ಯಲ್ಲಾಪುರ ತಾಲೂಕಿನ ಉಪಳೇಶ್ವರ ಬಳಿ ಬಸ್ಗಾಗಿ ಕಾಯುತ್ತಿರುವ ವಿದ್ಯಾಥಿರ್ಗಳು.
ಯಲ್ಲಾಪುರ: ತಾಲೂಕಿನ ಚಂದಗುಳಿ ಗ್ರಾಪಂ ವ್ಯಾಪ್ತಿಯ ವಿದ್ಯಾಥಿರ್ಗಳು ಪ್ರತಿನಿತ್ಯ ಬಸ್ ವ್ಯವಸ್ಥೆ ಸರಿಯಾಗಿಲ್ಲದೇ ಶಾಲೆ-ಕಾಲೇಜ್ಗೆ ಹೋಗಲು ಸಮಸ್ಯೆ ಅನುಭವಿಸುತ್ತಿದ್ದಾರೆ.
ಚಂದಗುಳಿ ಗ್ರಾಪಂ ವ್ಯಾಪ್ತಿಯ ಮಳಲಗಾಂವ್, ಜಂಬೆಸಾಲ್, ಉಪಳೇಶ್ವರ, ಹುತ್ಕಂಡ, ಸವಣಗೇರಿ ಭಾಗಗಳಿಂದ ಯಲ್ಲಾಪುರ ಶಾಲಾ ಕಾಲೇಜ್ಗೆ ಸುಮಾರು 150ಕ್ಕೂ ಹೆಚ್ಚು ವಿದ್ಯಾಥಿರ್ಗಳು ಪ್ರತಿನಿತ್ಯ ಓಡಾಡುತ್ತಾರೆ. ಶಿರಸಿ ಕಡೆಯಿಂದ ಬರುವ ಬಸ್ಗಳಲ್ಲಿ ಪ್ರಯಾಣಿಕರ ಒತ್ತಡದಿಂದ ನಿಲುಗಡೆ ಇಲ್ಲದೇ ವಿದ್ಯಾಥಿರ್ಗಳಿಗೆ ಸಮಸ್ಯೆಯಾಗಿದೆ. ತಾಸುಗಟ್ಟಲೆ ಬಸ್ಗಾಗಿ ಕಾಯುವ ವಿದ್ಯಾಥಿರ್ಗಳು ಶಾಲೆ, ಕಾಲೇಜ್ ಸಮಯಕ್ಕೆ ಸರಿಯಾಗಿ ತಲುಪಲು ಸಾಧ್ಯವಾಗುತ್ತಿಲ್ಲ. ಸಂಜೆಯೂ ಮನೆಗೆ ಮರಳುವುದು ತಡವಾಗುತ್ತಿದೆ.
ವಿದ್ಯಾಥಿರ್ಗಳ ಅನುಕೂಲಕ್ಕಾಗಿ ಬೆಳಗ್ಗೆ ಮತ್ತು ಸಂಜೆ ಶಾಲೆ&ಕಾಲೇಜ್ ಸಮಯಕ್ಕೆ ಪ್ರತ್ಯೇಕ ಬಸ್ ಓಡಾಟ ಆರಂಭಿಸಬೇಕೆಂಬ ಒತ್ತಾಯ ಕೇಳಿ ಬಂದಿದೆ. ಈಗಾಗಲೇ ಈ ಕುರಿತು ಟಕ ವ್ಯವಸ್ಥಾಪಕರಿಗೆ 3&4 ಬಾರಿ ಮನವಿ ಮಾಡಿಕೊಂಡರೂ ಪ್ರಯೋಜನವಾಗಿಲ್ಲ.
ಸ್ಥಳಿಯ ಮುಖಂಡರು ಈ ಕುರಿತು ಮನವಿ ಸಲ್ಲಿಸಿದ್ದಾರೆ. ಇದಲ್ಲದೆ, ಪಾಲಕರು ಈ ಬಗ್ಗೆ ಮನವಿ ನೀಡಿದ್ದಾರೆ. ಸಮಸ್ಯೆ ಬಗ್ಗೆ ಪೊಲೀಸ್ ಇಲಾಖೆಯ ಗಮನಕ್ಕೂ ತಂದ ಹಿನ್ನೆಲೆಯಲ್ಲಿ ಪರಿಹರಿಸುವಂತೆ ಟಕ ವ್ಯವಸ್ಥಾಪಕರಿಗೆ ಪಿಎಸ್ಐ ಕೂಡ ಕೇಳಿಕೊಂಡಿದ್ದರು. ಇದಕ್ಕೆ ಸ್ಪಂದಿಸಿದ ಘಟಕ ವ್ಯವಸ್ಥಾಪಕರು ತಕ್ಷಣವೇ ಪ್ರತ್ಯೇಕ ಬಸ್ ಓಡಾಟಕ್ಕೆ ವ್ಯವಸ್ಥೆ ಮಾಡುವ ಭರವಸೆ ನೀಡಿದ್ದರು.
ಇಷ್ಟೆಲ್ಲ ನಡೆದು ವಾರಗಳೇ ಕಳೆದರೂ ಬಸ್ ಓಡಾಟ ಮಾತ್ರ ಇನ್ನೂ ಆರಂಭವಾಗಿಲ್ಲ. ಭರವಸೆ ನೀಡಿ, ಕ್ರಮ ಕೈಗೊಳ್ಳದೇ ಇರುವ ಬಸ್ ಘಟಕದ ಅಧಿಕಾರಿಗಳ ಬಗ್ಗೆ ಪಾಲಕರು ಹಾಗೂ ವಿದ್ಯಾಥಿರ್ಗಳ ಆಕ್ರೋಶ ಹೆಚ್ಚಿದೆ. ಬಸ್ ಸಮಸ್ಯೆ ಪರಿಹರಿಸಲು ಆಗ್ರಹಿಸಿ ಆ. 8ರಂದು ರಸ್ತೆ ತಡೆ ನಡೆಸಿ ಪ್ರತಿಭಟಿಸುವ ಸಿದ್ಧತೆಯನ್ನೂ ನಡೆಸಿದ್ದಾರೆ.