- 138 ಎಸ್‌ಸಿ, ಎಸ್ ದಂಪತಿ ಅರ್ಜಿಗಳು ಬಾಕಿ
- ಐದು ವರ್ಷಗಳಲ್ಲಿ 400 ಜನರಿಗೆ 11.5 ಕೋಟಿ ರೂ. ವಿತರಣೆ
ಕಾರವಾರ: ಜಾತಿ ವ್ಯವಸ್ಥೆಯನ್ನು ಹೋಗಲಾಡಿಸಲು ಸರ್ಕಾರ ಜಾರಿಗೆ ತಂದ ಯೋಜನೆಗೆ ಗ್ರಹಣ ಹಿಡಿದಿದೆ. ಪರಿಶಿಷ್ಟ ಜಾತಿಯ ವಧು ಅಥವಾ ವರನನ್ನು ವಿವಾಹವಾದರೆ ಸಿಗುವ ಪ್ರೋತ್ಸಾಹಧನ ನೀಡಲು ಅನುದಾನದ ಕೊರತೆ ಉಂಟಾಗಿದೆ. ಜಿಲ್ಲೆಯಲ್ಲಿ ನೆರವು ಪಡೆಯಲು ಅರ್ಜಿ ಸಲ್ಲಿಸಿದ 130 ಕ್ಕೂ ಹೆಚ್ಚು ದಂಪತಿಗೆ ಇದುವರೆಗೂ ಸರ್ಕಾರದಿಂದ ಹಣ ಬಿಡುಗಡೆಯಾಗಿಲ್ಲ.
ಪರಿಶಿಷ್ಟ ಜಾತಿಯ ಮಹಿಳೆ ಬೇರೆ ಜಾತಿಯ ಪುರುಷ ವಿವಾಹವಾದರೆ ಆ ದಂಪತಿಗೆ 3 ಲಕ್ಷ ರೂ., ಪರಿಶಿಷ್ಟ ಜಾತಿಯ ಪುರುಷ ಬೇರೆ ಜಾತಿಯ ಮಹಿಳೆಯನ್ನು ಮದುವೆಯಾದರೆ ಆ ದಂಪತಿಗೆ 2.50 ಲಕ್ಷ ರೂ. ಪ್ರೋತ್ಸಾಹಧನ ನೀಡುವ ಯೋಜನೆ ರಾಜ್ಯದಲ್ಲಿ ಜಾರಿಗೆ ಬಂದು ಹಲವು ವರ್ಷಗಳು ಕಳೆದಿವೆ. ವಿವಾಹವಾಗುವ ಮಹಿಳೆ 18 ರಿಂದ 41 ಮತ್ತು ಪುರುಷ 21 ರಿಂದ 45 ವರ್ಷ ವಯಸ್ಸಿನ ಒಳಗಿರಬೇಕು. ದಂಪತಿಯ ಒಟ್ಟಾರೆ ವಾರ್ಷಿಕ ಆದಾಯ 5 ಲಕ್ಷದೊಳಗಿರಬೇಕು ಎಂಬ ಷರತ್ತಿದೆ.
ಈ ಮೊದಲೆಲ್ಲ ಅರ್ಜಿ ಸಲ್ಲಿಸಿ ಆರು ತಿಂಗಳ ಒಳಗೆ ಪ್ರೋತ್ಸಾಹಧನ ಲಭ್ಯವಾಗುತ್ತಿತ್ತು. ಈಗ ಅಂತರ್ಜಾತಿಯ ವಿವಾಹ ಪ್ರಕರಣಗಳು ಹೆಚ್ಚುತ್ತಿವೆ. ಅರ್ಜಿಗಳ ಸಂಖ್ಯೆಯೂ ಏರಿಕೆಯಾಗಿದೆ. ಹಾಗಾಗಿ ಕೊಂಚ ವಿಳಂಬವಾಗುತ್ತಿದೆ ಇದುವರೆಗೆ 136 ಅರ್ಜಿಗಳು ಬಾಕಿ ಇವೆ ಎನ್ನುತ್ತಾರೆ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು.
ಶೇ.50 ರಷ್ಟು ಠೇವಣಿ
ಅಂತರ್ಜಾತಿ ವಿವಾಹ ಪ್ರೋತ್ಸಾಹಧನ ಪಡೆದ ಬಳಿಕ ಹಣಕ್ಕಾಗಿ ಗಲಾಟೆ ನಡೆದಿದ್ದಿದೆ. ಪತಿ ಹಣವನ್ನು ದುರ್ವ್ಯಸನಗಳಿಗೆ ಖರ್ಚು ಮಾಡುವುದು, ಪತ್ನಿಗೆ ಕಿರುಕುಳ ನೀಡಿದ ಉದಾಹರಣೆಗಳಿವೆ. ಪತಿ, ಪತ್ನಿ ಪರಸ್ಪರ ಗಲಾಟೆ ಮಾಡಿಕೊಂಡು ವಿಚ್ಛೇದನ ಪಡೆಯುವುದು ಮುಂತಾದ ಪ್ರಕರಣಗಳೂ ನಡೆದಿದ್ದವು. ಜಿಲ್ಲೆಯಲ್ಲೂ ಅಂಥ ಪ್ರಕರಣಗಳು ವರದಿಯಾಗಿದ್ದವು. ಇದರಿಂದ ಈ ಕಾರಣಕ್ಕೆ ಪತಿ, ಪತ್ನಿಯ ಜಂಟಿ ಖಾತೆಗೆ ಪಾವತಿಸುವ ಹಣವನ್ನು ಪೂರ್ಣ ಪ್ರಮಾಣದಲ್ಲಿ ಬಳಸಲು ಸಾಧ್ಯವಾಗದಂತೆ ನಿಯಮ ರೂಪಿಸಲಾಗಿದೆ. ದಂಪತಿಯು ಮಕ್ಕಳ ಶಿಕ್ಷಣಕ್ಕೆ ಅಥವಾ ದೀರ್ಘ ಅವಯ ಬಳಕೆಗೆ ಬಳಸಲು ಅನಕೂಲವಾಗುವಂತೆ ಪ್ರೋತ್ಸಾಹಧನದಲ್ಲಿ ಶೇ 50ರಷ್ಟನ್ನು ಸ್ಥಿರ ಠೇವಣಿ ಇರಿಸುವುದನ್ನು ಕಡ್ಡಾಯಗೊಳಿಸಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ವೈ.ಕೆ.ಉಮೇಶ ತಿಳಿಸಿದ್ದಾರೆ.
ಕಳೆದ ಎರಡುವರೆ ವರ್ಷಗಳಲ್ಲಿ ಕಡಿಮೆ
ಕಳೆದ ಐದು ವರ್ಷಗಳಲ್ಲಿ ಜಿಲ್ಲೆಯಲ್ಲಿ 489 ದಂಪತಿ ಸುಮಾರು 11.51 ಕೋಟಿ ರೂ. ಪ್ರೋತ್ಸಾಹಧನ ಪಡೆದುಕೊಂಡಿದ್ದಾರೆ. ಈ ಹಿಂದಿನ ವರ್ಷಗಳಲ್ಲಿ ಕನಿಷ್ಠ 100 ಜನರಿಗೆ ಈ ಸೌಲಭ್ಯ ಲಭ್ಯವಾಗುತ್ತಿತ್ತು. ಆದರೆ, ಈಗ ಎರಡು ವರ್ಷಗಳಲ್ಲೇ ಅನುದಾನದ ಕೊರತೆ ಕಾಣುತ್ತಿದೆ. ಸಮಾಜವಾದಿ, ಜಾತ್ಯತೀತ ಎಂದು ಘೋಷಿಸುವ ಸರ್ಕಾರದ ಅವಧಿಯಲ್ಲೇ ಪರಿಶಿಷ್ಟ ಪಂಗಡಕ್ಕೆ ಅನುದಾನ ಬಾರದೇ ಇರುವುದು ಮಾತ್ರ ವಿಪರ್ಯಾಸದ ಸಂಗತಿ. ಗ್ಯಾರಂಟಿ ಬರದಲ್ಲಿ ಸರ್ಕಾರದ ಬೊಕ್ಕಸ ಖಾಲಿಯಾಗಿದೆ. ಎಸ್‌ಸಿ, ಎಸ್‌ಟಿ ಅನುದಾನವನ್ನು ಸರ್ಕಾರ ಬೇರೆ ಉದ್ದೇಶಕ್ಕೆ ಬಳಸಿಕೊಂಡಿದೆ ಎಂಬ ಆರೋಪಗಳಿಗೆ ಈ ಅನುದಾನ ಪುಷ್ಠಿ ನೀಡುವಂತಿದೆ.
ಪ್ರೋತ್ಸಾಹಧನ ಪಡೆದವರು
ವರ್ಷ ಪ್ರೋತ್ಸಾಹಧನ ಪಡೆದ ದಂಪತಿ ಸಂಖ್ಯೆ ವಿತರಿಸಲಾದ ಮೊತ್ತ
"
ಸರ್ಕಾರಕ್ಕೆ ಪ್ರೋತ್ಸಾಹಧನಕ್ಕೆ ಅರ್ಜಿ ಸಲ್ಲಿಸಲಾಗಿದ್ದು, ಅನುದಾನ ಬಿಡುಗಡೆಯಾದ ತಕ್ಷಣ ಅರ್ಜಿದಾರರಿಗೆ ಹಣ ಜಮಾ ಮಾಡಲಾಗುವುದು. ವೈ.ಕೆ.ಉಮೇಶ್ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ