ಸತೀಶ ಸೈಲ್‌  
ಉತ್ತರ ಕನ್ನಡ

ತಿರಸ್ಕೃತ ಅರ್ಜಿಗಳನ್ನು ಮರುಪರಿಶೀಲನೆಗೆ ಕಾಗೇರಿ ಪ್ರಯತ್ನ ಮಾಡಲಿ: ಸೈಲ್‌ ಸವಾಲು

ಸುಭಾಸ ಹೆಗಡೆ ಧೂಪದಹೊಂಡ
ಕಾರವಾರ: ಹೆಚ್ಚುವರಿ ಪರಿಹಾರ ಕೋರಿ ವಿಶೇಷ ಭೂ ಸ್ವಾಧೀನಾಧಿಕಾರಿ ಕಚೇರಿಯಲ್ಲಿ ಸೀಬರ್ಡ್ ನೌಕಾನೆಲೆ ನಿರಾಶ್ರಿತರು ಸಲ್ಲಿಸಿದ್ದ ಹಲವು ಅರ್ಜಿಗಳನ್ನು ತಿರಸ್ಕಾರ ಮಾಡಿದ್ದು, ಅದನ್ನು ಮರು ಪರಿಗಣನೆ ಮಾಡಲು ಸಂಸದ ಕಾಗೇರಿ ಅವರು ಪ್ರಯತ್ನ ಮಾಡಲಿ ಎಂದು ಶಾಸಕ, ಎಂಸಿಎ ಅಧ್ಯಕ್ಷ ಸತೀಶ ಸೈಲ್ ತಿಳಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೀಬರ್ಡ್ ನೌಕಾನೆಲೆಯಗೆ ಸ್ಥಳೀಯರು ಭೂಮಿ ಕಳೆದುಕೊಂಡು 30 ವರ್ಷ ಕಳೆದಿತ್ತು. ಪರಿಹಾರ ಬಂದಿರಲಿಲ್ಲ. ಆಗ ಸುಪ್ರೀಂ ಕೋರ್ಟ್ನಲ್ಲಿ ಮೂರು ವಕೀಲರನ್ನು ನೇಮಕ ಮಾಡಿ ಹೋರಾಟ ಮಾಡಿದ್ದು, ನಾನು, ಸುಪ್ರೀಂ ಕೋರ್ಟ್ ತೀರ್ಪಿನಂತೆ ಪರಿಹಾರ ಬಿಡುಗಡೆಯಾಗಿದೆ. ಆದರೆ, ಬಿಜೆಪಿಯವರು ತಾವೇ ಮಾಡಿದ್ದು, ಎಂದು ಅದರ ಕ್ರೆಡಿಟ್ ಪಡೆಯಲು ಹೊರಟಿದ್ದಾರೆ. ಸುಪ್ರೀಂ ಕೋರ್ಟ್ ಆದೇಶದಂತೆ ಭೂ ಸ್ವಾಧೀನ ಕಾಯ್ದೆಯ ಸೆಕ್ಷನ್ 18 ಅಡಿ ಪ್ರತಿ ಗುಂಟೆಗೆ 11,500 ರೂ. ಕೇಂದ್ರ ರಕ್ಷಣಾ ಮಂತ್ರಾಲಯದಿAದ ಹಲವು ನಿರಾಶ್ರಿತರಿಗೆ ಪಾವತಿಯಾಗಿದೆ. ಇನ್ನಷ್ಟು ಬಾಕಿ ಇದೆ. ಇನ್ನು ಅದೇ ಆದೇಶದ ಆಧಾರವಾಗಿಟ್ಟುಕೊಂಡು ವಿಶೇಷ ಭೂ ಸ್ವಾಧೀನಾಧಿಕಾರಿಗಳಿಗೆ ಅರ್ಜಿ ಸಲ್ಲಿಸಿ ಹೆಚ್ಚುವರಿ ಪರಿಹಾರ ಪಡೆಯಲು ಭೂ ಸ್ವಾಧೀ ಕಾಯ್ದೆಯ ಸೆಕ್ಷನ್ 28ಎ ಅಡಿ ಅವಕಾಶವಿದೆ.
ಅದರಲ್ಲಿ ಸಾಕಷ್ಟು ನಿರಾಶ್ರಿತರು ಅರ್ಜಿ ಸಲ್ಲಿಸಿದ್ದು, ಹಂತ ಹಂತವಾಗಿ ವಿಶೇಷ ಭೂ ಸ್ವಾಧೀನಾಧಿಕಾರಿ ಕಚೇರಿಯಲ್ಲಿ ಅರ್ಜಿ ವಿಲೇವಾರಿಯಾಗುತ್ತಿದೆ. ಅದರಕ್ಕೆ ಪರಿಹಾರ ಬರುತ್ತಿದೆ. ಇನ್ನೂ 218 ಪ್ರಕರಣಗಳಿಗೆ ಸಂಬಂಧಿಸಿದಂತೆ ಸುಮಾರು 28 ಕೋಟಿ 92 ಲಕ್ಷ ರೂ. ಬರಲು ಬಾಕಿ ಇದೆ. ಆದರೆ, ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿಯ ಅವರು ಅದನ್ನು ತಾವೇ ತರಿಸಿದ್ದು ಎಂದು ಪ್ರಚಾರ ಪಡೆಯುತ್ತಿದ್ದಾರೆ. ಮಾ.7 ರಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ನನಗೆ ವಿಳಂಬವಾಗಿ ಮಾಹಿತಿ ನೀಡಲಾಯಿತು. ನಾವು ಬರಬಾರದು ಎಂಬ ಕಾರಣಕ್ಕ ಅಽವೇಶನ ಇದ್ದ ದಿನವೇ ಕಾರ್ಯಕ್ರಮ ಆಯೋಜಿಸಿರುವುದು ಬೇಸರ ತಂದಿದೆ ಎಂದರು.
ತಾನಾಗಿಯೇ ಬಂದ ಹಣವನ್ನು ತಾನು ತಂದೆ ಎಂದು ಪ್ರಚಾರ ಪಡೆಯುವ ಬದಲು ಕಾಗೇರಿ ಅವರು ತಿರಸ್ಕೃತವಾದ ಅರ್ಜಿಗಳನ್ನೂ ಪರಿಹರಿಸಲು ಕ್ರಮ ಕೈಗೊಳ್ಳಲಿ. ಅಲ್ಲದೇ ಕೊಂಕಣ ರೈಲ್ವೆಗೆ ಭೂ ಸ್ವಾಧೀನವಾದ ಭೂಮಿಯ ಪ್ರಕರಣಕ್ಕೆ ಸಂಬಂಧಿಸಿದಂತೆ 399 ಕ್ಕೂ ಹೆಚ್ಚು ಪ್ರಕರಣಗಳು ಎಸಿಗಳ ಬಳಿ ಬಾಕಿ ಇವೆ. ಅದನ್ನು ಶೀಘ್ರ ಪರಿಹರಿಸಲು ಕ್ರಮ ವಹಿಸಲಿ ಎಂದರು.

ಶೀಘ್ರ ಹೊಸ ಕಟ್ಟಡ

ಕಾರವಾರ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಾಗಿದ್ದು, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟಡ ನಿರ್ಮಾಣಕ್ಕೆ ಹಳೆಯ ಜಿಲ್ಲಾಸ್ಪತ್ರೆ ಕಟ್ಟಡ ತೆರವು ಮಾಡಲಾಗುವುದು. ಶೀಘ್ರದಲ್ಲಿ ಕಾಮಗಾರಿ ಪ್ರಾರಂಭಕ್ಕೆ ಫಾಲೋ ಅಪ್ ಮಾಡುತ್ತೇನೆ. ಗಂಗಾವಳಿ ಸೇತುವೆ ಉದ್ಘಾಟನೆಯಾಗಿದ್ದು, ಗೋಕರ್ಣ-ಅಂಕೋಲಾ ನಡುವೆ ವಾಹನ ಓಡಾಟಕ್ಕೆ ಅವಕಾಶ ಮಾಡಿಕೊಡಲಾಗುವುದು ಎಂದರು.

ಕಾಗೇರಿ ಪ್ರಯತ್ನ

ಸೀಬರ್ಡ್ ನೌಕಾನೆಲೆ ನಿರಾಶ್ರಿತರಿಗೆ 27.70 ಕೋಟಿ ರೂಪಾಯಿ ಹೆಚ್ಚುವರಿ ಪರಿಹಾರ ಬಿಡುಗಡೆ ಹಾಗೂ ರಾಷ್ಟ್ರೀಯ ಹೆದ್ದಾರಿ (52ರ) ಅಂಕೋಲಾ-ಯಲ್ಲಾಪುರ ನಡುವೆ ಸಮಗ್ರ ಅಭಿವೃದ್ಧಿಗೆ 101.21 ಕೋಟಿ ರೂಪಾಯಿ ಬಿಡುಗಡೆ ಮಾಡಿದ್ದು ಸ್ವಾಗತಾರ್ಹವಾಗಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷೆ ರೂಪಾಲಿ ಎಸ್.ನಾಯ್ಕ ತಿಳಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು, ಸೀಬರ್ಡ ನೌಕಾನೆಲೆ ಸಂತ್ರಸ್ಥರಿಗೆ 28 ಬಿ ಅಡಿಯಲ್ಲಿನ 112 ಪ್ರಕರಣಗಳಿಗೆ ಒಟ್ಟೂ 27 ಕೋಟಿ ರೂ.ಗಳ ಹೆಚ್ಚುವರಿ ಪರಿಹಾರ ಬಿಡುಗಡೆಯಾಗಿದೆ. ಇದರಲ್ಲಿ ದಾಖಲೆ ನೀಡಿದ 6.87 ಕೋಟಿ ರೂ. ಪರಿಹಾರವನ್ನು ಸಂಸದರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಶನಿವಾರ ವಿತರಣೆ ಮಾಡಿದ್ದಾರೆ. ಇದುವರೆಗೆ 35 ಕೋಟಿ ರೂ. ಬಿಡುಗಡೆಯಾಗಿದ್ದು ಬಾಕಿ ಇರುವ 215 ಪ್ರಕರಣಗಳಿಗೆ 28.82 ಕೋಟಿ ರೂ. ಶೀಘ್ರದಲ್ಲಿ ಬಿಡುಗಡೆಯಾಗಲಿದೆ ಎಂದು ಸಂಸದರು ತಿಳಿಸಿದ್ದಾರೆ. ಈ ಹಣ ಬಿಡುಗಡೆಗೆ ಸಂಸದರಾದ ವಿಶ್ವೇಶ್ವರ ಹೆಗಡೆ ಕಾಗೇರಿ ವಿಶೇಷ ಪ್ರಯತ್ನ ನಡೆಸಿದ್ದರು. ನಾನೂ ಕೂಡ ಈ ಹಿಂದೆ ಕೇಂದ್ರ ಸರ್ಕಾರ ಹಾಗೂ ಸಂಬAಧಪಟ್ಟ ಸಚಿವರು ಹಾಗೂ ಸಂಸದರಿಗೆ ಮನವಿ ಮಾಡಿದ್ದೆ. ಆಗಿನ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಕಾರವಾರಕ್ಕೆ ಆಗಮಿಸಿ ಸುಮಾರು 600 ಕೋಟಿ ರೂ.ಗಳಷ್ಟು ಪರಿಹಾರ ವಿತರಣೆ ಮಾಡಿದ್ದರು ಎಂದು ರೂಪಾಲಿ ನಾಯ್ಕ ಹೇಳಿದ್ದಾರೆ.
ಅದೇ ರೀತಿ ಅಂಕೋಲಾ ಯಲ್ಲಾಪುರ ಹೆದ್ದಾರಿ ಹೊಸಳ್ಳಿಯಿಂದ ಯಲ್ಲಾಪುರ ಹಾಗೂ ಮಾಸ್ತಿಕಟ್ಟೆಯಿಂದ ಬಾಳೆಗುಳಿ ತನಕ ರಸ್ತೆ ಸುಧಾರಣೆಗೆ ಕೇಂದ್ರ ಸರ್ಕಾರ 101.21 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ. ಈ ಯೋಜನೆಯಡಿ 44.74 ಕಿ.ಮೀ. ರಸ್ತೆಯನ್ನು ಅತ್ಯಾಧುನಿಕ ತಂತ್ರಜ್ಞಾನದಲ್ಲಿ ಅಭಿವೃದ್ಧಿ ಪಡಿಸಲಾಗುವುದು ಎಂದು ಸಂಸದರು ತಿಳಿಸಿರುವುದೂ ಸ್ವಾಗತಾರ್ಹ ಎಂದಿದ್ದಾರೆ.