ಕಾರವಾರದಲ್ಲಿ ಭಾರಿ ಮಳೆ ಸುರಿಯಿತು.  
ಉತ್ತರ ಕನ್ನಡ

ಕಾರವಾರ ಪ್ರವೇಶಿಸಿದ ಮುಂಗಾರು

ಸುಭಾಸ ಹೆಗಡೆ ಧೂಪದಹೊಂಡ
ಕಾರವಾರ ಪ್ರವೇಶಿಸಿದ ಮಾನ್ಸೂನ್
ಕಾರವಾರ: ನೈರುತ್ಯ ಮಾನ್ಸೂನ್ ಉತ್ತರ ಕನ್ನಡ ಜಿಲ್ಲೆಯನ್ನು ಪ್ರವೇಶಿಸಿದ್ದು, ಕಾರವಾರದಲ್ಲಿ ಭಾರಿ ಮಳೆಯಾಗಿದೆ. ಬುಧವಾರ ರಾತ್ರಿ ಸಣ್ಣದಾಗಿ ಪ್ರಾರಂಭವಾದ ಮಳೆ ಗುರುವಾರ ರಾತ್ರಿಯವರೆಗೂ ನಿರಂತರವಾಗಿ ಮುಂದುವರಿಯಿತು. ಇದರಿಂದ ತಗ್ಗು ಸ್ಥಳಗಳು ಜಲಾವೃತವಾದವು.ಭಾರಿ ಸೆಕೆಯಿಂದ ತುಂಬಿದ್ದ ಕಾರವಾರದಲ್ಲಿ ಒಂದೇ ದಿನದ ಮಳೆ ತಂಪಿನ ವಾತಾವರಣ ಸೃಷ್ಟಿಸಿದೆ. ಜಿಲ್ಲೆಯ ಇತರ ತಾಲೂಕುಗಳಲ್ಲಿ ಆಗಾಗ ಸಣ್ಣ ಮಳೆಯಾಗಿದೆ.
ಜಿಲ್ಲೆಯಲ್ಲಿ ಜೂನ್ 8 ರವರೆಗೆ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಆರೇಂಜ್ ಅಲರ್ಟ್ ಘೋಷಿಸಲಾಗಿದೆ. ಈ ಅವಽಯಲ್ಲಿ ಗಾಳಿಯ ವೇಗವು ಗಂಟೆಗೆ 40 ರಿಂದ 60 ಕಿಮೀ ವೇಗದಲ್ಲಿ ಹೆಚ್ಚಲಿದೆ. ಈ ಅವಧಿಯಲ್ಲಿ ಮೀನುಗಾರರು ಸಮುದ್ರಕ್ಕೆ ಇಳಿಯಬಾರದು ಎಂದು ಮುನ್ಸೂಚನೆ ನೀಡಲಾಗಿದೆ.

ಯಲ್ಲಾಪುರ

ಯಲ್ಲಾಪುರ:
ತಾಲೂಕಿನಲ್ಲಿ ಕಳೆದ ಎರಡು ದಿನಗಳಿಂದ ಬಿಟ್ಟು, ಬಿಟ್ಟು ಸುರಿಯುತ್ತಿದ್ದು, ದೇಹಳ್ಳಿ ಭಾಗದಲ್ಲಿ ಗಾಳಿ‌ ಮಳೆಯ ಅಬ್ಬರ ನಷ್ಟದ ಮುನ್ನುಡಿ ಬರೆದಿದೆ.
ಗಾಳಿ ಮಳೆಯ ಹೊಡೆತಕ್ಕೆ ತಾಲೂಕಿನ ದೇಹಳ್ಳಿ ಗ್ರಾಪಂ ವ್ಯಾಪ್ತಿಯ ಕಣ್ಣುಪಾಲಿನಲ್ಲಿ ವ್ಯಾಪಕ ಹಾನಿ ಉಂಟಾಗಿದೆ. ಪರಮೇಶ್ವರ ಭಟ್ಟ ಅವರ‌ ಮನೆಯ ಮೇಲೆ ಮರಬಿದ್ದು, ಹಾನಿ ಯಾಗಿದೆ. ವಿ ಜಿ ಭಟ್ಟ ಅವರ ತೋಟದಲ್ಲಿ ಅಡಿಕೆ ಮರಗಳು ಮುರಿದು ಬಿದ್ದಿವೆ. ತೆಂಗು ಬಾಳೆ ಗಿಡಗಳೂ ನೆಲಕಚ್ಚಿವೆ.
ಅಲ್ಲದೇ ಸುತ್ತ ಮುತ್ತ ಮಳೆಗಾಲದ ಸಲುವಾಗಿ ಅಂಗಳದಲ್ಲಿ ಹಾಕಿದ್ದ ಚಪ್ಪರದ ತಗಡು,ಪ್ಲಾಸ್ಟಿಕ್ ಹಾರಿಹೋಗಿ,ಪುನ:
ಸಿದ್ದತೆ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಕಂದಾಯ ಇಲಾಖೆಯ ಅಧಿಕಾರಿಗಳು ಹಾನಿಯ ಪರಿಶೀಲಿಸಿದ್ದಾರೆ.