ಮುಂಡಗೋಡ ತಾಲೂಕಿನ ಇಂದೂರ ಸೇವಾ ಸಹಕಾರಿ ಸಂಘದ ನೂತನ ಕೊಠಡಿ ಉದ್ಘಾಟನಾ ಸಮಾರಂಭದಲ್ಲಿ ಶಾಸಕ ಶಿವರಾಮ ಹೆಬ್ಬಾರ ಮಾತನಾಡಿದರು. ರವಿಗೌಡ ಪಾಟೀಲ, ಎಚ್.ಎಂ.ನಾಯ್ಕ. ಯಮನಪ್ಪ ಮಾರಿಂಬಿಡ, ಇತರರಿದ್ದರು. 
ಉತ್ತರ ಕನ್ನಡ

ನಿಗದಿತ ಸಮಯಕ್ಕೆ ಸಾಲ ಮರುಪಾವತಿಸಿ Loan

ವಿನಯ ಹೆಗಡೆ
ಮುಂಡಗೋಡ: ಸಂಘಗಳಿಂದ ಸಾಲ (Loan) ಪಡೆಯುವ ಪ್ರತಿಯೊಬ್ಬ ರೈತರು ಹಾಗೂ ಸಾರ್ವಜನಿಕರು ನಿಗದಿತ ಸಮಯಕ್ಕೆ ಸರಿಯಾಗಿ ಸಾಲ ಮರುಪಾವತಿ ಮಾಡಿದರೆ ಸಂಘಗಳ ಬೆಳೆವಣಿಗೆಗೆ ಅನುಕೂಲವಾಗಲಿದೆ ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು.
ತಾಲೂಕಿನ ಇಂದೂರ ಗ್ರಾಮದಲ್ಲಿ ಬುಧವಾರ ವ್ಯವಸಾಯ ಸೇವಾ ಸಹಕಾರಿ ಸಂಘದ ನೂತನ ಕೊಠಡಿ ಉದ್ಘಾಟಿಸಿ ಅವರು ಮಾತನಾಡಿದರು.
ಆರಂಭದಲ್ಲಿ ಸಣ್ಣ ಪ್ರಮಾಣದಲ್ಲಿದ್ದ ಇಂದೂರ ಸಹಕಾರಿ ಸಂಘ ಇಂದು ಹೆಮ್ಮರವಾಗಿ ಬೆಳೆದು ನಿಂತಿದೆ. ನಮ್ಮ ಕೆಡಿಸಿಸಿ ಬ್ಯಾಂಕ್ ನಿಂದ ಈ ಸಂಘಕ್ಕೆ ಕೋಟ್ಯಂತರ ರೂಪಾಯಿ ಸಾಲ ನೀಡಲಾಗಿದೆ.
ಸಂಘದ ಮಾಜಿ ಅಧ್ಯಕ್ಷರುಗಳಿಗೆ ಸನ್ಮಾನಿಸಲಾಯಿತು. ಇಂದೂರ ಪಂಚಾಯಿತಿ ಅಧ್ಯಕ್ಷ ಫಕೀರೇಶ ತಾವರಗೇರಿ, ಉಪಾಧ್ಯಕ್ಷೆ ಲಕ್ಷ್ಮೀ ಹರ್ತಿ, ರವಿಗೌಡ ಪಾಟೀಲ, ಕೃಷ್ಣ ಹಿರಳ್ಳಿ, ಎಚ್.ಎಂ. ನಾಯ್ಕ, ಶಾರದಾ ರಾಠೋಡ, ಬಿ.ಕೆ. ಪಾಟೀಲ, ಕೆಂಜೋಡಿ ಗಲಬಿ, ಯಮನಪ್ಪ ಮಾರಿಂಬಿಡ, ದೇವು ಪಾಟೀಲ, ಸದಸ್ಯರು ಸಿಬ್ಬಂದಿಗಳಿದ್ದರು.