ಕಳಪೆ ಬೇಳೆಯನ್ನು ಎಸ್ ಡಿಎಂಸಿ ಸದಸ್ಯರು ಪ್ರದರ್ಶಿಸಿದರು.
ಹೊನ್ನಾವರ: ತಾಲೂಕಿನ ಖರ್ವಾ ನಾಥಗೇರಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಬಿಸಿಯೂಟಕ್ಕೆ ಹುಳು ಆಗಿರುವ ಕಳಪೆ ಮಟ್ಟದ ತೊಗರಿಬೆಳೆ ಬಳಸುತ್ತಿರುವುದನ್ನು ಖಂಡಿಸಿ ಎಸ್‌ಡಿಎಂಸಿ ಹಾಗೂ ಪಾಲಕರು ಶಾಲೆಗೆ ಭೇಟಿ ನೀಡಿ ಮುಖ್ಯ ಶಿಕ್ಷಕಿ ಮತ್ತು ಇಲಾಖಾ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಘಟನೆ ಬುಧವಾರ ನಡೆದಿದೆ.
ಬಿಸಿಯೂಟದ ಆಹಾರಧಾನ್ಯಗಳ ಹಾಗೂ ಕೊಠಡಿ ಸ್ವಚ್ಚತೆಯ ಬಗ್ಗೆ ಪರಿಶೀಲಿಸಲು ಖರ್ವಾ ಶಾಲೆಗೆ ಇಲಾಖೆಯ ಆದೇಶದಂತೆ ಗ್ರಾಮ ಪಂಚಾಯತಿ ಪಿಡಿಒ ಗಿರೀಶ್ ನಾಯಕ ಅವರು ಭೇಟಿ ನೀಡಿದ್ದರು. ಈ ವೇಳೆ ತೊಗರಿಬೇಳೆಯಲ್ಲಿ ಹಾಳಾಗಿರುವುದು ಮತ್ತು ಅದರಲ್ಲಿ ಹುಳು ಆಗಿರುವುದು ಕಂಡುಬAದಿದೆ. ಇದು ಆಹಾರ ತಯಾರಿಕೆಗೆ ಬಳಸಲು ಯೋಗ್ಯವಲ್ಲ ಎಂದು ಎಸ್ ಡಿ ಎಂ ಸಿ ಹಾಗೂ ಶಿಕ್ಷಕರಿಗೆ ತಿಳಿಸಿದ್ದರು. ಶಾಲೆಗೆ ಆಗಮಿಸಿದ ಎಸ್ಡಿಎಂಸಿ ಸದಸ್ಯರು ಮತ್ತು ಪಾಲಕರು ಪರಿಶೀಲನೆ ನಡೆಸಿ ಆತಂಕ ವ್ಯಕ್ತಪಡಿಸಿದ್ದಾರೆ.
ತೊಗರಿಬೆಳೆ ಇಷ್ಟೊಂದು ಕಳಪೆಯಾಗಿದ್ದರೂ ಎರಡು ಮೂರು ತಿಂಗಳು ಕಳೆದರೂ ಇಲ್ಲಿನ ಪ್ರಭಾರಿ ಮುಖ್ಯಶಿಕ್ಷಕಿ ಸುಧಾ ಭಂಡಾರಿ ನಮ್ಮ ಗಮನಕ್ಕೆ ತಂದಿಲ್ಲ ಎಂದು ಎಸ್ ಡಿ ಎಂ ಸಿ ಅಧ್ಯಕ್ಷ ವೆಂಕಟೇಶ ನಾಯ್ಕ ಹಾಗೂ ಪಾಲಕರು ಮುಖ್ಯ ಶಿಕ್ಷಕಿಯನ್ನು ತರಾಟೆಗೆ ತೆಗೆದುಕೊಂಡರು. ಇದರ ಬಗ್ಗೆ ಸಂಬAಧಪಟ್ಟ ಅಧಿಕಾರಿಗಳು ಕ್ರಮ ಜರುಗಿಸಬೇಕು ಮತ್ತು ಶಾಲೆಗಳಿಗೆ ಗುಣಮಟ್ಟದ ಬೇಳೆಯನ್ನು ಪೂರೈಕೆ ಮಾಡಬೇಕು. ಇಂತಹ ಆಹಾರ ಸೇವಿಸಿದರೆ ಮಕ್ಕಳ ಆರೋಗ್ಯದ ಸ್ಥಿತಿ ಹಾಳಾಗುವುದು. ಇಲ್ಲಿಯ ಶಾಲೆಗೆ ಬೇರೆ ಜಿಲ್ಲೆಯ ವಿದ್ಯಾರ್ಥಿಗಳು ಹಾಸ್ಟೇಲ್ ನಲ್ಲಿದ್ದುಕೊಂಡು ಬರುತ್ತಾರೆ. ಅವರ ಪಾಲಕರು ಶಿಕ್ಷಕರ ಮೇಲೆ ಭರವಸೆ ಇಟ್ಟು ಮಕ್ಕಳ ಬಿಟ್ಟು