ಅಂಕೋಲಾ ತಾಲೂಕು ಆಸ್ಪತ್ರೆಯಲ್ಲಿ ಲ್ಯಾಬ್ ಮತ್ತು ಡಯಾಲಿಸ್‌ಗೆ ಬಂದ ರೋಗಿಗಳಿಗೆ ಆಸನದ ಕೊಠಡಿ (healthcare) ಉದ್ಘಾಟಿಸಿದ ಶಾಸಕ ಸತೀಶ ಸೈಲ್. 
ಉತ್ತರ ಕನ್ನಡ

ರೋಗಿಗಳಿಗೆ ವೈದ್ಯರ ಸೇವೆ ದೊರಕಲಿ Healthcare

ಪ್ರಮುಖ ಮುಖ್ಯಾಂಶಗಳು

  • ಶಾಸಕ ಸತೀಶ ಸೈಲ್ ಸೂಚನೆ
  • ಆರೋಗ್ಯ ರಕ್ಷಾ ಸಮಿತಿ ಸಭೆ
  • ಇನ್ನು ಹೆಚ್ಚಿನ ಮೂಲಸೌಕರ್ಯ
ಅಂಕೋಲಾ: ಆಸ್ಪತ್ರೆಗೆ ಬರುವ ರೋಗಿಗಳಿಗೆ ಸರಿಯಾದ ಔಷಧಗಳು ಮತ್ತು ವೈದ್ಯರ ಸೇವೆ (healthcare) ದೊರಕಬೇಕು.
ಪ್ರತಿಯೊಬ್ಬ ವೈದ್ಯರು ತಮ್ಮ ಕರ್ತವ್ಯವನ್ನು ಮಾಡುವುದರ ಮೂಲಕ ರೋಗಿಗಳಿಗೆ ನೆರವಾಗಬೇಕು. ಆಸ್ಪತ್ರೆಗೆ ಬೇಕಾಗಿರುವ ಮೂಲಭೂತ ಸೌಕರ್ಯಗಳನ್ನು ಈಗಾಗಲೇ ವ್ಯವಸ್ಥೆ ಮಾಡಲಾಗಿದೆ ಎಂದು ಶಾಸಕ ಸತೀಶ ಸೈಲ್ ಹೇಳಿದರು.
ಇಲ್ಲಿನ ತಾಲೂಕ ಸರ್ಕಾರಿ ಆಸ್ಪತ್ರೆಯಲ್ಲಿ ಬುಧವಾರ ಆಯೋಜಿಸಲಾಗಿದ್ದ ಆರೋಗ್ಯ ರಕ್ಷಾ ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಆಸ್ಪತ್ರೆಗೆ ಬರುವ ಅನುದಾನ ಎಷ್ಟು? ಈ ಅನುದಾನ ರೋಗಿಗಳಿಗೆ ಯಾವ ರೀತಿಯಲ್ಲಿ ಸದುಪಯೋಗವಾಗುತ್ತಿದೆ. ಹಾಲಿ ಸೇವೆ ಲ್ಲಿಸುತ್ತಿರುವ ವೈದ್ಯರ ಮತ್ತು ನರ್ಸ್‌ಗಳ ಮಾಹಿತಿ ಪಡೆದುಕೊಂಡರು.
ಮೂಲಭೂತ ಸೌಕರ್ಯಗಳ ಮತ್ತು ಪರಿಕರಗಳ ಅಗತ್ಯತೆ ಕುರಿತು ವಿಚಾರಿಸಿದರು. ಇಲ್ಲಿ ಹಲವು ವೈದ್ಯರು ಉತ್ತಮವಾಗಿ ಕರ್ತವ್ಯ ನಿರ್ವಹಿಸುತ್ತಿರುವುದು ಗಮನಕ್ಕೆ ಬಂದಿದೆ.
ಒಬ್ಬಿಬ್ಬರು ತಪ್ಪು ಮಾಡುವುದರಿಂದ ಇಡೀ ಆಸ್ಪತ್ರೆ ವ್ಯವಸ್ಥೆಗೆ ಕೆಟ್ಟ ಹೆಸರು ಬರುತ್ತದೆ. ಇದು ನಡೆಯದಂತೆ ಜಾಗೃತಿ ವಹಿಸಬೇಕು ಎಂದರು.

ಕೊಠಡಿ ಉದ್ಘಾಟನೆ

ಶಾಸಕರು ರೋಗಿಗಳ ಆರೋಗ್ಯ ಮತ್ತು ಇಲ್ಲಿಯ ವ್ಯವಸ್ಥೆ ಕುರಿತು ಸಂಪೂರ್ಣ ಮಾಹಿತಿ ಪಡೆದುಕೊಂಡರು. ಲ್ಯಾಬ್ ಮತ್ತು ಡಯಾಲಿಸಿಸ್‌ಗೆ ಬಂದ ರೋಗಿಗಳ ಸಂಬಂಧಿಗಳಿಗೆ ಕುಳಿತುಕೊಳ್ಳಲು ವ್ಯವಸ್ಥೆ ಮಾಡಿರುವ ಕೊಠಡಿಯನ್ನು ಉದ್ಘಾಟಿಸಿದರು.
ಅಲ್ಲಿ ಆಸ್ಪತ್ರೆಯ ಸಿಬ್ಬಂದಿ ಮತ್ತು ವೈದ್ಯರೊಂದಿಗೆ ಕೆಲಕಾಲ ಚರ್ಚೆ ನಡೆಸಿದರು.
ಇದೇ ವೇಳೆ ತಾಪಂ ಇಒ ರಾಮು ಗುನಗಿ, ಪುರಸಭೆ ಮುಖ್ಯಾಧಿಕಾರಿ ಏಸು ಬೆಂಗಳೂರು, ಟಿಎಚ್‌ಒ ಡಾ.ಜಗದೀಶ ನಾಯ್ಕ, ಪಾಂಡುರಂಗ ಗೌಡ, ಪಿಐ ಚಂದ್ರಶೇಖರ ಮಠಪತಿ, ಪಿ.ಡಿ. ನಾಯ್ಕ, ಮಂಜೇಶ್ವರ ನಾಯಕ, ಸುಜಾತಾ ಗಾಂವಕರ, ಗೋಪು ನಾಯಕ ಅಡ್ಲೂರು, ಡಾ. ಅನುಪಮಾ ನಾಯಕ, ನಿವೃತ್ತ ವೈದ್ಯ ಡಾ.ಶರದ್ ನಾಯಕ, ಬೆಳಂಬಾರ ಗ್ರಾಪಂ.ಮಾಜಿ ಸದಸ್ಯ ಮಂಜುನಾಥ ಕೆ. ನಾಯ್ಕ, ಜಗದೀಶ ಖಾರ್ವಿ, ನಾಗವೇಣಿ ಗೌಡ, ಜಾನವಿ ಸಿದ್ಧಿ ಉಪಸ್ಥಿತರಿದ್ದರು.
"

ವಾರದಲ್ಲಿ ಮೂರು ದಿನವಾದರೂ ಸ್ತ್ರೀರೋಗ ತಜ್ಞರು, ಮಕ್ಕಳ ತಜ್ಞರು, ಚರ್ಮರೋಗ ತಜ್ಞರು, ಅಂಕೋಲಾ ತಾಲೂಕು ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುವಂತೆ ಆಗಬೇಕು. ಸರ್ಕಾರದಿಂದ ಆಸ್ಪತ್ರೆಗೆ ಇನ್ನು ಹೆಚ್ಚಿನ ಮೂಲಸೌಕರ್ಯ ಕಲ್ಪಿಸುವಂತೆ ಪ್ರಯತ್ನಿಸಲಾಗುವುದು.

— ಸತೀಶ ಸೈಲ್ ಶಾಸಕ, ಕಾರವಾರ-ಅಂಕೋಲಾ ಕ್ಷೇತ್ರ