ಗೋಕರ್ಣದ ಅಶೋಕೆಯ ಶ್ರೀ ರಾಮಚಂದ್ರಾಪುರ ಮಠದಲ್ಲಿ ಪೀಠಾಧಿಪತಿಗಳಾದ ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿ ಅವರ 33ನೇ ಅನ್ನಬ್ರಹ್ಮ ಚಾತುರ್ಮಾಸ್ಯ ನಿಮಿತ್ತ ಶ್ರೀ ರಾಮಚಂದ್ರಾಪುರ ಮಂಡಲದ ವಿವಿಧ ವಲಯಗಳಿಂದ ನಡೆದ ಗುರುಭಿಕ್ಷಾ ಸೇವೆ ನಿಮಿತ್ತ ಮಂಜುನಾಥ ದಂಪತಿ ಶ್ರೀಗಳಿಗೆ ರ್ಪೂಣಫಲ ಸರ್ಮಪಿಸಿದರು.
ಗೋಕರ್ಣ:
ಶರೀರ ಎಂಬ ದೇಗುಲಕ್ಕೆ ಪ್ರಶಾಂತ ಮನಸು ಗರ್ಭಗುಡಿ. ಅಲ್ಲಿ ನಡೆಯುವ ನಿದ್ದೆಯ ಪೂಜೆಗೆ ನೇತ್ರ ದ್ವಯಗಳೇ ಪೂಜಾಪೀಠ. ಹಾಸಿಗೆ, ಹೊದಿಕೆ, ದಿಂಬು ಇತ್ಯಾದಿಗಳೇ ಪರಿಕರ. ಸುಖಕರ ಶಯನದಿಂದ ಪ್ರಾಪ್ತವಾಗುವ ಅಖಿಲ ಪ್ರಸನ್ನತೆಯೇ ನಿದ್ರಾಪೂಜೆಯ ಪ್ರಸಾದ ಎಂದು ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ನುಡಿದರು.
ಇಲ್ಲಿನ ಅಶೋಕೆಯ ಶ್ರೀ ರಾಮಚಂದ್ರಾಪುರ ಮಠದಲ್ಲಿ 33ನೇ ಅನ್ನಬ್ರಹ್ಮ ಚಾತುರ್ಮಾಸ್ಯ ನಿಮಿತ್ತ ಸೋಮವಾರ ಆಯೋಜಿಸಿದ್ದ ಧರ್ಮಸಭೆಯಲ್ಲಿ ಶ್ರೀಗಳು ಶರೀರವನ್ನು ಹೊತ್ತ ಮೂರು ಉಪಸ್ತಂಭಗಳ ಬಗ್ಗೆ ಪ್ರವಚನ ಮುಂದುವರಿಸಿ ಅನ್ನ ಮತ್ತು ನಿದ್ರೆಯ ನಂಟನ್ನು ಬಣ್ಣಿಸಿದರು.
ಸೌಖಶಾಲಿನಕರು:
ಅನ್ನ ಅಥವಾ ಆಹಾರ ಮತ್ತು ನಿದ್ರೆ ಇವೆರಡರ ಸಂಬಂಧವನ್ನು ವ್ಯಾಸ ಮಹಷಿರ್ಗಳು ನಿದಿರ್ಷ್ಟ ಕಾಲದ ಜಠರಾಗ್ನಿಯನ್ನು ಅನುಗ್ರಹಿಸುವ ಕಾಲಾಗ್ನಿರುದ್ರ ಮತ್ತು ನಿದ್ರೆಯ ಮಾತೃರೂಪಿ ಭೂತಧಾತ್ರಿ ಇವರುಗಳ ಸಂಸಾರ ಎಂದಿದ್ದಾರೆ. ಈ ಎರಡು ದೇವತೆಗಳ ಸಂಯೋಗದಿಂದ ಆಹಾರ ಪ್ರಕ್ರಿಯೆ ಸಮರ್ಥವಾಗಿ ನಡೆದು ಸುಖನಿದ್ರೆಗೆ ಕಾರಣವಾಗುತ್ತದೆ. ಇಂತಹ ಸುಖ ಶಯನಿಗಳನ್ನು "ಸೌಖಶಾಲಿನಕರು' ಎನ್ನಲಾಗಿದೆ. ಇಂತಹ ಸೌಖಶಾಲಿನಕರಾದ ಯೋಗನಿದ್ರಾಯುಕ್ತ ದೇವರನ್ನು ಋಷಿಮುನಿಗಳು ಪ್ರಾಥಿರ್ಸಿದರು ಎಂಬುದಾಗಿ ಪುರಾಣಗಳು ಹೇಳಿವೆ. ಒಮ್ಮೆ ನಿದ್ದೆಯಿಂದ ಎದ್ದರೆ ಮತ್ತೆ ನಿದ್ರಿಸಬೇಕು ಎಂದು ಎನಿಸದೇ ಇರುವುದೇ ಸುಖ ನಿದ್ರೆಯ ಲಕ್ಷಣ. ಸುಖವಾದ ನಿದ್ರೆ ಯಾವತ್ತೂ ತೂಕಡಿಕೆ ಉಂಟುಮಾಡದು. ಇಂತಹ ಸುಖನಿದ್ರಾ ಶಯನಿಗಳಾದವರು ಮಾತ್ರ ಅನುಪಮ ಆತ್ಮಾನುಭವವನ್ನು ಕರುಣಿಸುವ ನಾಲ್ಕನೇ ಮತ್ತು ಕೊನೇ ಅವಸ್ಥೆಯಾದ ತುರೀಯ ಅಥವಾ ಸಮಾಧಿ ಸ್ಥಿತಿಯನ್ನು ಮುಟ್ಟಬಲ್ಲ ಪುಣ್ಯಶಾಲಿಗಳಾಗಿದ್ದಾರೆ. ಆದರೆ, ಹೆಚ್ಚಿನ ಜನರು ನಾಲ್ಕು ಮಹಡಿಯ ಶರೀರದ ಈ ಪರಮೋಚ್ಚ ಸ್ಥಿತಿಯನ್ನು ತಲುಪಲು ಆಗದವರಾಗಿದ್ದಾರೆ. ಕೆಲವರು ಎರಡನೆಯ ಸ್ವಪ್ನ ಅವಸ್ಥೆಯಲ್ಲಿ ದುಃಸ್ವಪ್ನ ಪೀಡಿತರಾಗಿ ಸುಖ ನಿದ್ರೆಯಿಂದ ವಂಚಿತರಾಗುವರು. ಇನ್ನು ಹಲವರು ನಿದ್ದೆಯೇ ಬಾರದೆ ಸ್ವಪ್ನಗಳಿಲ್ಲದ ಸಂರ್ಪೂಣ ಶಾಂತ ಮನಸಿನ ಗಾಢ ನಿದ್ದೆಯ ಮೂರನೆಯ ಸುಷುಪ್ತಿ ಅವಸ್ಥೆಯನ್ನು ಮುಟ್ಟಲು ಅಸಮರ್ಥರಾಗುತ್ತಾರೆ. ಯಾರು ನಿದ್ರೆಯ ಸಮಾಧಿ ಸ್ಥಿತಿಯನ್ನು ಏರುತ್ತಾರೋ ಅಂಥವರ ಹೃದಯ ಕಮಲ ಅರಳುತ್ತದೆ ಎಂದು ಆಯುರ್ವೇದ ಶಾಸದ ಉಲ್ಲೇಖವಾಗಿದೆ. ಇತ್ತೀಚಿನ ಆರೋಗ್ಯ ಸಂಶೋಧನೆಯೊಂದರ ವರದಿಯಂತೆ ರಾತ್ರಿ ಕನಿಷ್ಠ ಅಗತ್ಯವಾಗಿರುವ ನಿದ್ರೆಯಿಂದ ವಿಮುಖರಾಗುವ ಜನರಲ್ಲಿ ಸಾವಿನ ಪ್ರಮಾಣ ಶೇ. 14 ಹೆಚ್ಚಾಗಿದ್ದರೆ, ಅಗತ್ಯಕ್ಕಿಂತ ಅತಿ ಹೆಚ್ಚು ನಿದ್ರಿಸುವವರಲ್ಲಿ ಸಾವಿನ ಪ್ರಮಾಣ ಶೇ. 34 ವೃದ್ಧಿಸಿದೆ ಎನ್ನಲಾಗಿದೆ. ಕಾರಣ ಸಮ ಅವಧಿಯ ಉತ್ತಮವಾದ ನಿದ್ರೆ ಕಾಯಾಗ್ನಿಯನ್ನು ಪ್ರಜ್ವಲಿಸಿ ಶರೀರದಲ್ಲಿನ ದೋಷಗಳನ್ನು ಪರಿಹರಿಸುತ್ತದೆ. ಜಠರಾಗ್ನಿಗೆ ಬಲವಿತ್ತು ಜೀರ್ಣಕ್ರಿಯೆಯನ್ನು ಸುಲಭವಾಗಿಸುವುದು. ಹೀಗೆ ಅನ್ನ ಅಥವಾ ಆಹಾರಕ್ಕೂ ನಿದ್ದೆಗೂ ಅನ್ಯೋನ್ಯ ಭಾವ ಸಂಬಂಧವಿದೆ ಎಂದು ಶ್ರೀಗಳು ತಿಳಿಸಿದರು.
ಆಹಾರ ಮತ್ತು ನಿದ್ರೆ:
ರಾತ್ರಿಯ ಸುಖ ಶಯನಕ್ಕೆ ರಾತ್ರಿಯ ಆಹಾರದ ಬಗ್ಗೆ ಆಯುರ್ವೇದ ಶಾಸ ಹಲವು ನಿಯಮಗಳನ್ನು ಬಹು ಹಿಂದೆಯೇ ನಿಬದ್ಧಗೊಳಿಸಿದೆ. ಇತ್ತೀಚಿನ ಆಧುನಿಕ ಆರೋಗ್ಯ ಶಾಸವೂ ಇಂದು ಅದನ್ನೇ ಅನುಸರಿಸಲು ಪ್ರೇರೇಪಿಸಿ ಪ್ರಚುರಪಡಿಸುತ್ತಿರುವುದು ಪ್ರಾಚಿನ ಆಯುರ್ವೇದ ಶಾಸದ ಜ್ಞಾನ ಪರಿರ್ಪೂಣತೆ ಮತ್ತು ಚಿಕಿತ್ಸಾ ನಿಖರತೆಗೆ ನಿದರ್ಶನವಾಗಿದೆ. ಆಯುರ್ವೇದ ಶಾಸ ರಾತ್ರಿ ಜೀರ್ಣಕ್ರಿಯೆ ನಿಧಾನವಾಗುತ್ತದೆ. ಹಗಲಿನ ಅರ್ಧ ಪ್ರಮಾಣದಲ್ಲಿ ಜೀರ್ಣಕ್ರಿಯೆ ನಡೆಯುವುದರಿಂದ ಅತ್ಯಂತ ಲುವಾದ ಆಹಾರ ಸೇವನೆ ನಿದ್ರೆಗೆ ಪ್ರೇರಕ. ರ್ಪೂಣವಾಗಿ ತುಂಬಿಸದೆ ಹೊಟ್ಟೆಯಲ್ಲಿ ಸ್ವಲ್ಪ ಜಾಗವಿಡುವುದು ಊಟದ ಕ್ರಮವಾದರೆ ಜೀರ್ಣಕ್ರಿಯೆಗೆ ಅನುಕೂಲವಾಗುವ ಜತೆಗೆ ರೋಗಮುಕ್ತವಾಗಲು ಸಾಧ್ಯ ಎಂದಿದೆ. ಆಧುನಿಕ ಜೀವನ ಕ್ರಮದಿಂದ ಸಕ್ಕರೆ ಕಾಯಿಲೆ ವ್ಯಾಪಕವಾಗುತ್ತಿದೆ. ರಾತ್ರಿ ದೇಹದಲ್ಲಿನ ಇನ್ಸುಲಿನ್ ಸಂವೇದನಾಶೀಲತೆ ಣವಾಗುವುದರಿಂದ ಆಹಾರದೊಂದಿಗೆ ದೇಹ ಸೇರುವ ಗ್ಲುಕೋಸ್ ಅನ್ನು ಶಕ್ತಿಯಾಗಿಸುವ ಕ್ರಿಯೆ ಕುಂಠಿತವಾಗಿ ಕೊಬ್ಬು ಶೇಖರಣೆ ವೃದ್ಧಿಸಬಹುದಾಗಿದೆ. ಈ ಹಿನ್ನೆಲೆಯಲ್ಲಿ ಅಲ್ಪ ಆಹಾರ ಪ್ರಶಸ್ತವಾದುದಾಗಿದೆ. ಇದರ ಜತೆಗೆ ವಾತ ಮತ್ತು ಕಫ ಸುಖ ನಿದ್ರೆಗೆ ವೈರಿಗಳಾಗಿರುವುದರಿಂದ ಇವುಗಳಿಗೆ ಕಾರಣವಾಗುವ ಆಹಾರವನ್ನು ರಾತ್ರಿ ಕೈಬಿಡುವುದು ಉತ್ತಮ ನಿದ್ರೆಗೆ ದಾರಿಯಾಗಿದೆ. ಕಾರಣ ಜೀವನ ಶಿಸ್ತು ಬದ್ಧವಾಗಬೇಕು. ಸರಿಯಾದ ಆಹಾರದ ಆಯ್ಕೆ ಸರಿ ಪ್ರಮಾಣದ ನಿದ್ರೆಗೆ ಪೂರಕವಾಗುವುದರಿಂದ ನಿತ್ಯದ ನಿದ್ದೆ ಯೋಗನಿದ್ರೆಯಾಗಲು ಸಾಧ್ಯ ಎಂದು ಶ್ರೀಗಳು ಪ್ರವಚನವಿತ್ತು ಆಶೀರ್ವದಿಸಿದರು.
ಶ್ರೀರಾಮಚಂದ್ರಾಪುರ ಮಂಡಲದ ನಿಟ್ಟೂರು, ತುಮರಿ, ಹೊಸನಗರ, ಹೊಸಕೊಪ್ಪ, ಸಂಪಕಟ್ಟೆ ವಲಯಗಳ ಪರವಾಗಿ ಮಂಜುನಾಥ ದಂಪತಿ ಗುರುಭಿಕ್ಷಾ ಸೇವೆ ಸರ್ಮಪಿಸಿದರು. ಪ್ರಕಾಶ ಬೇರಾಳ, ಲಕ್ಷ್ಮಿನಾರಯಣ ಕೌಲಕೈ, ರಚನಾ ಜಗದೀಶ ಹೊನ್ನಗೋಡು, ಗಣಪತಿ ಭಟ್ಟ ಜಟ್ಟಿಮನೆ, ಶಂಕರನಾರಾಯಣ ಮಾಗಲು ಮತ್ತು ಮಂಡಲ ಪ್ರಮುಖರಿದ್ದರು. ದಿನ ಪ್ರಧಾನ ಪ್ರಕಾಶ ಬಾಗಿ ದಂಪತಿ ಉಪಸ್ಥಿತರಿದ್ದರು.