ಸಿದ್ದಾಪುರದ ಎಂಎಚ್‌ಪಿಎಸ್ ಬಾಲಿಕೊಪ್ಪ ಶಾಲೆಯಲ್ಲಿ ತಾಲೂಕು ಮಟ್ಟದ ಸ್ಕೌಟ್ಸ್ ಮತ್ತು ಗೈಡ್ಸ್ ಶಿಕ್ಷಕರಿಗೆ ಆಯೋಜಿಸಿದ್ದ ಪುನಃಶ್ಚೇತನ ಶಿಬಿರವನ್ನು ಬಿಇಒ ಎಂ.ಎಚ್.ನಾಯ್ಕ ಉದ್ಘಾಟಿಸಿದರು. ಜಿ.ಜಿ. ಹೆಗಡೆ, ಎಂ.ಎನ್. ಪಂಡಿತ, ವಿನಾಯಕ ಧೀರನ್ ಇತರರಿದ್ದರು. 
ಉತ್ತರ ಕನ್ನಡ

ಸದೃಢತೆಗೆ ಸ್ಕೌಟ್ಸ್ ಮತ್ತು ಗೈಡ್ಸ್ ಸಹಕಾರಿ

ಸಿದ್ದಾಪುರ: ವಿದ್ಯಾರ್ಥಿಗಳ ಜೀವನ ಮೌಲ್ಯ, ಶಿಸ್ತು, ಸನ್ನಡತೆ, ದೈಹಿಕ ಸದೃಢತೆ ಕಾಪಾಡಿಕೊಳ್ಳಲು ಸ್ಕೌಟ್ಸ್ ಮತ್ತು ಗೈಡ್ಸ್ ಉತ್ತಮ ಸಹಕಾರಿಯಾಗಿದೆ. ತರಬೇತಿ ಪಡೆದ ಶಿಕ್ಷಕರು ಶಾಲೆಯಲ್ಲಿ ವಾರಕ್ಕೆ ಒಂದು ಅವಧಿಯಲ್ಲಿ ಮಕ್ಕಳಿಗೆ ಸ್ಕೌಟ್ಸ್ ಮತ್ತು ಗೈಡ್ಸ್ ಧ್ಯೇಯೋದ್ದೇಶಗಳನ್ನು ತಿಳಿಸಬೇಕು ಎಂದು ಬಿಇಒ ಎಂ.ಎಚ್.ನಾಯ್ಕ ಹೇಳಿದರು.
ಪಟ್ಟಣದ ಎಂಎಚ್‌ಪಿಎಸ್ ಬಾಲಿಕೊಪ್ಪ ಶಾಲೆಯಲ್ಲಿ ತಾಲೂಕು ಮಟ್ಟದ ಸ್ಕೌಟ್ಸ್ ಮತ್ತು ಗೈಡ್ಸ್ ಶಿಕ್ಷಕರಿಗೆ ಆಯೋಜಿಸಿದ್ದ ಪುನಃಶ್ಚೇತನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಎಂ.ವಿ. ನಾಯ್ಕ, ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ಆಯುಕ್ತ ಎಂ.ಎನ್. ಪಂಡಿತ, ಜಿಲ್ಲಾ ಸ್ಕೌಟ್ಸ್ ಗೈಡ್ಸ್ ಕಾರ್ಯದರ್ಶಿ ವಿನಾಯಕ ಧೀರನ್ ಮಾತನಾಡಿದರು. ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷೆ ಮಂಜುಳಾ ಪಟಗಾರ ರಾಜ್ಯ ಸ್ಕೌಟ್ಸ್ ಮತ್ತು ಗೈಡ್ಸ್ ಸಹಾಯಕ ಆಯುಕ್ತ ವೀರೇಶ ಮಾದರ ಉಪಸ್ಥಿತರಿದ್ದರು.
ತಾಲೂಕು ಸ್ಕೌಟ್ಸ್ ಮತ್ತು ಗೈಡ್ಸ್ ಕಾರ್ಯದರ್ಶಿ ಜಿ.ಜಿ. ಹೆಗಡೆ ಸ್ವಾಗತಿಸಿದರು. ಖಜಾಂಚಿ ಮಹೇಶ ಶೇಟ್ ನಿರೂಪಿಸಿದರು. ವಿ.ಟಿ. ನಾಯ್ಕ ವಂದಿಸಿದರು.