ಸಾಂದರ್ಭಿಕ ಚಿತ್ರ  co-oparative socity
ಉತ್ತರ ಕನ್ನಡ

ಈ ಸಂಘಗಳ ನೋಂದಣಿ ಶೀಘ್ರ ರದ್ದು

ಕಾರವಾರ: ಇಲ್ಲಿನ ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಚೇರಿಯಲ್ಲಿ ಬರುವ ವಿವಿಧ ಸಹಕಾರ ಸಂಘಗಳ ನೋಂದಣಿ ರದ್ದತಿಗೆ ಸಹಕಾರ ಸಂಘಗಳ ಇಲಾಖೆ ಕ್ರಮ ವಹಿಸಿದೆ.

ಈ ಕುರಿತು ಸಹಕಾರ ಸಂಘಗಳ ಸಹಾಯಕ ನಿಬಂಧಕರು ಪತ್ರಿಕಾ ಹೇಳಿಕೆ ನೀಡಿದ್ದಾರೆ. ಕಾರವಾರದ ಕೆನರಾ ವಿವಿದೋದ್ದೇಶ ಸಹಕಾರಿ ಸಂಘ, ಶ್ರೀ ವಿಜಯಲಕ್ಷ್ಮೀ ಮಹಿಳಾ ವಿವಿದ್ದೋದ್ದೇಶ ಸಹಕಾರಿ ಸಂಘ, ಸುವರ್ಣಕಾರರ ಕೈಗಾರಿಕಾ ಸಹಕಾರ ಸಂಘ, ಕಾರವಾರ ಮಹಿಳಾ ಔದ್ಯೋಗಿಕ ಸಹಕಾರಿ ಸಂಘ, ದೇವಭಾಗ-ಕಣಸಗಿರಿ ಮೀನುಗಾರರ ಮಹಿಳಾ ಸಹಕಾರ ಸಂಘ, ನವಸಾಕ್ಷರ ಮಹಿಳಾ ವಿವಿದೋದ್ದೇಶ ಸಹಕಾರ ಸಂಘ, ಕೆರವಡಿಯ ಶ್ರೀ ಸಾತೇರಿ ಮಲ್ಟಿರ‍್ಪಸ್ ಕೋ ಆಪ್ರೇಟಿವ್ ಸೊಸೈಟಿ, ಚಿತ್ತಾಕುಲಾದ ಬಿಣಗಾ ಮೀನುಗಾರರ ಸಹಕಾರ ಸಂಘ, ಕಾರವಾರದ ಗೌರ್ನಮೆಂಟ್ ನೌಕರರ ಸಜ್ಜೆಶ್ವರ ಹೌಸಿಂಗ್ ಕೋ ಆಪ್ ಸೊಸೈಟಿ, ಜೊಯಿಡಾದ ಮಾವಳಿಂಗ ಗಂಗಾ ಕಲ್ಯಾಣ ಯೋಜನಾ ಫಲಾನುಭವಿಗಳ ಸಹಕಾರ ಸಂಘ, ಆನ್ಮಿ ಕುಣಬಿ ವಿವಿದೋದ್ದೇಶಗಳ ಸಹಕಾರ ಸಂಘ, ಹಳಿಯಾಳ ಸಾಂಬ್ರಾಣಿ ಅರಣ್ಯ ನಿವಾಸಿಗಳ ಅರಣ್ಯ ಉತ್ಪತ್ತಿ ಶೇಖರಣೆ ಗುತ್ತಿಗೆ ಮಾರಾಟ ಸಹಕಾರ ಸಂಘ, ದಾಂಡೇಲಿಯ ಗೋಪಾಲ ಡೇರಿ ಆಂಡ್ ಮಲ್ಪಿಪರ್ಪಸ್ ಕೋ ಆಪ್ ಸೊಸೈಟಿ, ಬಂಗೂರನಗರ ಸಹಕಾರ ಸಂಘಗಳು ತಮ್ಮ ನೋಂದಾಯಿತ ಸ್ಥಳಗಳಲ್ಲಿ ಕಾರ್ಯನಿರ್ವಹಿಸುತ್ತಿಲ್ಲ ಎಂದಿದ್ದಾರೆ.

ಅವುಗಳ ಆಡಳಿತ ಮಂಡಳಿ ಸದಸ್ಯರು ಹಾಗೂ ಕಾರ್ಯದರ್ಶಿ ಯಾರು ಎನ್ನುವ ಬಗ್ಗೆ ಮಾಹಿತಿ ಲಭ್ಯವಿರುವುದಿಲ್ಲ. ಅಲ್ಲದೇ ಹಲವು ವರ್ಷಗಳಿಂದ ಈ ಸಂಘಗಳ ವ್ಯವಹಾರಗಳ ಲೆಕ್ಕ ಪರಿಶೋಧನೆ ಆಗಿಲ್ಲ. ಹಾಗಾಗಿ ಈ ಸಹಕಾರ ಸಂಘಗಳಲ್ಲಿ ಯಾವುದೇ ವ್ಯಕ್ತಿಗಳಿಗೆ ಅಥವಾ ವ್ಯಕ್ತಿಗಳಿಂದ ಕೊಡತಕ್ಕ ಅಥವಾ ಬರತಕ್ಕ ಹಣವೇನಾದರೂ ಇದ್ದಲ್ಲಿ ಸೂಕ್ತ ದಾಖಲೆಗಳೊಂದಿಗೆ ತಮ್ಮ ಕಚೇರಿ ಸಂಪರ್ಕಿಸುವಂತೆ ಕೋರಿದ್ದಾರೆ. ಇನ್ನು ಕೆಲವು ದಿನಗಳ ಒಳಗೆ ಸಂಪರ್ಕಿಇಲ್ಲವೆಂದು ಭಾವಿಸಿ ಈ ಸಂಘಗಳ ನೋಂದಣಿ ರದ್ದತಿಗೆ ಕ್ರಮ ವಹಿಸಲಾಗುವುದು ಎಂದಿದ್ದಾರೆ.