ದಾಂಡೇಲಿಯಲ್ಲಿ ಏರ್ಪಾಟಾಗಿರುವ ರಾಜ್ಯ ಮಟ್ಟದ ಮುಕ್ತ ಬ್ಯಾಡ್ಮಿಂಟನ್ ಪಂದ್ಯಾವಳಿಗೆ ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಆಟಗಾರ ಅಭಿಷೇಕ ಯಲಿಗಾರ ಶನಿವಾರ ಚಾಲನೆ ನೀಡಿದರು. ವಿವೇಕ ಬನ್ನೆ, ಅಶುತೋಷ್ ಕುಮಾರ್ ರಾಯ್, ಡಾ.ಸಮೀರ್ ಕುಮಾರ್ ಟಿ. ನಾಯಕ, ಮಿಥುನ್ ನಾಯಕ, ಲಿಯೋ ಪಿಂಟೋ, ಎಸ್. ಪ್ರಕಾಶ ಶೆಟ್ಟಿ, ಗುರು ಮಠಪತಿ, ರಿಯಾಜ್ ಇತರರಿದ್ದರು. 
ಉತ್ತರ ಕನ್ನಡ

Encourage ಮಕ್ಕಳ ಕ್ರೀಡಾ ಭವಿಷ್ಯಕ್ಕೆ ಪಾಲಕರ ಉತ್ತೇಜನ ನೀಡಲಿ

ಬಸವರಾಜ ವೀರಪ್ಪ ಗರಗ

ಪ್ರಮುಖ ಮುಖ್ಯಾಂಶಗಳು

  • ಅಂತಾರಾಷ್ಟ್ರೀಯ ಕ್ರೀಡಾಪಟು ಅಭಿಷೇಕ್ ಯಲಿಗಾರ ಸಲಹೆ
  • ಮುಕ್ತ ಬ್ಯಾಡ್ಮಿಂಟನ್ ಪಂದ್ಯಾವಳಿಗೆ ಚಾಲನೆ
ದಾಂಡೇಲಿ: ಇಂದು ಕ್ರೀಡೆಯಲ್ಲಿ ಹೆಚ್ಚಿನ ಅವಕಾಶಗಳಿದ್ದು, ಅದರ ಸಮರ್ಥ ಸದ್ಬಳಕೆಗೆ ವಿದ್ಯಾರ್ಥಿಗಳು ಮುಂದಾಗಬೇಕು. ಈ ನಿಟ್ಟಿನಲ್ಲಿ ಮಕ್ಕಳ ಕ್ರೀಡಾ ಭವಿಷ್ಯಕ್ಕೆ ಪಾಲಕರ ಉತ್ತೇಜನವೂ ಅತಿ ಮುಖ್ಯವಾದುದು ಎಂದು ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಆಟಗಾರ ಅಭಿಷೇಕ್ ಯಲಿಗಾರ ಹೇಳಿದರು.
ರೋಟರಿ ಕ್ಲಬ್, ದಾಂಡೇಲಿ ಬ್ಯಾಡ್ಮಿಂಟನ್ ಅಸೋಸಿಯೇಷನ್ ಮತ್ತು ಬೆಂಗಳೂರಿನ ರಿಯಾಜ್ ಬ್ಯಾಡ್ಮಿಂಟನ್ ಅಕಾಡೆಮಿ ಆಶ್ರಯದಡಿ ಸುಭಾಷನಗರದ ಒಳ ಕ್ರೀಡಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಮುಕ್ತ ಬ್ಯಾಡ್ಮಿಂಟನ್ ಪಂದ್ಯಾವಳಿಗೆ ಚಾಲನೆ ನೀಡಿ ಅವರು ಮಾತನಾಡಿದರು. ಸತತ ಪರಿಶ್ರಮ, ದೈಹಿಕ ಕಸರತ್ತು, ಏಕಾಗ್ರತೆ ಮತ್ತು ತಾಳ್ಮೆ ಕ್ರೀಡಾಪಟುಗಳಿಗೆ ಅತಿ ಮುಖ್ಯ. ಕ್ರೀಡೆಯಲ್ಲಿ ಸಾಧನೆ ಮಾಡುವುದೆಂದರೆ ಅದು ಒಂದು ತಪಸ್ಸು. ಜೀವನದಲ್ಲಿ ಒಂದು ಸ್ಪಷ್ಟವಾದ ಗುರಿ ಇಟ್ಟುಕೊಂಡು ಆ ಗುರಿ ಸಾಧನೆಗೆ ಸತತ ಪ್ರಯತ್ನಶೀಲರಾದಾಗ ಮಾತ್ರ ಸಾಧನೆ ಸಾಧ್ಯವಾಗುತ್ತದೆ ಎಂದರು.
ನಗರಸಭೆ ಪೌರಾಯುಕ್ತ ವಿವೇಕ ಬನ್ನೆ ಹಾಗೂ ರೋಟರಿ ಸಹಾಯಕ ಪ್ರಾಂತಪಾಲ ಡಾ.ಸಮೀರ್ ಕುಮಾರ್ ಟಿ. ನಾಯಕ ಮಾತನಾಡಿದರು. ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಆಟಗಾರ ಅಭಿಷೇಕ್ ಯಲಿಗಾರ ಅವರನ್ನು ಸನ್ಮಾನಿಸಲಾಯಿತು. ರೋಟರಿ ಕ್ಲಬ್ ಕಾರ್ಯದರ್ಶಿ ಮಿಥುನ್ ನಾಯಕ, ಖಜಾಂಚಿ ಲಿಯೋ ಪಿಂಟೋ, ದಾಂಡೇಲಿ ಬ್ಯಾಡ್ಮಿಂಟನ್ ಅಸೋಸಿಯೇಷನ್ ಅಧ್ಯಕ್ಷ ಎಸ್. ಪ್ರಕಾಶ ಶೆಟ್ಟಿ, ಕಾರ್ಯದರ್ಶಿ ಗುರು ಮಠಪತಿ, ರಿಯಾಜ್ ಇತರರು ಉಪಸ್ಥಿತರಿದ್ದರು.
ಅಧ್ಯಕ್ಷತೆ ವಹಿಸಿದ್ದ ರೋಟರಿ ಕ್ಲಬ್ ಅಧ್ಯಕ್ಷ ಅಶುತೋಷ್ ಕುಮಾರ್ ರಾಯ್, ಮಿಥುನ್ ನಾಯಕ ಹಾಗೂ ರೋಟರಿ ಕ್ಲಬ್ ಪ್ರಮುಖ ಎಸ್. ಸೋಮಕುಮಾರ್ ಕಾರ್ಯಕ್ರಮ ನಿರ್ವಹಿಸಿದರು.