ಅಂಕೋಲಾ ಜಿ.ಸಿ. ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ಬಿ.ಇಡಿ. ಕೋರ್ಸ್ ಉದ್ಘಾ ಟನಾ ಕಾರ್ಯಕ್ರಮ ಪೂರ್ವದಲ್ಲಿ ಸಭಾಪತಿ ಬಸವರಾಜ ಹೊರಟ್ಟಿ ಅವರು ಡಾ.ದಿನಕರ ದೇಸಾಯಿ ಪ್ರತಿಮೆ ಎದರು ಕಾಲೇಜಿನ ಆವಾರಣದ ಸೊಬಗನ್ನು ವೀಕ್ಷಿಸಿದರು. ಎಸ್.ಪಿ. ಕಾಮತ್, ಡಾ.ಗವಿಸಿದ್ದಪ್ಪ ಅಂಗಡಿ, ಡಾ.ಎ.ವಿ. ಕರಿಬಸನಗೌಡರ, ಶಿವಾನಂದ ನಾಯಕ, ಚಿಕ್ಕಪ್ಪ ನಾಯಕ ಇತರರಿದ್ದರು. 
ಉತ್ತರ ಕನ್ನಡ

ರಾಜಕಾರಣಿಗಳಿಗಿಲ್ಲ ಶಿಕ್ಷಣ ನೀಡುವ ಇಚ್ಚಾಶಕ್ತಿ

ಅಂಕೋಲಾ: ಇಂಗ್ಲೀಷ್ ವ್ಯಾಮೋಹ ಇಟ್ಟುಕೊಂಡು ಕೆಲ ಪೋಷಕರು ತರಬೇತಿ ಇರದ ಹಾಗೂ ಅಷ್ಟೊಂದು ನುರಿತರಲ್ಲದ ಶಿಕ್ಷಕರಿರುವ ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಕಳುಹಿಸುತ್ತಿದ್ದಾರೆ. ಇದರ ಪರಿಣಾಮವಾಗಿ ಕನ್ನಡ ಶಾಲೆಗಳು ಮುಚ್ಚು ತ್ತಿವೆ. ಇಂದಿನ ರಾಜಕಾರಣಿ ಹಾಗೂ ಅಧಿಕಾರಿಗಳಿಗೆ ಉತ್ತಮ ಶಿಕ್ಷಣ ನೀಡಬೇಕು ಎನ್ನುವ ಇಚ್ಚಾಶಕ್ತಿ ಕೊರತೆ ಇದೆ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.
ಇಲ್ಲಿನ ಜಿ.ಸಿ.ಕಾಲೇಜಿನ ಯುಜಿಸಿ ಸಭಾಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಸಂಯುಕ್ತ ಶಿಕ್ಷಕರ ಪದವಿ ಕೋರ್ಸ್ ಉದ್ಘಾಟಿಸಿ ಅವರು ಮಾತನಾಡಿದರು. ಈ ಕಾಲೇಜಿನಲ್ಲಿ ನೂತನವಾಗಿ ಆರಂಭಿಸಿದ್ದ ಬಿ.ಇಡಿ. ಕೋರ್ಸ್‌ನ ವ್ಯಾಸಂಗದಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಶಿಕ್ಷಣ ಪಡೆದು ರಾಜ್ಯದ ಉತ್ತಮ ಶಿಕ್ಷಕರಾಗುವ ಜತೆ ಡಾ.ದಿನಕರ ದೇಸಾಯಿ ಅವರ ಹೆಸರು ಉತ್ತುಂಗಕ್ಕೆ ತರಲಿ ಎಂದರು.
ಕೆನರಾ ವೇಲೆಫರ್ ಟ್ರಸ್ಟಿನ ಅಧ್ಯಕ್ಷ ಎಸ್.ಪಿ. ಕಾಮತ ಮಾತನಾಡಿ, ನಮ್ಮ ಭಾಗದಲ್ಲಿ ಏನೇ ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ಸಮಸ್ಯೆ ಬಂದರು ನಮಗೆ ಮೊದಲು ನೆನಪಾಗುವುದು ಹೊರಟ್ಟಿಯವರು. ನಮ್ಮ ಭಾಗದ ಯಾವುದೇ ಶಿಕ್ಷಕರು ತಮ್ಮ ಸಮಸ್ಯೆಯನ್ನು ಹೇಳಿಕೊಂಡಾಗ ಕುಟುಂಬ ಸದಸ್ಯರಂತೆ ಆಲಿಸಿ ಅದನ್ನು ಬಗೆಹರಿಸುತ್ತಾರೆ ಎಂದರು. ಪ್ರಾಧ್ಯಾ ಪಕ ಹಾಗೂ ಎನ್.ಟಿ.ಇ.ಸಿ ಸದಸ್ಯ ಡಾ. ಗವಿಸಿದ್ದಪ್ಪ ಅಂಗಡಿ, ಕರ್ನಾಟಕ ವಿಶ್ವವಿದ್ಯಾಲಯದ ಸ್ನಾತಕೋತ್ತರ ಶಿಕ್ಷಣ ವಿಭಾಗದ ಡೀನ್ ಡಾ.ಎ.ವಿ.ಕರಿಬಸನಗೌಡರ, ಸಿಂಡಿಕೇಟ್ ಸದಸ್ಯ ಶಿವಾನಂದ ನಾಯಕ ಮಾತನಾಡಿದರು.
ಪ್ರಾಚಾರ್ಯ ಡಾ.ಎಸ್.ವಿ. ವಸ್ತ್ರದ ಸ್ವಾಗತಿಸಿದರು. ತಹಸೀಲ್ದಾರ್ ಡಾ.ಚಿಕ್ಕಪ್ಪ ನಾಯಕ, ಆಡಳಿತಾಧಿಕಾರಿ ಆರ್.ವಿ. ಕೇಣಿ, ಪ್ರೊ. ಮೋಹನ ಹಬ್ಬು, ಕಸಾಪ ತಾಲೂಕ ಅಧ್ಯಕ್ಷ ಗೋಪಾಲಕೃಷ್ಣ ನಾಯಕ, ಪ್ರೊ.ಆರ್.ಪಿ.ಭಟ್ ಇತರರಿದ್ದರು.