ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ
- ಎಸ್‌ಐಆರ್ ಮೊದಲ ಹಂತ ಮುಕ್ತಾಯ
- ಜಿಲ್ಲೆಯಲ್ಲಿ 1.07 ಲಕ್ಷ ಮತದಾರರ ಹೆಸರು ಡಿಲಿಟ್
- ಕರಡು ಮತದಾರರ ಪಟ್ಟಿ ಪ್ರಕಟ
ಎಸ್‌ಐಆರ್ ಪ್ರಕ್ರಿಯೆಯ ಮೊದಲ ಹಂತ ಮುಕ್ತಾಯವಾಗಿದ್ದು, ಜಿಲ್ಲೆಯ 6 ವಿಧಾನಸಭಾ ಕ್ಷೇತ್ರಗಳ ಕರಡು ಮತದಾರರ ಪಟ್ಟಿಯನ್ನು ಜಿಲ್ಲಾ ಚುನಾವಣಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಅವರು ಸೋಮವಾರ ಪ್ರಕಟಿಸಿದ್ದಾರೆ.
ನಿರೀಕ್ಷೆಯಂತೆ ಜಿಲ್ಲೆಯ ಕರಡು ಪಟ್ಟಿಯಲ್ಲಿ ಮತದಾರರ ಸಂಖ್ಯೆ 1.07 ಲಕ್ಷ ಇಳಿಕೆಯಾಗಿದೆ. ಎಸ್‌ಐಆರ್ ಪ್ರಕ್ರಿಯೆ ಮೊದಲು ಪ್ರಕಟಿಸಿದ ಪಟ್ಟಿಯಲ್ಲಿ ಜಿಲ್ಲೆಯಲ್ಲಿ 12,30,037 ಮತದಾರರಿದ್ದರು. ಈ ಪಟ್ಟಿಯಲ್ಲಿ 11,23,022 ಮತದಾರರಿದ್ದಾರೆ. ಅದರಲ್ಲಿ 5,62,004 ಪುರುಷರು, 5,61,014 ಮಹಿಳೆಯರು ಹಾಗೂ 4 ತೃತೀಯ ಲಿಂಗಿಗಳು ಸೇರಿದ್ದಾರೆ.
ಎಲ್ಲ 12.30 ಲಕ್ಷ ಮತದಾರರಿಗೆ ಎನ್ಯುಮರೇಶನ್ ಫಾರ್ಮ್ ವಿತರಿಸಿದ್ದಾಗಿ ಜಿಲ್ಲಾಡಳಿತ ತಿಳಿಸಿತ್ತು. ಆದರೆ, 4,649 ಫಾರ್ಮ್ಗಳು ಮರಳಿ ಸಂಗ್ರಹವಾಗಿಲ್ಲ. ಅದನ್ನು ಗೈರು ಎಂದು ಗುರುತಿಸಲಾಗಿದೆ. 45,581 ಮತದಾರರು ಬೇರೆ ವಿಧಾನಸಭಾ ಕ್ಷೇತ್ರಕ್ಕೆ ವಲಸೆ ಹೋಗಿದ್ದಾರೆ. ಅವರನ್ನು ಪಟ್ಟಿಯಿಂದ ಕೈಬಿಡಲಾಗಿದೆ. ಇನ್ನು 44,051 ಜನ ಮೃತಪಟ್ಟಿದ್ದು, ಆ ಹೆಸರುಗಳನ್ನೂ ಪಟ್ಟಿಯಿಂದ ಕೈಬಿಡಲಾಗಿದೆ. ಇನ್ನು 12,731 ಹೆಸರುಗಳು ಒಂದಕ್ಕಿಂತ ಹೆಚ್ಚು ಕಡೆ ಇದ್ದು, ಅವುಗಳನ್ನೂ ಕೈಬಿಡಲಾಗಿದೆ.
ಇದರಲ್ಲೂ 65,330 ಅನುಮಾನಾಸ್ಪದ
ಕರಡು ಪಟ್ಟಿಯಲ್ಲಿ ಹೆಸರಿರುವ 65,330 ಮತದಾರರ ದಾಖಲೆಗಳ ಬಗ್ಗೆಯೂ ಅನುಮಾನವಿದೆ. ಅಂಥವರಿಗೆ ನೋಟಿಸ್ ನೀಡಲಾಗುತ್ತಿದೆ. ಎಂದು ಜಿಲ್ಲಾ ಚುನಾವಣಾಽಕಾರಿ ತಿಳಿಸಿದ್ದಾರೆ. ಒಂದೇ ಹೆಸರಿನ ಇಬ್ಬರಿದ್ದಲ್ಲಿ. ಫೋಟೋಗಳು ಬದಲಾಗಿ ಕಾಣಿಸಿದ್ದಲ್ಲಿ ಹೀಗೆ ಮ್ಯಾಪಿಂಗ್‌ನಲ್ಲಿ ತಾಂತ್ರಿಕ ವ್ಯತ್ಯಾಸ ಕಂಡುಬಂದಲ್ಲಿ ಅಂಥ ಮತದಾರರಿಗೆ ನೋಟಿಸ್ ನೀಡಲಾಗುತ್ತಿದೆ. ಬಿಎಲ್‌ಒಗಳ ಮೂಲಕ ನೋಟಿಸ್ ತಲುಪಿಸಲಾಗುತ್ತದೆ. ನೋಟಿಸ್‌ನಲ್ಲಿ ವಿಚಾರಣಾ ದಿನಾಂಕ ಮತ್ತು ಸ್ಥಳ ನಮೂದಿಸಲಾಗುತ್ತದೆ.ಮತದಾರ ಖುದ್ದಾಗಿ ಹಾಜರಾಗಿ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ. ಹಾಜರಾಗದೇ ಇದ್ದಲ್ಲಿ ಎರಡನೇ ಬಾರಿ ಮತ್ತೆ ನೋಟಿಸ್ ನೀಡಲಾಗುತ್ತದೆ. ಗರಿಷ್ಠ ಎರಡು ಬಾರಿ ನೋಟಿಸ್ ನೀಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ರಾಜ್ಯ ಚುನಾವಣಾ ಆಯೋಗದ ವೆಬ್‌ಸೈಟ್ https://ceo.karnataka.gov.in/ ಅಥವಾ ಜಿಲ್ಲಾಡಳಿತದ ವೆಬ್‌ಸೈಟ್ https://uttarakannada.nic.in/ ವೆಬ್‌ಸೈಟ್‌ಗಳ ಮೂಲಕ ಮಾಹಿತಿ ಪಡೆಯಬಹುದಾಗಿದೆ.
ಖುದ್ದಾಗಿ ಹಾಜರಾಗುವುದು ಕಡ್ಡಾಯ
ನೋಟಿಸ್ ಸ್ವೀಕರಿಸಿದ ಮತದಾರರು ಖುದ್ದಾಗಿ ಹಾಜರಾಗಿ ಅಗತ್ಯ ದಾಖಲೆಗಳನ್ನು ಸಲ್ಲಿಸುವುದು ಕಡ್ಡಾಯ ಎಂದು ಜಿಲ್ಲಾಽಕಾರಿ ಕೆ.ಲಕ್ಷ್ಮೀಪ್ರಿಯಾ ತಿಳಿಸಿದರು.
ಸೋಮವಾರ ಎಸ್‌ಐಆರ್ ಸಂಬAಧ ರಾಜಕೀಯ ಪಕ್ಷಗಳ ಮುಖಂಡರ ಸಭೆ ನಡೆಸಿ ಅವರು ಮಾತನಾಡಿದರು. ಸೆಪ್ಟಂಬರ್ 23 ರವರೆಗೆ ಕರಡು ಪಟ್ಟಿಗೆ ಆಕ್ಷೇಪಣೆ ಸಲ್ಲಿಸಲು ಅವಕಾಶವಿದೆ. ನಂತರ ಅವುಗಳನ್ನು ಪರಿಶೀಲನೆ ನಡೆಸಿ ಅಕ್ಟೋಬರ್ 27 ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗುವುದು ಎಂದು ಮಾಹಿತಿ ನೀಡಿದರು.
ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಸುವ ಅವಽಯಲ್ಲಿ, 1-10-2026 ಕ್ಕೆ 18 ವಷÀð ಪೂರ್ಣಗೊಳಿಸುವ ಅರ್ಹ ನಾಗರೀಕರು ಮತದಾರರ ಪಟ್ಟಿಯಲ್ಲಿ ಹೆಸರನ್ನು ಸೇರ್ಪಡೆಗೊಳಿಸಲು ಅವಕಾಶವಿದೆ. ನಮೂನೆ-6 ರೊಂದಿಗೆ ನಿಗದಿತ ದಾಖಲೆಗಳೊಂದಿಗೆ ಡಿಕ್ಲೇರೇಷನ್ ಫಾರಂ ಸಲ್ಲಿಸುವುದು ಕಡ್ಡಾಯವಾಗಿರುತ್ತದೆ. ಅದೇ ರೀತಿಯಲ್ಲಿ ಹೆಸರನ್ನು ಕಡಿಮೆಗೊಳಿಸಲು ನಮೂನೆ-7 ಹಾಗೂ ವಿವಿಧ ತಿದ್ದುಪಡಿ ಹಾಗೂ ಹೆಸರನ್ನು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯೊಳಗೆ ಒಂದು ಮತಗಟ್ಟೆಯಿಂದ ಇನ್ನೊಂದು ಮತಗಟ್ಟೆಗೆ ಅಥವಾ ಒಂದು ವಿಧಾನಸಭಾ ಕ್ಷೇತ್ರದಿಂದ ಇನ್ನೊಂದು ವಿಧಾನಸಭಾ ಕ್ಷೇತ್ರಕ್ಕೆ ಬದಲಾಯಿಸಲು ಸಹ ಅವಕಾಶ ಇರುತ್ತದೆ ಎಂದರು.
ಸಭೆಯಲ್ಲಿ ಅಪರ ಜಿಲ್ಲಾಽಕಾರಿ ಸಾಜಿದ್ ಮುಲ್ಲಾ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರವಿಂದ್ ಕಲ್ಗುಟಕರ್, ರಮೇಶ್ ಮುದಗೇಕರ್, ಜೆಡಿಎಸ್ ಜಿಲ್ಲಾ ಅಧ್ಯಕ್ಷ ಸೂರಜ್ ನಾಯ್ಕ್ ಸೋನಿ, ವಕ್ತಾರ ಉದಯ ಭೋವಿ, ಕೃಷ್ಣ , ಜ್ಞಾನೇಶ್ವರ ಕೊಳಂಬಕರ್, ಬಿಜೆಪಿ ಪಕ್ಷದ ಜಿಲ್ಲಾ ಉಪಾಧ್ಯಕ್ಷ ಸಂಜಯ ಸಾಳುಂಕೆ ಉಪಸ್ಥಿತರಿದ್ದರು.