ದೀಪನ್ ಎಂ.ಎನ್. 
ಉತ್ತರ ಕನ್ನಡ

ಮಾದಕ ದ್ರವ್ಯ ಚಟ ಬಿಡಿಸಲು ಸನ್ಮಿತ್ರ

ಸುಭಾಸ ಹೆಗಡೆ ಧೂಪದಹೊಂಡ
ಕಾರವಾರ: ಮಾದಕ ವಸ್ತು ಸೇವನೆ ಮಾಡಿ ಸಿಕ್ಕಿ ಬೀಳುವವರನ್ನು ಆ ಗೀಳಿನಿಂದ ಹೊರ ತರಲು ಸನ್ಮಿತ್ರ ಎಂಬ ಕಾರ್ಯಕ್ರಮ ಮಾಡಲಾಗುತ್ತಿದೆ ಎಂದು ಎಸ್‌ಪಿ ದೀಪನ್ ಎಂ.ಎನ್. ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾದಕ ವಸ್ತು ಸೇವನೆ ಮಾಡಿ ಸಿಕ್ಕಿ ಬಿದ್ದವರು ತನಿಖೆಗೆ ಸಹಕರಿಸುತ್ತಿದ್ದರೆ ಅವರನ್ನು ಜೈಲಿಗೆ ಕಳಿಸುವುದಿಲ್ಲ. ಅವರಿಗೆ ಠಾಣೆಯಲ್ಲಿಯೇ ಜಾಮೀನು ನೀಡಿ 10 ಸಾವಿರ ರೂ. ದಂಡ ವಿಧಿಸಿ ಕಳಿಸಲಾಗುತ್ತದೆ. ಅಷ್ಟಕ್ಕೇ ಅವರನ್ನು ಬಿಡುವುದಿಲ್ಲ. ತಜ್ಞ ವೈದ್ಯರನ್ನು ಕರೆಸಿ ಅವರಿಗೆ ಕೌನ್ಸೆಲಿಂಗ್ ಮಾಡುವುದು ಹಾಗೂ ವ್ಯಸನ ಬಿಡುವ ಚಿಕಿತ್ಸೆಯನ್ನೂ ಕೊಡಿಸಿದ್ದಿದೆ ಎಂದರು.
ಕಳೆದ ವರ್ಷ ಮಾದಕ ವಸ್ತು ಸೇವನೆ ಸಂಬಂಧ 90 ಪ್ರಕರಣಗಳನ್ನು ದಾಖಲಿಸಿ 104 ಜನರನ್ನು ಬಂಧಿಸಲಾಗಿತ್ತು. ಇನ್ನು ಮಾದಕ ವಸ್ತು ಮಾರಾಟ ಮಾಡುವ ಸಂಬಂಧ 8 ಪ್ರಕರಣ ದಾಖಲಿಸಿದ್ದು, ಅವರಿಗೆ 3.8 ಕೆಜಿ ಗಾಂಜಾ ವಶಕ್ಕೆ ಪಡೆಯಲಾಗಿದೆ ಎಂದರು.
ಒಸಿ ಆಡುತ್ತಿದ್ದ ಸಂಬಂಧ 2024 ರಲ್ಲಿ 267, 2025 ರಲ್ಲಿ 430 ಹಾಗೂ 26 ರಲ್ಲಿ ಮೂರು ತಿಂಗಳಲ್ಲಿ 137 ಪ್ರಕರಣ ದಾಖಲಿಸಲಾಗಿದೆ. ಅಪರಾಧಗಳ ವಿರುದ್ಧ ನಿರಂತರ ಕಾರ್ಯಾಚರಣೆ ನಡೆಯುತ್ತಿದೆ ಎಂದರು.