳ ಪ್ರಕರಣಗಳು ಬಾಕಿ ಇದ್ದು, ಅವುಗಳನ್ನು ಸಹ ರಾಜಿ ಸಂಧಾನದ ಮೂಲಕ ಬಗೆಹರಿಸಿಕೊಳ್ಳುವದು ಸೂಕ್ತ ಎಂದು ಇಲಾಖಾ ಮುಖ್ಯಸ್ಥರಿಗೆ ಸೂಚಿಸಿದರು.
ಸಹಾಯಕ ಸರ್ಕಾರಿ ಅಭಿಯೋಜಕ ಅಣ್ಣಪ್ಪ ನಾಯ್ಕ, ಶಿಲ್ಪಾ ನಾಯ್ಕ, ವಕೀಲರ ಸಂಘದ ಅಧ್ಯಕ್ಷೆ ಪ್ರತಿಭಾ ನಾಯ್ಕ, ಕಾರ್ಯದರ್ಶಿ ಮಮತಾ ಕೆರೆಮನೆ, ಪಿಎಸ್‌ಐ ಗುರುನಾಥ ಹಾದಿಮನೆ, ವಕೀಲರಾದ ನಿತ್ಯಾನಂದ ಕವರಿ, ಗುರು ವಿ. ನಾಯ್ಕ, ಶಾಂತಾ ಹೆಗಡೆ, ದಿಕ್ಷೀತ್ ನಾಯಕ, ಆರ್.ಟಿ.ಗೌಡ, ಗಜಾನನ ನಾಯ್ಕ ಸೇರಿದಂತೆ ವಿವಿಧ ಇಲಾಖೆಯ ಮುಖ್ಯಸ್ಥರು ಉಪಸ್ಥಿತರಿದ್ದರು.