ಗಣಪತಿ ನಾಯ್ಕ ಅವರಿಗೆ ನಗದು ಬಹುಮಾನ ನೀಡಲಾಯಿತು.  
ಉತ್ತರ ಕನ್ನಡ

ಪ್ರಯಾಣಿಕರನ್ನು ರಕ್ಷಿಸಿದ ಪಾಯಿಂಟ್‌ ಮ್ಯಾನ್‌ ಗೆ ನಗದು ಬಹುಮಾನ

ಸುಭಾಸ ಹೆಗಡೆ ಧೂಪದಹೊಂಡ

ಪ್ರಮುಖ ಮುಖ್ಯಾಂಶಗಳು

  • ಮುರ್ಡೇಶ್ವರದಲ್ಲಿ ನಡೆದ ಘಟನೆ
  • ಪಾಯಿಂಟ್‌ ಮ್ಯಾನ್‌ ಗೆ ನಗದು ಬಹುಮಾನ
ಕಾರವಾರ:ಚಲಿಸುತ್ತಿದ್ದ ರೈಲಿನಿಂದ ಇಳಿಯಲು ಹೋಗಿ ಅಪಾಯಕ್ಕೆ ಸಿಲುಕಿದ್ದ ಪ್ರಯಾಣಿಕನನ್ನು ರೈಲ್ವೆ ಸಿಬ್ಬಂದಿ ಪ್ರಾಣದ ಹಂಗು ತೊರೆದು ರಕ್ಷಿಸಿದ ಘಟನೆ ಭಟ್ಕಳ ಮುರ್ಡೇಶ್ವರ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.
ಕೇರಳ ಕೊಚುವಲಿಯಿಂದ ರಾಜಸ್ತಾನದ ಗಂಗಾನಗರಕ್ಕೆ ತೆರಳುವ ರೈಲು ಮುರ್ಡೇಶ್ವರ ನಿಲ್ದಾಣದ ಬಳಿ ಬರುತ್ತಿದ್ದಂತೆ ಮೊಹಮ್ಮದ್ ಗಫೂರ್ ಎಂಬ ಪ್ರಯಾಣಿಕ ಇಳಿಯಲು ಯತ್ನಿಸಿದ. ಆದರೆ, ರೈಲು ಚಲಿಸುತ್ತಲೇ ಇರುವ ಕಾರಣ ಆತ ಬಿದ್ದು, ರೈಲಿಗೆ ಸಿಲುಕಿ ಹಳಿಯಲ್ಲಿ ಬೀಳುವ ಅಪಾಯದಲ್ಲಿದ್ದ. ರೈಲಿಗೆ ಹಸಿರು ನಿಷಾನೆ ತೋರುವ ಸಲುವಾಗಿ ಅಲ್ಲೇ ನಿಂತಿದ್ದ ಪಾಯಿಂಟ್ ಮ್ಯಾನ್ ಗಣಪತಿ ನಾಯ್ಕ ತಕ್ಷಣ ಸ್ಪಂದಿಸಿ, ಸ್ವತಃ ಪ್ಲಾಟ್‌ಫಾರ್ಮ್ ಮೇಲೆ ಬಿದ್ದು ಪ್ರಯಾಣಿಕನನ್ನು ಎಳೆದು ರಕ್ಷಿಸಿದ್ದಾರೆ. ಅವರ ಸಾಹಸದ ವಿಡಿಯೋ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಸಾಹಸ ಮೆರೆದ ಸಿಬ್ಬಂದಿಗೆ ಕೊಂಕಣ ರೈಲ್ವೆ ಅಧ್ಯಕ್ಷ ಸಂತೋಷ ಕುಮಾರ ಝಾ 10 ಸಾವಿರ ರೂ. ಬಹುಮಾನ ಘೋಷಿಸಿದ್ದಾರೆ. ಕಾರವಾರ ಪ್ರದೇಶ ಮೇಲ್ವಿಚಾರಕ ಸಂಜೀವ ಪೆಡ್ನೇಕರ್ ಬಹುಮಾನ ಹಸ್ತಾಂತರಿಸಿದರು.