ರೌಡಿಶೀಟರ್, rowdysheeters ಮೀಟರ್ ಬಡ್ಡಿ ದಂಧೆ ಮಾಡುತ್ತಾರೆಂದು ಮನೆಗಳ ಪರಿಶೀಲನೆ ನಡೆಸಿದ ಪೊಲೀಸರ ತಂಡ.
ಮುಂಡಗೋಡ: ತಾಲೂಕಿನ ರೌಡಿಶೀಟರ್ rowdysheeters ಹಾಗೂ ಅಕ್ರಮ ಬಡ್ಡಿ ವ್ಯವಹಾರ ಮಾಡುತ್ತಿದ್ದ 14 ಜನರ ಮನೆಗಳ ಮೇಲೆ ಪೊಲೀಸರು ದಾಳಿ ಮಾಡಿ ಮನೆ ಶೋಧ ನಡೆಸಿದಾಗ ಜಿಂಕೆಯ ಕೊಂಬು, ಚೆಕ್ ಹಾಗೂ ಬಾಂಡ್ ಸಿಕ್ಕ ಘಟನೆ ಬುಧವಾರ ನಡೆದಿದೆ.
ಬುಧವಾರ ಬೆಳಗ್ಗೆ ಶಿರಸಿ ಡಿವೈಎಸ್ಪಿ ಗೀತಾ ಪಾಟೀಲ ನೇತೃತ್ವದಲ್ಲಿ ರೌಡಿಶೀಟರ್ ಹಾಗೂ ಅಕ್ರಮ ಬಡ್ಡಿ ವ್ಯವಹಾರ ಮಾಡುವವರ ಮನೆಯ ಮೇಲೆ ದಾಳಿ ನಡೆಸಲಾಗಿದೆ.
ನೆಹರು ನಗರದ ತೌಸ್ಿ ಅಹ್ಮದ್ ಪಣಿಬಂದ ಎಂಬಾತನ ಮನೆಯ ಶೋಧ ನಡೆಸಿದಾಗ 8 ಚೆಕ್ ಹಾಗೂ ಬಾಂಡ್‌ಗಳು ಪತ್ತೆಯಾಗಿವೆ. ದೇಶಪಾಂಡೆ ನಗರದ ಮಹಮ್ಮದ್ ಇಸ್ಮಾಯಿಲ್ ಪಾನವಾಲೆ ಎಂಬಾತನ ಮನೆಯಲ್ಲಿ ಜಿಂಕೆ ಕೊಂಬು ಪತ್ತೆಯಾಗಿದ್ದು,ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇಂದಿರಾನಗರದ ಕಿರಣ ಸಾಳೇಂಕಿ, ಗಾಂಧಿನಗರದ ಮಂಜು ನವಲೆ, ಕಿಲ್ಲೆ ಓಣಿಯ ಮಲ್ಲಿಕ್ ಜಾನ (ಜಹೀರ) ಶೇಖ, ಇಂದಿರಾನಗರದ ಮಹಮ್ಮದ ಸಾಧಿಕ ಗಾಜೀಪೂರ, ಆನಂದ ನಗರದ ವಾಸಿಂಖಾನ ಬೆಂಡಿಗೇರಿ, ವೈ.ಬಿ. ರಸ್ತೆಯ ಮಕ್ಬುಲ್ ಅಹ್ಮದ ಯಳ್ಳೂರ, ಬಸ್ಸಾಪುರ ಗ್ರಾಮದ ಮದುಸಿಂಗ್ ರಜಪೂತ , ಕಂಬಾರಗಟ್ಟಿಯ ಮಂಜುನಾಥ ಹೋಟಕರ್, ಚವಡಳ್ಳಿ ಗ್ರಾಮದ ಮಹಮ್ಮದ ಇಬ್ರಾಹಿಂ (ರಫೀಕ) ಜಮಖಂಡಿ, ಕಿಲ್ಲೆ ಓಣಿಯ ಹರುಣ ಶೇಖ, ಮಹಮ್ಮದ ಯೂಸ್ ಗಡವಾಲೆ ಮತ್ತು ಗಾಂಧಿ ನಗರದ ಸಂಜು ನವಲೆ ಎಂಬಾತರ ಮನೆಯ ಮೇಲೆ ಪೊಲೀಸರು ಶೋಧ ಕಾರ್ಯಾಚರಣೆ ಮಾಡಿದ್ದಾರೆ.
ಶಿರಶಿ, ಬನವಾಸಿ ಯಲ್ಲಾಪುರ ಹಾಗೂ ಮುಂಡಗೋಡ ಪೊಲೀಸರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.