ಮುರ್ಡೇಶ್ವರ ಬೀಚ್‌ನಲ್ಲಿ (outrageous behavior) ಈಜಲು ಬಂದಿದ್ದ ಶಿವಮೊಗ್ಗದ ವಿದ್ಯಾರ್ಥಿಗಳಿಗೆ ಬುದ್ಧಿವಾದ ಹೇಳಿದ ಕರಾವಳಿ ಕಾವಲು ಪಡೆಯ ಪೊಲೀಸರು. 
ಉತ್ತರ ಕನ್ನಡ

ಈಜಲು ಬಂದವರ (Outrageous behavior) ಅತಿರೇಕದ ವರ್ತನೆ

ಪ್ರಮುಖ ಮುಖ್ಯಾಂಶಗಳು

  • ಬುದ್ಧಿವಾದ ಹೇಳಿದ ಮುರ್ಡೇಶ್ವರ ಕರಾವಳಿ ಕಾವಲು ಪಡೆ ಪೊಲೀಸರು
  • ಓಶಿಯನ್ ಅಡ್ವೆಂಚರ್ ಬೋಟಿಂಗ್ ಸಿಬ್ಬಂದಿ
  • ವಿದ್ಯಾರ್ಥಿಗಳಿಗೆ ಶಿಸ್ತಿನ ಪಾಠ
ಭಟ್ಕಳ: ಮುರ್ಡೇಶ್ವರ ಬೀಚ್‌ನಲ್ಲಿ ಈಜಲು ಬಂದಿದ್ದ ಶಿವಮೊಗ್ಗ ಜಿಲ್ಲೆಯ ವಿದ್ಯಾರ್ಥಿಗಳ ಗುಂಪೊಂದಕ್ಕೆ ಲೈಫ್‌ಗಾರ್ಡ್ ಹಾಗೂ ಹೋಂ ಗಾರ್ಡ್ ಸಿಬ್ಬಂದಿಯ ಎಚ್ಚರಿಕೆಯನ್ನು ಲೆಕ್ಕಿಸದೆ
(Outrageous behavior) ಅತಿಯಾಗಿ ವರ್ತಿಸಿರುವುದಕ್ಕೆ ಮುರ್ಡೇಶ್ವರ ಕರಾವಳಿ ಕಾವಲು ಪಡೆಯ ಪೋಲಿಸರು ಗರಂ ಆಗಿದ್ದು, ವಿದ್ಯಾರ್ಥಿಗಳಿಗೆ ಶಿಸ್ತಿನ ಪಾಠ ಬೋಧಿಸಿದರು.
ಸಮುದ್ರವನ್ನು ಕಂಡ ತಕ್ಷಣ ವಿದ್ಯಾರ್ಥಿಗಳ ಅತಿರೇಕದ ವರ್ತನೆ ಗಮನಿಸಿದ ಓಶಿಯನ್ ಅಡ್ವೆಂಚರ್ ಬೋಟಿಂಗ್ ಸಿಬ್ಬಂದಿ ತಕ್ಷಣ ತೆರಳಿ ದಡಕ್ಕೆ ಮರಳಿ ಎಂದು ಹೇಳಿದ್ದರು. ಆದರೂ ಮಾತು ಕೇಳದ ವಿದ್ಯಾರ್ಥಿಗಳಿಗೆ ಕರಾವಳಿ ಕಾವಲು ಪಡೆಯ ಎಎಸ್‌ಐ ಎಂ. ಬಾಡಕರ ಅವರ ನೇತೃತ್ವದ ತಂಡವು ಸತತ ಅರ್ಧಗಂಟೆ ಕಾಲ ಮೈಕ್ ಮೂಲಕ ಎಚ್ಚರಿಕೆ ನೀಡಿ ವಿದ್ಯಾರ್ಥಿಗಳನ್ನು ತೀರಕ್ಕೆ ಮರಳುವಂತೆ ಸೂಚಿಸಿದೆ. ಅಂತೂ ಸುರಕ್ಷಿತವಾಗಿ ಮರಳಿದ ವಿದ್ಯಾರ್ಥಿಗಳಿಗೆ ಹಾಗೂ ಪ್ರವಾಸಿಗರಿಗೆ ಪೊಲೀಸರು ಎಚ್ಚರಿಕೆ ನೀಡಿದರು.
ಲೈಫ್‌ಗಾರ್ಡ್ ಹಾಗೂ ಹೋಂ ಗಾರ್ಡ್ ಸೂಚನೆಗಳನ್ನು ಪಾಲಿಸುವುದು ನಿಮ್ಮ ಜೀವದ ಭದ್ರತೆಗಾಗಿ ಅತ್ಯಗತ್ಯ. ಕ್ಷಣಕಾಲದ ಮೋಜು ಮಸ್ತಿಗಾಗಿ ಜೀವವನ್ನು ಬಲಿಕೊಟ್ಟು ನಂಬಿದವರನ್ನು ಕಷ್ಟಕ್ಕೆ ದೂಡಬೇಡಿ ಎಂದು ಬುದ್ಧಿವಾದ ಹೇಳಿದರು.

ಅಲೆಗೆ ಸಿಲುಕಿ ಸಾವು

ಮುರ್ಡೇಶ್ವರ ಸಮುದ್ರ ತೀರಕ್ಕೆ ಪ್ರವಾಸಕ್ಕೆ ಬಂದಿದ್ದ ವ್ಯಕ್ತಿ ಅಲೆಗಳ ಹೊಡೆತಕ್ಕೆ ಸಿಲುಕಿ ಶುಕ್ರವಾರ ಮೃತಪಟ್ಟಿದ್ದಾರೆ. 
ಶಿವಮೊಗ್ಗದ ಹೋಟೆಲ್ ಮಾರಿಕಾಂಬ ಹತ್ತಿರ ವಾಸವಾಗಿದ್ದ ಶುಭಾಸ್ ದೇವೇಂದ್ರಪ್ಪ (45) ಮೃತ ವ್ಯಕ್ತಿ.  
ಗುರುವಾರ ಸಂಜೆ ಸ್ನೇಹಿತನೊಂದಿಗೆ ಶಿವಮೊಗ್ಗದಿಂದ ಮುರ್ಡೇಶ್ವರಕ್ಕೆ ಪ್ರವಾಸಕ್ಕೆ ಆಗಮಿಸಿದ್ದರು. ಶುಕ್ರವಾರ ಮಧ್ಯಾಹ್ನ ಸಮುದ್ರ ಸ್ನಾನಕ್ಕೆ ಇಳಿದ ವೇಳೆ ಅಚಾನಕ್ ಬಲವಾದ ಅಲೆಗಳು ಎಳೆದೊಯ್ದಿದ್ದು,  ನೀರಲ್ಲಿ ಮುಳುಗಿ ಪ್ರಾಣ ಕಳೆದುಕೊಂಡಿದ್ದಾರೆ. 
ಘಟನೆಯ ಕುರಿತು ಮುರ್ಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.