ಡಾ.ಕೃಷ್ಣಪ್ರಸಾದ್‌  
ಉತ್ತರ ಕನ್ನಡ

ದೃಷ್ಟಿ ಆರೋಗ್ಯ ಸಂಹಿತೆ ಜಾರಿಗೆ ಸಿದ್ಧತೆ

ಕಾರವಾರ: ರಾಜ್ಯದಲ್ಲಿ ದೃಷ್ಟಿ ಆರೋಗ್ಯ ಸಂಹಿತೆಯನ್ನು ಜಾರಿಗೆ ತರಲು ಚಿಂತನೆ ನಡೆದಿದೆ ಎಂದು ಕರ್ನಾಟಕ ಸರ್ಕಾರದ ದೃಷ್ಟಿ ಆರೋಗ್ಯ ಸಮಿತಿ (ವಿಷನ್ ಕಮಿಟಿ)ಅಧ್ಯಕ್ಷ , ಉಡುಪಿ ಆದರ್ಶ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಅಧ್ಯಕ್ಷ ಡಾ.ಕೃಷ್ಣಪ್ರಸಾದ ಕೂಡ್ಲು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, ಕೋವಿಡ್ ನಂತರ ಆನ್‌ಲೈನ್ ಕ್ಲಾಸ್‌ಗಳು ಹೆಚ್ಚಿವೆ. ಇದರಿಂದ ಕಣ್ಣಿನ ಮೇಲೆ ಒತ್ತಡ ಹೆಚ್ಚಾಗಿದೆ. ಶಾಲೆಗಳಲ್ಲಿ ಬೆಳಗ್ಗೆ ಬಿಸಿಲಲ್ಲಿ ನಿಲ್ಲಿಸಿ ಪ್ರಾರ್ಥನೆ ಹೇಳಿಸುವ ಪ್ರಕ್ರಿಯೆಗಳು ಕಡಿಮೆಯಾಗಿದ್ದರಿಂದ ಕಣ್ಣಿನ ಆರೋಗ್ಯಕ್ಕೆ ಬೇಕಾದ ವಿಟಾಮಿನ್ `ಡಿ' ಅಂಶ ಕಡಿಮೆಯಾಗಿದೆ. ಇದರಿಂದ ಮಕ್ಕಳಲ್ಲಿ ದೃಷ್ಟಿಯ ಸಮಸ್ಯೆಗಳು ಶೇ. 65 ರಷ್ಟು ಹೆಚ್ಚಿರುವುದು ಕಂಡುಬAದಿದೆ.

ಈ ಕಾರಣ ದೃಷ್ಟಿ ಆರೋಗ್ಯ ಸಮಿತಿ ಮಕ್ಕಳು ಆನ್‌ಲೈನ್ ಚಟುವಟಿಕೆಗಳಲ್ಲಿ ತೊಡಗಬಹುದಾದ ಗರಿಷ್ಠ ಸಮಯ ಹಾಗೂ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆಗಳ ಕುರಿತು ಒಂದು ನಿಯಮ ರೂಪಿಸಲು ಚಿಂತಿಸಿದ್ದು, ಎರಡು ಸಭೆಗಳಾಗಿವೆ. ಆರೋಗ್ಯ ಸಚಿವರ ಜೊತೆ ಚರ್ಚಿಸಿ ನೀತಿಯ ರೂಪುರೇಶೆಗಳನ್ನು ರೂಪಿಸಬೇಕಿದೆ ಎಂದರು. ಯಶಸ್ವಿನಿ ಟ್ರಸ್ಟ್ ಸದಸ್ಯರೂ ಆಗಿರುವ ಅವರು, ಆರೋಗ್ಯ ಕರ್ನಾಟಕದಲ್ಲಿ ನೇತ್ರ ಶಸ್ತç ಚಿಕಿತ್ಸೆಯನ್ನೂ ಸೇರಿಸುವ ಪ್ರಸ್ತಾವವನ್ನು ಸರ್ಕಾರದ ಮುಂದೆ ಇಡಲಾಗಿದೆ ಎಂದರು.

ಭಾರತದ ಅತಿ ಆಧುನಿಕ ಹಾಗೂ ಸುಸಜ್ಜಿತ 20 ಕಣ್ಣಿನ ಆಸ್ಪತ್ರೆಗಳ ಸಮೂಹದಲ್ಲಿ ಪ್ರಸಾದ ನೇತ್ರಾಲಯವೂ ಒಂದು. ಇದರ ಮೂಲಕ ರಾಜ್ಯದ 8 ಜಿಲ್ಲೆಗಳಲ್ಲಿ ಉಚಿತ ಕಣ್ಣಿನ ಆರೋಗ್ಯ ತಪಾಸಣಾ ಶಿಬಿರಗಳನ್ನು ನಡೆಸಲಾಗುತ್ತಿದೆ. ಉತ್ತರ ಕನ್ನಡದ ವಿವಿಧೆಡೆಯೂ ನಡೆದಿದೆ. ಈಗ ಇಲ್ಲಿಯೇ ಆಸ್ಪತ್ರೆ ತೆರೆಯಲಾಗುತ್ತಿದೆ. ನವೆಂಬರ್ 6 ರಂದು 12 ನೇ ಶಾಖೆ ಕಾರವಾರದಲ್ಲಿ ಆರಂಭವಾಗುತ್ತಿದೆ ಎಂದು ತಿಳಿಸಿದರು. ನೇತ್ರ ತಜ್ಞರಾದ ಡಾ.ನಿರಂಜನ್, ಡಾ.ಮೇಘಾ ಶೇಟ್ ಸುದ್ದಿಗೋಷ್ಠಿಯಲ್ಲಿದ್ದರು.

..........