ಯಲ್ಲಾಪುರದ ಸರ್ಕಾರಿ ನೌಕರರ ಸಂಘದ (Government Employees Association)ನೂತನ ಕಟ್ಟಡಕ್ಕೆ ಭೂಮಿಪೂಜೆ ನೆರವೇರಿಸಿ, ಸಭಾ ಕಾರ್ಯಕ್ರಮವನ್ನು ಶಾಸಕ ಶಿವರಾಮ ಹೆಬ್ಬಾರ ಉದ್ಘಾಟಿಸಿದರು. ಎಂಎಲ್ಸಿ ಎಸ್.ವಿ. ಸಂಕನೂರು, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಾಕ್ಷರಿ, ಎಂ.ಜಗದೀಶ, ಸಂಜೀವಕುಮಾರ ಹೊಸ್ಕೇರಿ, ಮಲ್ಲಿಕಾರ್ಜುನ ಬಳ್ಳಾರಿ ಇತರರಿದ್ದರು.
- ಶಾಸಕ ಶಿವರಾಮ ಹೆಬ್ಬಾರ ಘೋಷಣೆ
- ಯಲ್ಲಾಪುರದಲ್ಲಿ ಕಟ್ಟಡ ನಿರ್ಮಾಣಕ್ಕೆ ಭೂಮಿಪೂಜೆ
- ಅಧಿಕಾರಿಗಳು, ಜನಪ್ರತಿನಿಧಿಗಳು ಒಟ್ಟಾಗಿ ಕಾರ್ಯನಿರ್ವಹಿಸಲಿ
ಯಲ್ಲಾಪುರ: ಅಧಿಕಾರಿಗಳು, ಜನಪ್ರತಿನಿಧಿಗಳು ಕೂಡಿ ಕಾರ್ಯ ನಿರ್ವಹಿಸಿದರೆ ಮಾತ್ರ (Government Employees Association) ಅಭಿವೃದ್ಧಿ ಕೆಲಸ ಸುಲಭವಾಗುತ್ತದೆ ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು.
ಪಟ್ಟಣದ ಸರ್ಕಾರಿ ನೌಕರರ ಸಂಘದ ಆವರಣದಲ್ಲಿ ಶನಿವಾರ ನೌಕರ ಸಂಘದ ನೂತನ ಕಟ್ಟಡದ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಹೊಸ ಕಟ್ಟಡದ ಕಾಮಗಾರಿಗೆ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ 10 ಲಕ್ಷ ರೂ. ನೀಡುವುದಾಗಿ ಘೋಷಿಸಿದರು.
ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರು ಮಾತನಾಡಿ, ಸಂಘದ ನೂತನ ಕಟ್ಟಡ ಕಾಮಗಾರಿಗೆ 5 ಲಕ್ಷ ರೂ. ಮೊದಲ ಹಂತದಲ್ಲಿ ನೀಡುವುದಾಗಿ ಭರವಸೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ ಮಾತನಾಡಿ, ಸರ್ಕಾರ ಹಾಗೂ ಸಂಘಟನೆಯಿಂದ ನೌಕರ ಸಂಘದ ನೂತನ ಕಟ್ಟಡಕ್ಕೆ 25 ಲಕ್ಷ ರೂ. ಕೊಡುವ ಪ್ರಯತ್ನ ಮಾಡುತ್ತೇನೆ. ನೌಕರರ ಪರವಾಗಿ ಸಂಘಟನೆ ಬದ್ಧತೆಯಿಂದ ಕೆಲಸ ಮಾಡುತ್ತಿದೆ ಎಂದರು.
ಹೆಚ್ಚುವರಿ ಎಸ್ಪಿ ಎಂ. ಜಗದೀಶ, ಸಂಘದ ರಾಜ್ಯ ಗೌರವಾಧ್ಯಕ್ಷ ಬಸವರಾಜ, ಸಂಘದ ತಾಲೂಕಾಧ್ಯಕ್ಷ ಸಂಜೀವಕುಮಾರ ಹೊಸ್ಕೇರಿ, ವಿವಿಧ ಸಂಘಟನೆಯ ಪ್ರಮುಖರಾದ ಮಲ್ಲಿಕಾರ್ಜುನ ಬಳ್ಳಾರಿ, ಸಿದ್ದನಗೌಡ ಧಾರವಾಡ, ಮೋಹನ ಕುಮಾರ, ಸಂಜೀವಕುಮಾರ ನಾಯ್ಕ, ಕಿರಣ ಕುಮಾರ ನಾಯ್ಕ, ವಿಜಯ ಮಿರಾಶಿ, ಆರ್.ಆರ್. ಭಟ್ಟ, ನಾರಾಯಣ ನಾಯಕ, ಎಸ್.ಆರ್. ನಾಯಕ, ಅಜೇಯ ನಾಯಕ, ಚಂದ್ರಶೇಖರ ಎಸ್.ಸಿ., ತಹಸೀಲ್ದಾರ್ ಚಂದ್ರಶೇಖರ ಹೊಸ್ಮನಿ, ಬಿಇಒ ರೇಖಾ ನಾಯ್ಕ, ಕಟ್ಟಡ ತಾಂತ್ರಿಕ ಇಂಜಿನಿಯರ್ ಶಿವಕುಮಾರ ನಾಯ್ಕ ಇತರರಿದ್ದರು.
ಸಂಘದ ಮಾಜಿ ಅಧ್ಯಕ್ಷರನ್ನು ಸನ್ಮಾನಿಸಲಾಯಿತು. ಸರ್ಕಾರಿ ನೌಕರರ ಪ್ರತಿಭಾವಂತ ಮಕ್ಕಳನ್ನು ಪುರಸ್ಕರಿಸಲಾಯಿತು. ಶಿಕ್ಷಕಿ ಸುವರ್ಣಲತಾ ಪ್ರಾರ್ಥಿಸಿದರು. ಶಿಕ್ಷಣ ಸಂಯೋಜಕ ಸುಧಾಕರ ನಾಯಕ, ಸಿಆರ್‌ಪಿ ಚಂದ್ರಹಾಸ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು.