ದಾಂಡೇಯಲ್ಲಿ ಜಿಲ್ಲಾ ಸಾಹಿತ್ಯ ಸಮ್ಮೇಳನದ ಎರಡನೇಯ ದಿನ ಉತ್ತರಕನ್ನಡ ಜಿಲ್ಲೆಯ ಯೋಜನೆಗಳು ಮತ್ತು ಸಾಧಕ ಬಾಧಕಗಳ ಬಗ್ಗೆ ಜರುಗಿದ ಗೋಷ್ಠಿಯಲ್ಲಿ ಅಧ್ಯಕ್ಷತೆ ವಹಿಸಿ ಡಾ. ವಿ.ಎನ್. ನಾಯ್ಕ ಮಾತನಾಡಿದರು.
ದಾಂಡೇಲಿ: ನಗರದ ಹಳೆ ನಗರಸಭೆಯ ಮೈದಾನದಲ್ಲಿ ನಡೆಯುತ್ತಿರುವ ರಜತ ಸಂಭ್ರಮದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಎರಡನೇ ದಿನವಾದ ಭಾನುವಾರ ಕವಿ ಕಾವ್ಯ ಸಮಯ ಶಿರ್ಷಿಕೆಯಡಿ ನಡೆದ ಕವಿಗೋಷ್ಠಿ ಕಾರ್ಯಕ್ರಮವು ಯಶಸ್ವಿಯಾಗಿ ಸಂಪನ್ನಗೊಂಡಿತು.
ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ರೋಹಿದಾಸ ನಾಯಕ ಅವರ ಉಪಸ್ಥಿತಿಯಲ್ಲಿ ನಡೆದ ಕವಿಗೋಷ್ಠಿಯಲ್ಲಿ ಜಿಲ್ಲೆಯ ವಿವಿಧ ತಾಲೂಕಿನ ಕವಿಗಳಾದ ಶರೀಫ್ ಹಾರ್ಸಿಕಟ್ಟಾ, ರಾಮಮೂರ್ತಿ ನಾಯಕ, ಮಂಜುನಾಥ ಯಲ್ವಡಿಕವೂರ, ಸುನಂದಾ ಪುರಾಣಿಕ, ಸುಬ್ರಹ್ಮಣ್ಯ ಹೆಗಡೆ, ಗಣಪತಿ ಹೆಗಡೆ, ಶಂಕರ ಗೌಡ ಗುಣವಂತೆ, ಕದಂಬ ರತ್ನಾಕರ, ಯಮುನಾ ಗಾಂವಕರ, ಡಾ.ಎಸ್.ಎಸ್.ದೊಡಮನಿ, ಟಿ.ಕೆ.ಎಂ ಅಜಾದ್, ನರೇಶ ನಾಯ್ಕ, ಜಿ.ಆರ್.ತಾಂಡೇಲ, ಪ್ರಶಾಂತ ಪಟಗಾರ, ವಿಜಯಾ ಗಣಪತಿ ಶೆಟ್ಟಿ, ಸಾವಿತ್ರಿ ಮಾಸ್ಕೇರಿ, ಭವ್ಯ ಹಳೆಯೂರು, ಅರುಣ್ ಕೊಪ್ಪ, ಶಿವಾಜಿ ಚೋಮಣ್ಣವರ, ದೀಪಾಲಿ ಸಾಮಂತ, ಅಶ್ವಿನಿ ಸಂತೋಷ ಶೆಟ್ಟಿ, ನಿರಂಜನ ವಂದಿಗೆ, ಲಕ್ಷ್ಮೀ ಎಚ್. ಮತ್ತು ಪಾಂಡುರಂಗ ಟಿಕ್ಕೋಜಿ ಅವರು ತಮ್ಮ ತಮ್ಮ ಕವಿತೆಗಳನ್ನು ವಾಚಿಸಿದರು.
ಲೇಖಕರಾದ ಅಂಕೋಲಾದ ಫಾಲ್ಗುಣ ಗೌಡ ಅವರು ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು.
ಉತ್ತರಕನ್ನಡ ಜಿಲ್ಲೆಯಲ್ಲಿ ನೈತಿಕತೆಯ ರಾಜ ನೀತಿ ಕುರಿತು ಮಾಜಿ ಉತ್ತರಕನ್ನಡ ಜಿಲ್ಲೆಯ ಜಿಲ್ಲಾ ಪರಿಷತ್ ಅಧ್ಯಕ್ಷ ರಮಾನಂದ ನಾಯ್ಕ ಅಧ್ಯಕ್ಷತೆಯಲ್ಲಿ ಎರಡನೇಯ ಗೋಷ್ಠಿ ಜರುಗಿತು. ದಿನಕರ ದೇಸಾಯಿ ಕುರಿತು ಹೊನ್ನಾವರದ ಸುಧಾ ಭಂಡಾರಿ, ದೇಸಾಯಿ ಅವರ ಆದರ್ಶಗಳ ಬಗ್ಗೆ ಸಿದ್ದಾಪುರದ ಕಶ್ಯಪ ಪರ್ಣಕುಟಿ, ರಾಮಕೃಷ್ಣ ಹೆಗಡೆಯವರ ಬಗ್ಗೆ ಕುಮಟಾದ ಪುಟ್ಟು ಕುಲಕರ್ಣಿ, ಬಿ.ವಿ ನಾಯ್ಕ ಮಾತನಾಡಿದರು.
ಉತ್ತರಕನ್ನಡ ಜಿಲ್ಲೆಯ ಯೋಜನೆಗಳು ಮತ್ತು ಅವುಗಳ ಸಾಧಕ ಬಾಧಕಗಳ ಬಗ್ಗೆ ಧಾರವಾಡದ ವಿಶ್ರಾಂತ ಪ್ರಾಧ್ಯಾಪಕ ಡಾ. ವಿ.ಎನ್ ನಾಯಕ ಮಾತನಾಡಿದರು.
ವಿಠ್ಠಲ ಕೊರರ್ವೆಕರ್, ರವಿ ರೇಡ್ಕರ್, ಡಾ. ಬಿ.ಪಿ ಮಹೇಂದ್ರಕುಮಾರ, ಪಿ. ನಾಗೇಂದ್ರ, ಪ್ರಮೋದ್ ಹರಿಕಾಂತ ಮಾತನಾಡಿದರು.
ಸುಬ್ರಾಯ ಮತ್ತಿಹಳ್ಳಿಯವರ ಅಧ್ಯಕ್ಷತೆಯಲ್ಲಿ ಸಮ್ಮೇಳನ ಅಧ್ಯಕ್ಷರ ಸಾಹಿತ್ಯಾವಲೋಕನ ಸಂವಾದ ಉತ್ತಮವಾಗಿ ಜರುಗಿತು.
ಕಾರ್ಯಕ್ರಮದಲ್ಲಿ ಜಿಲ್ಲೆಯ 25 ಸಾಧಕರನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ಎನ್ ವಾಸರೆ ಸನ್ಮಾನಿಸಿದರು. ಕೊನೆಯದಾಗಿ ಕಾವ್ಯ ಕುಂಚ ಗೋಷ್ಠಿ ಯಲ್ಲಾಪುರದ ವನರಾಗ ಶರ್ಮಾ ಅಧ್ಯಕ್ಷತೆಯಲ್ಲಿ ಜರುಗಿತು. ಸ್ಥಳೀಯ ಕಲಾವಿದರಿಂದ ಸಾಂಸ್ಕೃತಿಕ ಮನೋರಂಜನೆ ಕಾರ್ಯಕ್ರಮದೊಂದಿಗೆ ಎರಡನೇಯ ದಿನದ ಕಾರ್ಯಕ್ರಮ ಮುಕ್ತಾಯಗೊಂಡಿತು.