ರಾಮಪತ್ರೆ ಜಡ್ಡಿ  
ಉತ್ತರ ಕನ್ನಡ

ಬೇಡ್ತಿ, ಅಘನಾಶಿನಿ ನದಿ ತಿರುವಿನಿಂದ ರಾಮಪತ್ರೆ ಜಡ್ಡಿಗಳಿಗೆ ಆತಂಕ : ನರಸಿಂಹ ಹೆಗಡೆ

ಸುಭಾಸ ಹೆಗಡೆ ಧೂಪದಹೊಂಡ
ಶಿರಸಿ: ಬೇಡ್ತಿ ಅಘನಾಶಿನಿ ಕೊಳ್ಳದಲ್ಲಿ ಮಹೋರಗಗಳ ಕಾಲದ ರಾಮಪತ್ರೆ ಜಡ್ಡಿ ಕಾಡುಗಳು ಪಶ್ಚಿಮ ಘಟ್ಟದ ನದಿಗಳಿಗೆ ಶಾಶ್ವತವಾಗಿ ನೀರೊದಗಿಸುವ ಜಲ ಮೂಲಗಳಾಗಿವೆ. ಇಂತಹ ಅತ್ಯಂತ ಪ್ರಾಚೀನವಾದ ಅಪರೂಪದ 39 ರಾಮಪತ್ರೆ ಜಡ್ಡಿ ಕಾಡುಗಳು ಬೇಡ್ತಿ - ಅಘನಾಶಿನಿ ಕೊಳ್ಳದಲ್ಲಿದ್ದು, ನದಿ ತಿರುವು ಯೋಜನೆಯಿಂದ ಅವು ನಾಶವಾಗುವ ಆತಂಕ ಎದುರಾಗಿದೆ ಎಂದು ಲೈಫ್ ಸಂಸ್ಥೆ ಮುಖ್ಯಸ್ಥ, ಪರಿಸರ ತಜ್ಞ ಡಾ. ನರಸಿಂಹ ಹೆಗಡೆ ವಾನಳ್ಳಿ ಹೇಳಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಇಲ್ಲಿಗಷ್ಟೇ ಸೀಮಿತವಾಗಿ ಮತ್ತು ವಿನಾಶ ಭಯ ಎದುರಿಸುತ್ತಿರುವ ದಾಸಪತ್ರೆ, ರ‍್ಜನ್, ಒಂದAಕಿ, ಕೆಂಪು ನೇರಳೆ, ರಾಮ ಪತ್ರೆ, ಪಾಂಡವರ ಅಡಿಕೆ, ಕಿರಾಲು ಭೋಗಿ, ದಡಸಲು, ಉಪ್ಪಾಗೆ ಜಾತಿಯ ರ‍್ಸಿನಿಯಾ ರುಬ್ರೋ ಎಖಿನಾಟಾ ವೃಕ್ಷ ಪ್ರಭೇದಗಳಲ್ಲದೇ ಹಲವು ಬಗೆಯ ಪ್ರಾಣಿಗಳಿಗೂ ಸಹ ಇದು ಆಶ್ರಯ ತಾಣವಾಗಿದೆ. ಇವು ಮಣ್ಣು ಸವಕಳಿಯಾಗದಂತೆ ತಡೆಯುವುದು, ಪ್ರವಾಹದ ಅಪಾಯ ತಗ್ಗಿಸುವುದು, ಅರ‍್ಜಲ ಮರು ಪೂರಣ, ಅಸಂಖ್ಯ ಉಭಯವಾಸಿ ಜೀವಿಗಳಿಗೆ ಆವಾಸ ನೀಡುವೆ. ಬೇಡ್ತಿ ಕಣಿವೆಯಲ್ಲಿ ಈ ಕಾಡುಗಳನ್ನು ಕೆಲವೇ ರ‍್ಷಗಳ ಹಿಂದೆ ಸ್ನೇಹಕುಂಜ ಅಧ್ಯಯನಕಾರರ ತಂಡ ಗುರುತಿಸಿ ಪಾರಿಸಾರಿಕ ಪುನಶ್ಚೇತನ ಕೆಲಸವನ್ನು ಆರಂಭಿಸಿದ್ದನ್ನು ಇಲ್ಲಿ ನೆನಪಿಸಬಹುದಾಗಿದೆ ಎಂದಿದ್ದಾರೆ.
ಹುಲಿ ದೇವರ ಕಾಡು, ಜಟಕಾ, ರ‍್ಲು, ಚೌಡಿ, ಅಮ್ಮನವರು ಮುಂತಾಗಿ ದೇವರ ಕಾಡಿನ ರೂಪದಲ್ಲಿ ಶತಮಾನಗಳಿಂದ ಸ್ಥಳೀಯ ಜನರು ಸಂರಕ್ಷಣಾ ನಿಯಮಗಳನ್ನು ಪಾಲಿಸಿ ಈ ಕಾಡುಗಳ ರಕ್ಷಣೆಗೆ ಆದ್ಯತೆ ನೀಡಿರುವ ಉದಾಹರಣೆಗಳೂ ಸಾಕಷ್ಟಿವೆ.
‘ಹವಾಗುಣ ವೈಪರೀತ್ಯಗಳ ಹಿನ್ನೆಲೆಯಲ್ಲಿ ಹೆಚ್ಚು ಇಂಗಾಲ ಶೇಖರಿಸಿಡುವ ಸರ‍್ಥ್ಯ ಹೊಂದಿದ ವಿಶಿಷ್ಟ ಜೌಗು ಪ್ರದೇಶಗಳ ಕಾಡು ಇವಾಗಿದ್ದು ಇವುಗಳ ಸಂರಕ್ಷಣೆ ಮಾಡಬೇಕಾಗಿದ್ದು ಎಲ್ಲರ ರ‍್ತವ್ಯ. ಪಾರಿಸಾರಿಕ ಸೇವೆಗೆ ಧನ ಸಹಾಯ ನೀಡುವ ಅಥವಾ ಕಂಪನಿಗಳ ಸಾಮಾಜಿಕ ಜವಾಬ್ದಾರಿ ಅಡಿಯಲ್ಲಿನ ಹಣಕಾಸಿನ ನೆರವನ್ನು ಈ ಪ್ರದೇಶದ ಜನರಿಗೆ ನೀಡುವಂತಾಗ ಬೇಕೆಂದು’ ಇಸ್ರೋದ ಹಿರಿಯ ವಿಜ್ಞಾನಿ ಡಾ. ಗಿರೀಶ್ ಪೂಜಾರ್ ಅಭಿಪ್ರಾಯ ಪಟ್ಟಿದ್ದರು. ಈ ಪ್ರದೇಶಗಳ ಉಳಿವು ಪಾರಿಸಾರಿಕ ದೃಷ್ಠಿಯಿಂದ ಅತ್ಯಂತ ಮಹತ್ವದ್ದಾಗಿದೆ ಎಂದಿದ್ದಾರೆ.