ನಿವೃತ್ತ ಸೈನಿಕ ಬಸ್ತ್ಯಾಂವ ಬೃಗಾಂಜಾ
ಹಳಿಯಾಳ: ನಿವೃತ್ತ ಸೈನಿಕರೊಬ್ಬರು ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಧಾರವಾಡಕ್ಕೆ ಕರೆದೊಯ್ಯಲು ಸೂಕ್ತ ಸಮಯಕ್ಕೆ ಆಂಬುಲೆನ್ಸ್ ಸಿಗದ ಕಾರಣ ಅವರು ಮೃತಪಟ್ಟಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಬಸ್ತ್ಯಾಂವ ಸಂತಾನ ಬ್ರೀಗಾಂಜಾ(83)ಮೃತರು. ಭಾನುವಾರ ಬೆಳಗಿನಜಾವ ಅವರು ಅನಾರೋಗ್ಯದಿಂದ ಹಳಿಯಾಳ ಸರ್ಕಾರಿ ಆಸ್ಪತ್ರೆಗೆ ಆಗಮಿಸಿದ್ದರು. ಆದರೆ, ಅವರ ಸ್ಥಿತಿ ತೀವ್ರ ಗಂಭೀರವಾಗಿದ್ದು, ಧಾರವಾಡ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ಕರೆದೊಯ್ಯುವಂತೆ ಹಳಿಯಾಳ ವೈದ್ಯರು ತಿಳಿಸಿದ್ದರು. ಆದರೆ, ಸುಮಾರು 2 ತಾಸು ಕಾದರೂ 108 ಆಂಬುಲೆನ್ಸ್ ಬಂದೇ ಇಲ್ಲ. ಇದರಿಂದ ತಮ್ಮ ತಂದೆ ಮೃತಟ್ಟರು ಎಂದು ಮೃತದ ಪುತ್ರ ಬ್ರಿಜಿಟಾ ಬ್ರಿಗಾಂಜಾ ವಿಡಿಯೋ ಸಂದೇಶ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಬಸ್ತ್ಯಾಂವ ಅವರಿಗೆ ಹೃದಯಾಘಾತವಾಗಿತ್ತು. ಬೆಳಗ್ಗೆ 4 ಗಂಟೆ ಸುಮಾರಿಗೆ ಅವನ್ನು ಆಸ್ಪತ್ರೆಗೆ ಕರೆತರಲಾಗಿದೆ ಎಂಬ ಮಾಹಿತಿ ಇದೆ. ಹಳಿಯಾಳ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗೆ ಧಾರವಾಡ ಆಸ್ಪತ್ರೆಗೆ ರೆಫರ್ ಮಾಡಲಾಗಿತ್ತು. ಹಳಿಯಾಳದ ಆಸ್ಪತ್ರೆಯಲ್ಲಿ ಎರಡು ಆಂಬುಲೆನ್ಸ್ಗಳಿದ್ದು, ಒಂದು ಆಂಬುಲೆನ್ಸ್ ಅನಾರೋಗ್ಯ ಪೀಡಿತ ಮಗುವನ್ನು ಕರೆದುಕೊಂಡು ಧಾರವಾಡಕ್ಕೆ ಹೋಗಿತ್ತು. ಇನ್ನೊಂದು ಹಾಳಾಗಿದೆ. ಇದರಿಂದ 108 ಗೆ ಕರೆ ಮಾಡಿದರೆ ಅದೂ ಬರಲು ವಿಳಂಬವಾಯಿತು ಎಂಬ ಆರೊಪ. ಈ ಬಗ್ಗೆ ತನಿಖೆ ನಡೆಸಿ, ವರದಿ ನೀಡಲು ಹಳಿಯಾಳಾ ತಾಲೂಕು ಆರೋಗ್ಯಾಽಕಾರಿಗಳಿಗೆ ಹೇಳಿದ್ದೇನೆ. ಅಲ್ಲದೇ 108 ಆಂಬುಲೆನ್ಸ್ ಜಿಲ್ಲಾ ಸಂಯೋಜಕರನ್ನೂ ಕರೆಸಿ ಮಾತನಾಡಿದ್ದೇನೆ ಎಂದು ಡಿಎಚ್‌ಒ ಡಾ.ಶಂಕರ ರಾವ್ ತಿಳಿಸಿದ್ದಾರೆ.
ಆಂಬುಲೆನ್ಸ್ನಲ್ಲಿ ಮನೆಯ ಸಾಮಗ್ರಿ
ಕಾರವಾರ: ಹಳಿಯಾಳದಲ್ಲಿ ನಿವೃತ್ತ ಸೈನಿಕ ಸೂಕ್ತ ಸಮಯಕ್ಕೆ ಆಂಬುಲೆನ್ಸ್ ಸಿಗದೇ ಮೃತಪಟ್ಟಿರುವುದು, ಜಿಲ್ಲೆಯಲ್ಲಿ ಆಂಬುಲೆನ್ಸ್ಗಳ ಕೊರತೆಯನ್ನು ತೋರಿಸುತ್ತದೆ. ಇನ್ನೊಂದೆಡೆ ಇನ್ನೊಂದೆಡೆ ಆಂಬುಲೆನ್ಸ್ ಒಂದರಲ್ಲಿ ಮನೆಯ ಸಾಮಗ್ರಿಗಳನ್ನು ತುಂಬಿಕೊAಡು ಹೋಗುತ್ತಿರುವ ಘಟನೆ ನಗರದಲ್ಲಿ ಭಾನುವಾರ ಬೆಳಕಿಗೆ ಬಂದಿದೆ.
ಕರ್ನಾಟಕ ವಕ್ಪ ಮಂಡಳಿ ಹೆಸರಿರುವ ಆಂಬುಲೆನ್ಸ್ನಲ್ಲಿ ಮನೆಯ ಸಾಮಗ್ರಿಗಳನ್ನು ತುಂಬಿಕೊಂಡು ಹೋಗುತ್ತಿರುವುದನ್ನು ಕಂಡ ಸಾರ್ವಜನಿಕರು ಅದನ್ನು ತಡೆದು ಪ್ರಶ್ನಿಸಿದ ಘಟನೆ ಭಾನುವಾರ ನಡೆದಿದೆ. 2024 ರಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಿಗೆ ವಕ ಮಂಡಳಿ ಆಂಬುಲೆನ್ಸ್ ನೀಡಿದೆ. ಬಡವರಿಗೆ ತುರ್ತು ಚಿಕಿತ್ಸೆಗೆ ಅನುಕೂಲವಾಗುವಂತೆ ಕಡಿಮೆ ಬೆಲೆಯಲ್ಲಿ ಸೇವೆ ಒದಗಿಸುವುದು ಅದರ ಉದ್ದೇಶ. ವಕ್ಪ ಅಡಿ ಇರುವ ಖಾಸಗಿ ಸಂಸ್ಥೆಗಳಿಗೆ ಅದನ್ನು ನಡೆಸಲು ನೀಡಲಾಗಿದೆ. ಆದರೆ, ಅದು ಸಾರ್ವಜನಿಕ ಸೇವೆಯ ಬದಲು ಖಾಸಗಿ ಸೇವೆ ಮಾಡುತ್ತಿರುವುದು ಬಯಲಾಗಿದೆ.