ಮಾದನಗೇರಿಯ ಭೈರವ ಹರಿಕಂತ್ರ ಅವರು ದೊಡ್ಡ ಏಡಿ ಪ್ರದರ್ಶಿಸಿದರು.
ಗೋಕರ್ಣ: ಬಹುಬೇಡಿಕೆ ಪಡೆದಿರುವ ಅತಿ ಅಪರೂಪದ, ಬೃಹತ್ ಗಾತ್ರ ಮತ್ತು ತೂಕದ ಸಮುದ್ರ ಏಡಿ (SEA CRAB)) ಇಲ್ಲಿನ ಮಾದನಗೇರಿಯ ಗಜನಿ ಭೂಮಿಯಲ್ಲಿ ಭಾನುವಾರ ಪತ್ತೆಯಾಗಿದೆ.
ಸಾಮಾನ್ಯವಾಗಿ ಕೆಲವೇ ಗ್ರಾಂ ಗಾತ್ರದಲ್ಲಿ ಬೆಳೆಯವ ಏಡಿಗಳ ಜಾತಿಗೆ ಸೇರಿರುವ ಈ ಸಮುದ್ರ ಏಡಿ ಬರೋಬ್ಬರಿ ಮೂರು ಕಿಲೋ ಇನ್ನೂರು ಗ್ರಾಂ ತೂಗಿ ಅಚ್ಚರಿ ಮೂಡಿಸಿದೆ. ವಿಶೇಷವಾಗಿ ಸಮುದ್ರ ಬಳಿಯ ಕಲ್ಲು ಬಂಡೆ ಮತ್ತು ಸಮುದ್ರ-ನದಿ ಸಂಗಮದ ಹಿನ್ನೀರಿನ ಜಾಗಗಳಲ್ಲಿ ಸಂತಾನೋತ್ಪತ್ತಿ ನಡೆಸುವ ಏಡಿಗಳನ್ನು ಕಲ್ಲು ಜೆಂಜಿ ಎಂದು ಕರೆಯಲಾಗುತ್ತದೆ. ಸ್ಥಳೀಯವಾಗಿ ಜಿಲ್ಲೆಯಲ್ಲಿ ಇದನ್ನು ಏಡಿ ಎಂದೇ ಹೆಸರಿಸಲಾಗುತ್ತದೆ.
ವಿದೇಶಗಳಿಗೆ ರ್ತು: ಕ್ಯಾಲ್ಸಿಯಂ ಧಾತುವಿನಿಂದ ಭರಪೂರವಾಗಿರುವ ಭಾರತೀಯ ಕ್ರಾೃಬ್ ಅಥವಾ ಏಡಿಗಳಿಗೆ ವಿದೇಶದಲ್ಲಿಯೂ ಬಹು ಬೆಲೆ ಮತ್ತು ಭಾರಿ ಬೇಡಿಕೆಯಿದೆ. ವಿಶೇಷವಾಗಿ ಏಷ್ಯಾ ದೇಶಗಳಾದ ಸಿಂಗಾಪುರ, ಮಲೇಷಿಯಾ, ಥೈಲ್ಯಾಂಡ್ ಮತ್ತಿತರ ದೇಶಗಳಿಗೆ ಇದನ್ನು ರಫ್ತು ಮಾಡಲಾಗುತ್ತದೆ. ನದಿಗಳ ಸಿಹಿ ಮತ್ತು ಸಾಗರದ ಕ್ಷಾರ ನೀರಿನಲ್ಲಿ ಬೆಳೆಯುವ ಏಡಿಗಳ ಪೈಕಿ, ಕ್ಷಾರ ನೀರಿನ ಏಡಿಗಳಿಗೆ ಮಾತ್ರ ಬಹುಬೇಡಿಕೆ ಹಾಗೂ ಹೆಚ್ಚಿನ ದರವಿದೆ.
ಹಿನ್ನೀರಿನ ಬೆಳೆ: ನದಿ ಮತ್ತು ಸಮುದ್ರ ಸಂಧಿಸುವ ಕ್ಷಾರಯುಕ್ತ ಹಿನ್ನೀರು ಭಾಗಗಳು ಈ ಸಮುದ್ರ ಜಾತಿಯ ಏಡಿಗಳ ತಾಣಗಳಾಗಿವೆ. ಇಲ್ಲಿನ ಅಘನಾಶಿನಿ ನದಿ ಹಿನ್ನೀರಿನ ಹೊಸ್ಕಟ್ಟ, ತದಡಿ, ಅಘನಾಶಿನಿ, ಮಾದನಗೇರಿಯ ಖಾರ್‌ಲ್ಯಾಂಡ್‌ಗಳು (ಗಜನಿ ಭೂಮಿ) ಸಮುದ್ರ ಏಡಿಯ ಕಾಯಂ ತಾಣ.
ಮಾದನಗೇರಿಯ ಅತ್ಯಂತ ಮೆತ್ತನೆಯ ಸಾರ ಮತ್ತು ಕ್ಷಾರಯುಕ್ತ ಗಜನಿ ಭೂಮಿಯಲ್ಲಿ ಇಂತಹ ಏಡಿಗಳ ಸಾಕಣಿಕೆ ನಡೆಸುತ್ತಿರುವ ಭೈರವ ನಾಗಪ್ಪ ಹರಿಕಂತ್ರ ಅವರ ಾರ್ಮ್‌ನ ಭೂತಳದಲ್ಲಿ ಬೆಳೆದು ಮನೆ ಮಾಡಿದ್ದ ಈ ಕಲ್ಲು ಏಡಿ ಭಾನುವಾರ ಅವರ ಕಣ್ಣಿಗೆ ಬಿದ್ದು ಜಾಲತಾಣಗಳಲ್ಲೂ ವೈರಲ್ ಆಗಿದೆ.