ಮುಂಡಗೋಡ ಕೆ.ಎಚ್.ಬಿ. ಕಾಲನಿಯಲ್ಲಿ ಚರಂಡಿಯಲ್ಲಿ ನೀರು ಹರಿಯದೆ ಕೊಳಚೆ ನೀರು ಒಂದೆಡೆ ಸಂಗ್ರಹಗೊಂಡಿದೆ. 
ಉತ್ತರ ಕನ್ನಡ

ಸಾಂಕ್ರಾಮಿಕ ರೋಗ infectious disease ಭೀತಿಯಲ್ಲಿ ಮುಂಡಗೋಡ ಜನತೆ

ಪ್ರಮುಖ ಮುಖ್ಯಾಂಶಗಳು

  • ಕೆಎಚ್‌ಬಿ ಕಾಲನಿಯಲ್ಲಿ ಮುಚ್ಚಿಹೋಗಿರುವ ಚರಂಡಿಗಳು
ಮುಂಡಗೋಡ: ಪಟ್ಟಣದ ಕೆಎಚ್‌ಬಿ ಕಾಲನಿಯಲ್ಲಿರುವ ರೋಟರಿ ಶಾಲೆಯ ಬಳಿ ಕೆಲ ಭಾಗಗಳಲ್ಲಿ ಚರಂಡಿಗಳು ಸಂಪೂರ್ಣ ಮುಚ್ಚಿ ಹೋಗಿವೆ. ಇದರಿಂದ ಕೊಳಚೆ ನೀರು ಸಂಗ್ರಹಗೊಂಡು ದುರ್ನಾತದೊಂದಿಗೆ ಸಾಂಕ್ರಾಮಿಕ ರೋಗ infectious disease ಹರಡುವ ಭೀತಿ ಜನರಲ್ಲಿ ಹೆಚ್ಚಿದೆ.
ಕೆಲ ವರ್ಷಗಳಿಂದ ಕೆಎಚ್‌ಬಿ ಕಾಲನಿಯಲ್ಲಿ ಹಳೆಯ ಚರಂಡಿಗಳಿಗೆ ಅಳವಡಿಸಿರುವ ಕಲ್ಲುಗಳು ಬಿದ್ದು ಹೋಗಿ ಚರಂಡಿಗಳು ಮುಚ್ಚಿಕೊಂಡಿವೆ.
ಅಲ್ಲದೆ, ಚರಂಡಿಗಳಲ್ಲಿ ತ್ಯಾಜ್ಯ ತುಂಬಿಕೊಂಡು ಚರಂಡಿಗಳೇ ಇಲ್ಲದಂತಾಗಿವೆ. ಚರಂಡಿಗಳ ಮಾಲಿನ್ಯದಿಂದ ಸೊಳ್ಳೆಗಳ ಕಾಟವು ವಿಪರೀತವಾಗಿದೆ.
ಈ ಕುರಿತು ಪಟ್ಟಣ ಪಂಚಾಯಿತಿ ಅಧಿಕಾರಿಗಳ ಗಮನಕ್ಕೆ ತಂದರೂ ಈವರೆಗೂ ಚರಂಡಿ ದುರಸ್ತಿಗೆ ಮುಂದಾಗಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಇನ್ನಾದರೂ ಸಂಬಂಧಪಟ್ಟ ಪಪಂ ಅಧಿಕಾರಿಗಳು ಎಚ್ಚೆತ್ತುಕೊಂಡು ಪಟ್ಟಣ ವ್ಯಾಪ್ತಿಯಲ್ಲಿನ ಚರಂಡಿಗಳ ಪರಿಶೀಲನೆ ನಡೆಸಿ ಸ್ವಚ್ಛತೆಯತ್ತ ಗಮನಹರಿಸಬೇಕು ಎಂದು ಸಾರ್ವಜನಿಕರ ಆಗ್ರಹಿಸಿದ್ದಾರೆ.
"

ಸ್ಥಳೀಯ ಕೆ.ಎಚ್.ಬಿ. ಕಾಲನಿಯಲ್ಲಿ ಶಾಲೆಯ ಪಕ್ಕದಲ್ಲಿನ ಚರಂಡಿಗಳಲ್ಲಿ ಕೊಳಚೆ ನಿಂತ ನಾರುತ್ತಿದ್ದು, ಮೂಗು ಮುಚ್ಚಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಶಾಲೆಯಲ್ಲಿ ಮಕ್ಕಳಿಗೂ ಸೊಳ್ಳೆಗಳು ಕಚ್ಚುವುದರಿಂದ ರೋಗ ಹರಡುವ ಭೀತಿ ಎದುರಾಗಿದೆ. ಕೂಡಲೇ ಪಪಂ ಅಧಿಕಾರಿಗಳು ಗಮನಹರಿಸಿ ಸ್ವಚ್ಛತೆ ಹಾಗೂ ಚರಂಡಿ ನಿರ್ಮಾಣಕ್ಕೆ ಮುಂದಾಗಬೇಕು.

"

ಪಟ್ಟಣ ವ್ಯಾಪ್ತಿಯಲ್ಲಿ ಮಾಲಿನ್ಯದಿಂದ ಕೂಡಿರುವ ಚರಂಡಿಗಳ ಸ್ವಚ್ಛತೆ ಕೈಗೊಳ್ಳುವಂತೆ ಸಿಬ್ಬಂದಿಗೆ ತಿಳಿಸುತ್ತೇನೆ. ಎಲ್ಲಿಯಾದರೂ ಸ್ವಚ್ಛತೆ ಇಲ್ಲದಿದ್ದರೆ ಸ್ಥಳೀಯರು ಮಾಹಿತಿ ನೀಡಿದರೆ ಕ್ರಮಕೈಗೊಳ್ಳುತ್ತೇನೆ.