ಕಾರವಾರ: ಜಿಲ್ಲೆಯಲ್ಲಿ ಖಾಲಿ ಇರುವ ಮನೆಗಳ ಸುರಕ್ಷತೆಗೆ ಲಾಕ್ಡ ಹೌಸ್ ಬೀಟ್ ವ್ಯವಸ್ಥೆಯನ್ನು ಜಾರಿ ಮಾಡಲಾಗಿದೆ ಎಂದು ಎಸ್‌ಪಿ ದೀಪನ್ ಎಂ.ಎನ್.ತಿಳಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು, ಎಲ್ಲ ತಾಲೂಕಿನ ನಗರ ವ್ಯಾಪ್ತಯಲ್ಲಿ ರಕ್ಷಾ ಕಾರ್ಯಕ್ರಮ ಎಂಬ ಹೆಸರಿನಲ್ಲಿ ಈ ವ್ಯವಸ್ಥೆ ಜಾರಿ ಮಾಡಲಾಗಿದೆ. ಮನೆಗಳಲ್ಲಿ ಮಾಲೀಕರಿಲ್ಲದ ಸಮಯವನ್ನು ಉಪಯೋಗಿಸಿಕೊಂಡು ಮಾಡಬಹುದಾದ ಕಳವನ್ನು ತಡೆಯಲು ಈ ಕ್ರಮ ವಹಿಸಲಾಗಿದೆ.
ಲಾಕ್ಡ ಬೀಟ್ ಸಿಸ್ಟಂ ಎಂಬ ವಾಟ್ಸ್ಆ್ಯಪ್ ನಂಬರ್ 8277988303 ಗೆ ಹೆಸರು, ವಿಳಾಸ, ಗೂಗಲ್ ಲೊಕೇಶನ್, ಮನೆಯಿಂದ ಹೊರಗೆ ಹೋಗುವ ಅವಽ. ಮತ್ತು ಮನೆಯ ಮುಂದಿನ ಸೆಲಿ ಟೋಟೋ ಕಳಿಡಬೇಕು. ಅದನ್ನು ಸಂಬಂಧಪಟ್ಟ ಬೀಟ್ ಸಿಬ್ಬಂದಿಗೆ ಕಳಿಸಿ, ರಾತ್ರಿ ಗಸ್ತು ವೇಳೆ ಕನಿಷ್ಠ ಎರಡು ಬಾರಿ ಆ ಮನೆಯನ್ನು ಪರಿಶೀಲಿಸಲು ಕ್ರಮ ವಹಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಬೀಗ ಹಾಕಿದ ಮನೆಗಳನ್ನು ಹುಡುಕಿ ಕಳ್ಳರು ಬಾಗಿಲು ಒಡೆದು, ಗೋಡೆಗೆ ಕನ್ನ ಹಾಕಿ ಕಳ್ಳತನ ಮಾಡುವ ಪ್ರಕರಣಗಳು ಹೆಚ್ಚಿವೆ. ಈಗ ಬೇಸಿಗೆ ರಜೆಗೆ ತೆರಳುವ ಸಂದರ್ಭದಲ್ಲಿ ಇಂಥ ಪ್ರಕರಣಗಳು ಹೆಚ್ಚುತ್ತಿವೆ. ಈ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ರಾಜ್ಯಾದ್ಯಂತ ಈ ಉಪಕ್ರಮವನ್ನು ಜಾರಿಗೆ ತಂದಿದೆ.
ಈಗಾಗಲೇ ಮಹಾ ನಗರಗಳಲ್ಲಿ ಈ ವ್ಯವಸ್ಥೆ ಜಾರಿಯಲ್ಲಿದೆ. ಪ್ರತಿ ಒಂದು ಪ್ರದೇಶವನ್ನು ಒಬ್ಬ ಕಾನ್ಸ್‌ಟೇಬಲ್‌ಗೆ ನೀಡಲಾಗಿದೆ. ಆತನನ್ನು ಬೀಟ್ ಪೊಲೀಸ್ ಎಂದು ಜವಾಬ್ದಾರಿ ವಹಿಸಲಾಗಿದೆ. ಆ ಪ್ರದೇಶದಲ್ಲಿ ನಡೆಯುವ ಎಲ್ಲ ಘಟನೆಗಳ ಬಗ್ಗೆ ಆತ ನಿಗಾ ಇಡಬೇಕಿದೆ. ಅಲ್ಲದೇ ರಾತ್ರಿ ಬೀಟ್ ವ್ಯವಸ್ಥೆಯನ್ನೂ ಜಾರಿ ಮಾಡಲಾಗಿದೆ. ಈಗ ಜಾರಿಗೆ ತಂದಿರುವ ರಕ್ಷಾ ಕಾರ್ಯಕ್ರಮದಿಂದ ಕಳ್ಳತನ ಪ್ರಕರಣಗಳು ಕಡಿಮೆಯಾಗುವ ಸಾಧ್ಯತೆ ಇದೆ.