ಅಂಕೋಲಾದಲ್ಲಿ ಶುಕ್ರವಾರ ಏರ್ಪಡಿಸಿದ್ದ ರಸ್ತೆ ಸುರಕ್ಷತಾ ಜಾಗೃತಿ ಕಾರ್ಯಕ್ರಮದಲ್ಲಿ ನ್ಯಾ. ಪ್ರೀಯಾ ಜೊಗಳೇಕರ ಮಾತನಾಡಿದರು. ತಹಸೀಲ್ದಾರ್ ಡಾ.ಚಿಕ್ಕಪ್ಪ ನಾಯಕ, ಚಂದ್ರಶೇಖರ ಮಠಪತಿ, ಶಿಲ್ಪಾ ನಾಯ್ಕ, ಡಾ.ಜಗದೀಶ ನಾಯ್ಕ, ಮಂಜುನಾಥ ನಾಯ್ಕ, ಪ್ರತಿಮಾ ನಾಯ್ಕ, ಮಮತಾ ಕೆರೆಮನೆ, ನಿತ್ಯಾನಂದ ಕವರಿ, ಬಿ.ಡಿ.ನಾಯ್ಕ, ಉಮೇಶ ನಾಯ್ಕ ಇತರರಿದ್ದರು. 
ಉತ್ತರ ಕನ್ನಡ

ರಸ್ತೆ ಸುರಕ್ಷತೆ ಜಾಗೃತಿ ಪ್ರತಿಯೊಬ್ಬರಿಗೂ ಅವಶ್ಯ

ಅಂಕೋಲಾ: ದಿನೇ ದಿನೇ ಹೆಚ್ಚುತ್ತಿರುವ ಅಪಘಾತ ಪ್ರಮಾಣ ತಗ್ಗಿಸುವುದೇ ರಸ್ತೆ ಸುರಕ್ಷತಾ ಸಪ್ತಾಹದ ಉದ್ದೇಶ. ರಸ್ತೆ ಸುರಕ್ಷತೆಯ ಬಗ್ಗೆ ನಾಗರಿಕರು, ವಿದ್ಯಾರ್ಥಿಗಳು ಸೇರಿದಂತೆ ಪ್ರತಿಯೊಬ್ಬರಿಗೂ ಜಾಗೃತಿ ಅಗತ್ಯ ಎಂದು ಇಲ್ಲಿನ ಜೆಎಂಎಫ್‌ಸಿ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶೆ ಪ್ರೀಯಾ ರವಿ ಜೊಗಳೇಕರ ಹೇಳಿದರು.
ಪಟ್ಟಣದ ಸಾರಿಗೆ ಬಸ್ ನಿಲ್ದಾಣದ ಎದುರಿನಲ್ಲಿ ತಾಲೂಕು ಕಾನೂನು ಸಮಿತಿ, ತಾಲೂಕು ಆಡಳಿತ, ವಕೀಲರ ಸಂಘ, ಪೊಲೀಸ್ ಇಲಾಖೆ ಸೇರಿದಂತೆ ವಿವಿಧ ಇಲಾಖೆ ಸಂಯುಕ್ತಾಶ್ರ ಯದಲ್ಲಿ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ ಅಂಗವಾಗಿ ಶುಕ್ರವಾರ ಹಮ್ಮಿಕೊಂಡ ರಸ್ತೆ ಸುರಕ್ಷತಾ ಜಾಗೃತಿ ಅರಿವು ಜಾಥಕ್ಕೆ ಹಸಿರು ನಿಶಾನೆ ತೋರಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ತಹಸೀಲ್ದಾರ್ ಡಾ.ಚಿಕ್ಕಪ್ಪ ನಾಯಕ ಮಾತನಾಡಿ, ಹೆಲ್ಮೆಟ್ ರಹಿತ ಹಾಗೂ ಕುಡಿದ ಮತ್ತಿನಲ್ಲಿ ವಾಹನ ಚಾಲನೆ, ಮೊಬೈಲ್ ಬಳಕೆ, ಅತೀವೇಗದಿಂದ ಚಾಲನೆ ಮಾಡುವುದರಿಂದ ಅನೇಕ ಸಾವು ನೋವುಗಳು ಸಂಭವಿಸಿದ್ದು, ಇವುಗಳ ನಿಯಂತ್ರಣಕ್ಕೆ ಸವಾರರು ಸಹಕಾರ ನೀಡಬೇಕು ಎಂದರು.
ಎಪಿಪಿ ಅಣ್ಣಪ್ಪ ನಾಯ್ಕ, ಶಿಲ್ಪಾ ನಾಯ್ಕ, ಪಿಐ ಚಂದ್ರಶೇಖರ ಮಠಪತಿ, ಟಿಎಚ್‌ಒ ಡಾ. ಜಗದೀಶ ನಾಯ್ಕ, ತಾಪಂ ಇಒ ರಾಮು ಗುನಗಿ, ಸಾರಿಗೆ ಘಟಕ ವ್ಯವಸ್ಥಾಪಕ ಮಂಜುನಾಥ ಎಲ್. ನಾಯ್ಕ, ವಕೀಲರ ಸಂಘದ ಅಧ್ಯಕ್ಷೆ ಪ್ರತಿಮಾ ನಾಯ್ಕ, ಕಾರ್ಯದರ್ಶಿ ಮಮತಾ ಕೆರೆಮನೆ, ವಕೀಲರಾದ ನಿತ್ಯಾನಂದ ಕವರಿ, ಬಿ.ಡಿ. ನಾಯ್ಕ, ಉಮೇಶ ನಾಯ್ಕ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.