ಸಾಂದರ್ಬಿಕ ಚಿತ್ರ  
ಉತ್ತರ ಕನ್ನಡ

ಕಾರವಾರ ನೌಕಾನೆಲೆಯಾಗಲಿದೆ ಕ್ಷಿಪಣಿಗಳ ಕೇಂದ್ರ

ಸುಭಾಸ ಹೆಗಡೆ ಧೂಪದಹೊಂಡ
ಸುಭಾಸ ಧೂಪದಹೊಂಡ ಕಾರವಾರ
ಇಲ್ಲಿನ ಕದಂಬ ನೌಕಾನೆಲೆಯ ಎರಡನೇ ಹಂತದ ವಿಸ್ತರಣೆ ಕಾಮಗಾರಿ ಭಾಗಶಃ ಮುಕ್ತಾಯ ಹಂತದಲ್ಲಿದೆ. ಈಗ ಶಸ್ತ್ರಾಗಾರ ಸೇರಿ ಅಂತಿಮ ಹಾಗೂ ಮಹತ್ವದ ಯುದ್ಧ ಮೂಲ ಸೌಕರ್ಯ ಅಭಿವೃದ್ಧಿಪಡಿಸಲು ನೌಕಾಸೇನೆ ಮುಂದಾಗಿದೆ. ಅದಕ್ಕಾಗಿ ಕನ್ಸಲ್ಟೆನ್ಸಿ ಏಜೆನ್ಸಿಗಾಗಿ ಟೆಂಡರ್ ಆಹ್ವಾನಿಸಿದೆ.
ನೌಕಾನೆಲೆಯ ಶಸ್ತ್ರಾಸ್ತ್ರ ಡಿಪೊ, ಜಲಾಂತರ್ಗಾಮಿಗಳಿಗೆ ಕ್ಷಿಪಣಿಗಳನ್ನು ಲೋಡ್ ಮಾಡಬಹುದಾದ, ಪರೀಕ್ಷಿಸಬಹುದಾದ ಕ್ಷಿಪಣಿ ತಾಂತ್ರಿಕ ವಿಭಾಗ, ಶಸ್ತ್ರಾಸ್ತ್ರ ತಪಾಸಣಾ ವಿಭಾಗ ಹಾಗೂ ರಸ್ತೆ, ಸೇತುವೆ, ನೀರಿನ ಟ್ಯಾಂಕ್‌ಗಳು ಮುಂತಾದ ಮೂಲ ಸೌಕರ್ಯಗಳನ್ನು ಒದಗಿಸಲು ಬೇಕಾದ ಯೋಜನೆ ರೂಪಿಸುವುರು, ಅದಕ್ಕೆ ಅಗತ್ಯವಾದ ಅನುಮತಿಗಳನ್ನು ಸಂಬAಧಪಟ್ಟ ಇಲಾಖೆಗಳಿಂದ ಪಡೆಯುವುದು, ಟೆಂಡರ್ ಕರೆದು, ಸಂಬಂಧಪಟ್ಟ ಕಂಪನಿಯ ಕಾರ್ಯವನ್ನು ಮೇಲ್ವಿಚಾರಣೆ ಮಾಡುವುದು ಮುಂತಾದ ಜವಾಬ್ದಾರಿ ನಿರ್ವಹಿಸಲು ಕನ್ಸೆಲ್ಟೆನ್ಸಿ ಏಜೆನ್ಸಿಯಿಂದ ಎಕ್ಸ್ಪ್ರೆಶನ್ ಆಫ್ ಇಂಟ್ರೆಸ್ಟ್ ಆಹ್ವಾನಿಸಲಾಗಿದೆ.
ನೌಕಾನೆಲೆಯ 2 ನೇ ಹಂತದ ವಿಸ್ತರಣೆ(ಪ್ರೊಜೆಕ್ಟ್ ಸೀಬರ್ಡ್-2ಎ) ಕಾಮಗಾರಿಗೆ 2012 ರಲ್ಲಿ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ಸಿಕ್ಕಿತ್ತು. 2017 ರ ಹೊತ್ತಿಗೆ ಕಾಮಗಾರಿಗಳು ಶುರುವಾಗಿದ್ದು, ಸುಮಾರು 19,600 ಕೋಟಿ ರೂ. ವೆಚ್ಚದಲ್ಲಿ ಹೆಚ್ಚುವರಿ ನಾಲ್ಕು ಹಡಗು ನಿಲ್ದಾಣಗಳು(ಬರ್ತ್) ದೊಡ್ಡ ಯುದ್ಧ ನೌಕೆ ಹಾಗೂ ಜಲಾಂತರ್ಗಾಮಿಗಳನ್ನು ದುರಸ್ತಿ ಮಾಡಬಹುದಾದ ವ್ಯವಸ್ಥೆ (ಡ್ರೈ ಡಾಕ್), ದುರಸ್ತಿ ಪ್ರಾಂಗಣಗಳು, ಸುಮಾರು 10 ಸಾವಿರ ನೌಕಾ ಸಿಬ್ಬಂದಿಗೆ ವಸತಿ ವ್ಯವಸ್ಥೆ ಸೇರಿ ಹಲವು ಮೂಲ ಸೌಕರ್ಯಗಳುನ್ನು ಕಲ್ಪಿಸಲಾಗಿದೆ. ಅಲ್ಲದೇ, ನೌಕಾ ವಿಮಾನ ನಿಲ್ದಾಣ ನಿರ್ಮಾಣವೂ ಇದೇ ವ್ಯಾಪ್ತಿಯಲ್ಲಿದೆ.
ಏಕಾಮ್ ಎಂಬ ಕಂಪನಿ ಕನ್ಸೆಲ್ಟೆನ್ಸಿ ಏಜೆನ್ಸಿಯಾಗಿ ನೇಮಕವಾಗಿದ್ದು, ಅದು 2 ನೇ ಹಂತದ ವಿಸ್ತರಣೆಯ ಪ್ರಮುಖ ಕ್ರಿಯಾ ಯೋಜನೆ, ಟೆಂಡರ್ ಪ್ರಕ್ರಿಯೆ, ಕಾಮಗಾರಿಗಳ ಮೇಲ್ವಿಚಾರಣೆ (ಕನ್ಸೆಲ್ಟೆನ್ಸಿ ಏಜೆನ್ಸಿ) ಕಾರ್ಯವನ್ನು ನಡೆಸಿತ್ತು. ಆ ಸಂಸ್ಥೆಯು ಶೇ. ೮೫ ರಷ್ಟು ಕಾಮಗಾರಿಗಳ ವಿನ್ಯಾಸ ಮಾಡಿದೆ. ಅದರಂತೆ ಹಲವು ಕಾಮಗಾರಿಗಳೂ ಆಗಿವೆ. ಕೆಲವು ಸಂಕೀರ್ಣ ವಿನ್ಯಾಸಗಳನ್ನು ಮದ್ರಾಸ್ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ)ತಂತ್ರಜ್ಞರಿಂದ ವಿನ್ಯಾಸ ಪರಿಶೀಲನಗೊಳಪಟ್ಟು ಅನುಮೋದನೆಯೂ ಆಗಿದೆ. ನೌಕಾ ಶಸ್ತಾçಗಾರದ ವಿನ್ಯಾಸಕ್ಕೆ ಸೆಂಟರ್ ಫಾರ್ ಫೈರ್, ಎಕ್ಸ್ಪ್ಲೋಸಿವ್ ಅಂಡ್ ಎನ್ವಿರಾನ್‌ಮೆಂಟ್ ಸೇಫ್ಟಿ (ಸಿಎಫ್‌ಇಇಎಸ್)ಪ್ರಾಥಮಿಕ ಹಂತದ ಅನುಮೋದನೆ ದೊರಕಿದೆ.
ಹೊಸದಾಗಿ ನೇಮಕವಾಗುವ ಕನ್ಸೆಲ್ಟೆನ್ಸಿ ಏಜೆನ್ಸಿಯು ಶೇ.100 ರಷ್ಟು ವಿನ್ಯಾಸ, ಯೋಜನೆ, ಹಾಗೂ ಸಿಎಫ್‌ಇಇಎಸ್ ಅಂತಿಮ ಅನುಮೋದನೆ, ನಿರ್ಮಾಣ ಕಾಮಗಾರಿಗಳ ಮೇಲುಸ್ತುವಾರಿ ನೋಡಿಕೊಳ್ಳಬೇಕಿದ್ದು, ೨೦ ಕೋಟಿ ವೆಚ್ಚದ ಕಾಮಗಾರಿ ಇದಾಗಿದ್ದು, ನವೆಂಬರ್ ಹೊತ್ತಿಗೆ ಟೆಂಡರ್ ಪ್ರಕ್ರಿಯೆ ಅಂತಿಮಗೊಳ್ಳುವ ಸಾಧ್ಯತೆ ಇದೆ.

ಮಹತ್ವದ ನೆಲೆ

ಸೀಬರ್ಡ್ ಪ್ರೊಜೆಕ್ಟ್ ೨ಎ ವಿಸ್ತರಣೆ ಕಾಮಗಾರಿ ಮುಕ್ತಾಯದ ಹೊತ್ತಿಗೆ ಭಾರತೀಯ ನೌಕಾಸೇನೆಯ ಪ್ರಮುಖ ೩೨ ಯುದ್ಧ ನೌಕೆಗಳು ಹಾಗೂ ಜಲಾಂತರ್ಗಾಮಿಗಳು ಕಾರವಾರದಲ್ಲಿ ನೆಲೆಯಾಗಲಿವೆ. ೨ಬಿ ಕಾಮಗಾರಿಗಳು ಇನ್ನಷ್ಟಿದ್ದು, ಅದರ ಮುಕ್ತಾಯದ ನಂತರ ಇಲ್ಲಿ 50 ಯಕ್ಕೂ ಹೆಚ್ಚು ನೌಕೆಗಳು ನೆಲೆಯಾಗಲಿವೆ. ದೇಶದ ಪ್ರಮುಖ ನೌಕಾ ಕೇಂದ್ರ ಕಾರವಾರವಾಗಲಿದೆ ಎಂದು ನೌಕಾ ಅಽಕಾರಿಗಳು ಹೇಳಿದ್ದಾರೆ.

ಭಾರತೀಯ ತಂತ್ರಜ್ಞಾನ

ಆತ್ಮ ನಿರ್ಭರ ಭಾರತ, ಮೇಕ್ ಇನ್ ಇಂಡಿಯಾಕ್ಕೆ ನೌಕಾಸೇನೆ ಮಹತ್ವ ನೀಡಿದೆ. ಭಾರತೀಯ ಕಂಪನಿಗಳಿಗೆ ಕಾಮಗಾರಿ ನೀಡುತ್ತಿದ್ದು, ಹಲವು ವಸ್ತುಗಳನ್ನು ಇಲ್ಲಿಯೇ ತಯಾರಿಸಲಾಗುತ್ತಿದೆ. ಕಾರವಾರ ಭಾರತದ ಅತ್ಯಂತ ಆಧುನಿಕ ಹಾಗೂ ಮಹತ್ವದ ನೌಕಾನೆಲೆಯಾಗಿ ಅಭಿವೃದ್ಧಿಯಾಗುತ್ತಿದೆ ಎಂದು ಪಶ್ಚಿಮ ನೌಕಾ ವಲಯ ಮುಖ್ಯಸ್ಥ ವೈಸ್ ಅಡ್ಮಿರಲ್ ಸಂಜಯ ವಾತ್ಸಾಯನ ಹೇಳಿದ್ದಾರೆ.

ಪ್ರೊಜೆಕ್ಟ್ ಸೀಬರ್ಡ್ 2ಎ ಇದುವರೆಗಿನ ವ್ಯವಸ್ಥೆಗಳು

  1. *ಬೃಹತ್ ಯುದ್ಧ ನೌಕೆಗಳನ್ನು ನಿಲ್ಲಿಸಬಹುದಾದ 3 ಜೋಡಿ ಎಂದರೆ 7 ನಿಲ್ದಾಣಗಳು (ಜಟ್ಟಿ)
  2. *ಜಲಾಂತರ್ಗಾಮಿ ಹಾಗೂ ಹಡಗುಗಳನ್ನು ನಿಲ್ಲಿಸಬಹುದಾದ ಬರ್ತ್ಗಳ ವಿಸ್ತರಣೆ ದುರಸ್ತಿ ಸೌಲಭ್ಯ
  3. *ಜಲಾಂತರ್ಗಾಮಿಗಳ ದುರಸ್ತಿಗಾಗಿ ಅತ್ಯಾಧುನಿಕ ನ್ಯುಮೆಟ್ರಿಕ್ ರಾಮ್ ಟೆಸ್ಟಿಂಗ್ ವ್ಯವಸ್ಥೆ
  4. *500 ಕ್ಕೂ ಅಧಿಕಾರಿ ಹಾಗೂ ಸಿಬ್ಬಂದಿಗೆ ವಸತಿ ವ್ಯವಸ್ಥೆ *ವಿದ್ಯುತ್ ಉಪ ಕೇಂದ್ರಗಳು, ಸ್ವಿಚ್‌ಗೇರ್‌ಗಳು

ಪ್ರೊಜೆಕ್ಟ್ ಸೀಬರ್ಡ್ 2ಎ ಆಗಬೇಕಾಗಿರುವ ವ್ಯವಸ್ಥೆಗಳು

  • *ನೌಕಾ ವಿಮಾನ ನಿಲ್ದಾಣ
  • *ನೌಕಾ ಶಸ್ತಾçಗಾರ
  • *ಮಾನವ ರಹಿತ ವಿಮಾನಗಳ ಗುಂಪು
  • *ಇನ್ನೂ ಹಲವು ಮೂಲ ಸೌಕರ್ಯಗಳು
  • ..........