ಪ್ರತಿಭಟನೆಗೆ ಹರಿದು ಬಂದ ಜನಸ್ತೋಮ 
ಉತ್ತರ ಕನ್ನಡ

ಮುರಿನಕಟ್ಟೆ ಧ್ವಂಸ ಖಂಡಿಸಿ ಪ್ರತಿಭಟನೆ

ಪ್ರಮುಖ ಮುಖ್ಯಾಂಶಗಳು

  • ಮತಾಂಧ ಶಕ್ತಿಗಳ ನಿಗ್ರಹಕ್ಕೆ ಆಗ್ರಹ
  • ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಒತ್ತಾಯ
ಭಟ್ಕಳ: ಹಿಂದೂಗಳ ಧಾಮಿರ್ಕ ಭಾವನೆಗೆ ಧಕ್ಕೆ ತಂದಿರುವ ಭಟ್ಕಳದ ಮುರಿನಕಟ್ಟೆ ಧ್ವಂಸ ಟನೆಯನ್ನು ಖಂಡಿಸಿ ಶುಕ್ರವಾರ ಹಿಂದೂ ಸಂಟನೆಗಳ ಒಕ್ಕೂಟದ ನೇತೃತ್ವದಲ್ಲಿ ಬೃಹತ್​ ಪ್ರತಿಭಟನೆ ಹಾಗೂ ಮೆರವಣಿಗೆ ನಡೆಯಿತು. ಪ್ರತಿಭಟನಾಕಾರರು ಭಟ್ಕಳ ಉಪವಿಭಾಗಾಧಿಕಾರಿ ಜೆ. ಮಹೇಶ್​ ಅವರಿಗೆ ಮನವಿ ಸಲ್ಲಿಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದರು.
ಪ್ರತಿಭಟನೆಯನ್ನುದ್ದೇಶಿಸಿ ಹಿಂದೂ ಜಾಗರಣ ವೇದಿಕೆಯ ದಣ ಪ್ರಾಂತ ಕಾರ್ಯದಶಿರ್ ಶ್ರೀಕಾಂತ ಶೆಟ್ಟಿ ಕಾರ್ಕಳ ಮಾತನಾಡಿ, ಮುರಿನಕಟ್ಟೆ ಧ್ವಂಸ ಕೇವಲ ಹಿಂದೂಗಳ ಧಾಮಿರ್ಕ ನಂಬಿಕೆಗಳ ಮೇಲಿನ ದಾಳಿಯಲ್ಲ, ಅದು ಪೊಲೀಸ್​ ಇಲಾಖೆ ಹಾಗೂ ಕಾನೂನು ವ್ಯವಸ್ಥೆಯ ಮೇಲಿನ ನೇರ ದಾಳಿಯಾಗಿದೆ. ಖಾಕಿ ಧರಿಸಿದ ಪೊಲೀಸ್​ ಅಧಿಕಾರಿಯ ಮೇಲೆಯೇ ದಾಳಿ ನಡೆಸಿರುವ ಮತಾಂಧ ಶಕ್ತಿಗಳು, ನಾಳೆ ಸಾಮಾನ್ಯ ಹಿಂದೂಗಳ ಮೇಲೆ ದಾಳಿ ಮಾಡುವುದಿಲ್ಲ ಎಂಬ ಭರವಸೆ ಯಾರಿಗೆ ಇದೆ? ಎಂದು ಪ್ರಶ್ನಿಸಿದರು. ಟನೆಗೆ ಕಾರಣರಾದ ಮುಸ್ಲಿಂ ಸಂಟನೆಗಳ ಮುಖಂಡರನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿದರು.
ಮತಾಂಧ ಶಕ್ತಿಗಳನ್ನು ನಿಯಂತ್ರಿಸಲು ಪೊಲೀಸ್​ ಇಲಾಖೆ ವಿಫಲವಾದರೆ 1993ರಂತಹ ಟನೆಗಳು ಮರುಕಳಿಸುವ ಅಪಾಯವಿದೆ. ಭಟ್ಕಳವನ್ನು ಸರಿದಾರಿಗೆ ತರುವ ಕೆಲಸವನ್ನು ಸರ್ಕಾರ ಮಾಡದಿದ್ದರೆ, ಅದನ್ನು ಮಾಡಲು ಹಿಂದೂ ಸಮಾಜ ಸಿದ್ಧವಿದೆ ಎಂದು ಎಚ್ಚರಿಕೆ ನೀಡಿದರು.
ಜಗನ್ನಾಥ ಶೆಟ್ಟಿ ನ್ಯಾಯಮೂತಿರ್ ಆಯೋಗದ ವರದಿಯನ್ನು ಉಲ್ಲೇಖಿಸಿದ ಶ್ರೀಕಾಂತ ಶೆಟ್ಟಿ, ಭಟ್ಕಳದ ಕುರಿತು ವರದಿಯಲ್ಲಿ ಗಂಭೀರ ಸಂಗತಿಗಳನ್ನು ದಾಖಲಿಸಲಾಗಿದೆ. ಭಯೋತ್ಪದಕ ಚಟುವಟಿಕೆಗಳಿಗೆ ನಂಟು ಹೊಂದಿದ ಐಎಸ್​ಐ ಸಂಪರ್ಕವಿದೆ, ಇಂಡಿಯನ್​ ಮುಜಾಹಿದ್ದೀನ್​ ಭಟ್ಕಳದಲ್ಲೆ ಹುಟ್ಟಿ ದೇಶದಾದ್ಯಂತ ಮಾರಣಹೋಮ ನಡೆಸುತ್ತಿದೆ ಎಂದು ಆರೋಪಿಸಿದ ಅವರು ಇಂತಹ ಬೆಳವಣಿಗೆಗಳನ್ನು ಗಂಭೀರವಾಗಿ ಪರಿಗಣಿಸಬೇಕಿದೆ ಎಂದರು.
ವಿಶ್ವ ಹಿಂದೂ ಪರಿಷತ್​ ಉತ್ತರ ಪ್ರಾಂತ ಸಂಚಾಲಕ ಪುಂಡಲೀಕ ದಳವಾಯಿ ಮಾತನಾಡಿ, ರಾಜ್ಯದ ವಿವಿಧ ಭಾಗಗಳ ವಿಶ್ವ ಹಿಂದೂ ಪರಿಷತ್​ ಹಾಗೂ ಭಜರಂಗದಳದ ಕಾರ್ಯಕರ್ತರು ಕಟ್ಟೆ ಮರುಸ್ಥಾಪನೆಗೆ ಸಿದ್ಧರಿದ್ದರು. ಆದರೆ ಹಿರಿಯರ ಸಲಹೆಗೆ ಗೌರವ ನೀಡಿ ಸಂಯಮ ವಹಿಸಿದ್ದೇವೆ ಹೊರತು ಯಾರಿಗೂ ಹೆದರಿ ಅಲ್ಲ ಎಂದು ಹೇಳಿದರು.
ವಿಶ್ವ ಹಿಂದೂ ಪರಿಷತ್​ ಭಟ್ಕಳ ಟಕದ ಅಧ್ಯಕ್ಷ ರಾಮಕೃಷ್ಣ ನಾಯ್ಕ ಮಾತನಾಡಿದರು. ಹಿಂದೂ ಜಾಗರಣ ವೇದಿಕೆಯ ಕಾರ್ಯದಶಿರ್ ನಾಗೇಶ ನಾಯ್ಕ ಮನವಿ ಪತ್ರ ವಾಚಿಸಿದರು.
ಮಾಜಿ ಶಾಸಕ ಸುನೀಲ ನಾಯ್ಕ, ಗೋವಿಂದ ನಾಯ್ಕ, ಜಯಂತ ಬೆಣಂದೂರು, ದಿನೇಶ ನಾಯ್ಕ, ಈಶ್ವರ ನಾಯ್ಕ, ಲ್ಮನಾರಾಯಣ ನಾಯ್ಕ, ಅರುಣ ನಾಯ್ಕ ಸೇರಿದಂತೆ ವಿವಿಧ ಸಮಾಜಗಳ ಮುಖಂಡರು ಉಪಸ್ಥಿತರಿದ್ದರು.
ಚನ್ನಪಟ್ಟಣ ಹನುಮಂತ ದೇವಸ್ಥಾನದಿಂದ ಆರಂಭವಾದ ಮೆರವಣಿಗೆ ಮುಖ್ಯ ರಸ್ತೆಯ ಮೂಲಕ ಸಾಗಿಬಂದು ಉಪವಿಭಾಗಾಧಿಕಾರಿ ಕಚೇರಿ ತಲುಪಿ ಮನವಿ ಸಲ್ಲಿಸುವ ಮೂಲಕ ಪ್ರತಿಭಟನೆ ಸಮಾಪ್ತಿಯಾಯಿತು.