ಇದ್ರೀಸ್‌  
ಉತ್ತರ ಕನ್ನಡ

ಶಿರಸಿ ಮೂಲದ ಉಗ್ರನಿಗೆ ಎನ್‌ಐಎ ವಿಶೇಷ ಕೋರ್ಟ್‌ನಿಂದ 10 ವರ್ಷ ಜೈಲು ಶಿಕ್ಷೆ

ಕಾರವಾರ: ಪಶ್ಚಿಮ ಬಂಗಾಳದಲ್ಲಿ ನಿಷೇಽತ ಲಷ್ಕರ್-ಎ-ತೊಯ್ಬಾ ಉಗ್ರ ಸಂಘಟನೆಗಾಗಿ ಯುವಕರ ನೇಮಕಾತಿ ಮತ್ತು ಭಯೋತ್ಪಾದನೆಗೆ ಪ್ರಚೋದನೆ ನಡೆಸಿದ್ದ ಶಿರಸಿ ಮೂಲದ ಸಯ್ಯದ್ ಎಂಬ ಇದ್ರೀಸ್ ಎಂಬಾತನಿಗೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ವಿಶೇಷ ನ್ಯಾಯಾಲಯ 10 ವರ್ಷಗಳ ಕಠಿಣ ಶಿಕ್ಷೆ ಹಾಗೂ ದಂಡ ವಿಧಿಸಿದೆ.
2020ರ ಏಪ್ರಿಲ್‌ನಲ್ಲಿ ಪಶ್ಚಿಮ ಬಂಗಾಳ ಪೊಲೀಸ್‌ರಿಂದ ಪ್ರಕರಣವನ್ನು ಸ್ವೀಕರಿಸಿದ್ದ ಎನ್‌ಐಎಗೆ ತನಿಖೆ ವೇಳೆ ಇದ್ರಿಸ್‌ನ ಸುಳಿವು ಸಿಕ್ಕಿತ್ತು. ಅದೇ ವರ್ಷ ನವೆಂಬರ್ 11 ರಂದು ಅಕ್ರಮ ಚಟುವಟಿಕೆಗಳ ತಡೆ ಕಾಯ್ದೆ (ಯುಎ(ಪಿ) ಆ್ಯಕ್ಟ್ ಅಡಿ ಆತನನ್ನು ಬಂಧಿಸಿತ್ತು. ವಿಚಾರಣೆಯ ವೇಳೆ ಆತನ ಮೇಲಿದ್ದ ಆರೋಪಗಳು ಸಾಬೀತಾದ ಹಿನ್ನೆಲೆಯಲ್ಲಿ ಆತನಿಗೆ ಶಿಕ್ಷೆಯ ಜೊತೆ 70 ಸಾವಿರ ರೂ. ದಂಡ ವಿಧಿಸಿ ಕೊಲ್ಕತ್ತಾದ ವಿಶೇಷ ನ್ಯಾಯಾಲಯ ಆದೇಶಿಸಿದೆ ಎಂದು ಎನ್‌ಐಎ ಪ್ರಕಟಣೆ ತಿಳಿಸಿದೆ.

ಲಷ್ಕರ್‌ಗೆ ನೇಮಕಾತಿ:

9 ನೇ ತರಗತಿಗೆ ಶಾಲೆ ಬಿಟ್ಟ ಶಿರಸಿ ಬನವಾಸಿ ರಸ್ತೆಯ ಇದ್ರೀಸ್ ಗೌಂಡಿ ಕೆಲಸ ಮಾಡಿಕೊಂಡಿದ್ದ. ಆದರೆ, ಭಯೋತ್ದಾದಕ ಚಟುವಟಿಕೆಗೆಗೆ ಸ್ಲೀಪರ್ ಸೆಲ್‌ನಂತೆ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಜಮ್ಮು ಮತ್ತು ಕಾಶ್ಮೀರದ ಅಲ್ತಾಲ್ ಅಲ್ ರಾಥರ್, ತಾನಿಯಾ ಫರ್ವೀನ್ ಎಂಬುವವರ ಜೊತೆ ಸೇರಿಕೊಂಡು ಲಷ್ಕರ್‌ಗೆ ಯುವಕರನ್ನು ನೇಮಕಾತಿ ಮಾಡಿಕೊಳ್ಳುತ್ತಿದ್ದರು ಎನ್ನಲಾಗಿದೆ. ಇಲ್ಲಿಂದಲೇ ಪಾಕಿಸ್ತಾನದ ಜೊತೆ ಸಂಪರ್ಕ ಹೊಂದಿದ್ದರು. ಸಾಮಾಜಿಕ ಮಾಧ್ಯಮಗಳ ಮೂಲಕ ಯುವಕರನ್ನು ಭಾರತ ಸರ್ಕಾರದ ವಿರುದ್ಧ ಜಿಹಾದ್ ನಡೆಸುವಂತೆ ಪ್ರೇರೇಪಿಸುತ್ತಿದ್ದರು ಎನ್ನಲಾಗಿದೆ. 2021 ರಲ್ಲಿ ಎನ್‌ಐಎ ಈ ಎಲ್ಲ ಅಂಶಗಳ ತನಿಖೆ ನಡೆಸಿ ದೋಷಾರೋಪಣಾ ಪಟ್ಟಿ ಸಲ್ಲಿಸಿತ್ತು.