ಕಾರವಾರ: ರಾಜ್ಯದಲ್ಲಿ ಇನ್ನೊಂದು ಅಣು ವಿದ್ಯುತ್ ಸ್ಥಾವರ ನಿರ್ಮಾಣ ಮಾಡಲು ಜಾಗ ಹುಡುಕುತ್ತಿರುವ ಎನ್‌ಟಿಪಿಸಿ (ನ್ಯಾಷನಲ್ ಥರ್ಮಲ್ ಪವರ್ ಕಾರ್ಪೋರೇಶನ್) ಉತ್ತರ ಕನ್ನಡ ಜಿಲ್ಲೆಯಲ್ಲೂ ಸಮೀಕ್ಷೆಗೆ ಮುಂದಾಗಿತ್ತು ಎಂಬ ವಿಚಾರ ತಡವಾಗಿ ಬೆಳಕಿಗೆ ಬಂದಿದೆ. ನಮ್ಮಲ್ಲಿ ಇನ್ನೊಂದು ಅಣು ವಿದ್ಯುತ್ ಸ್ಥಾವರ ನಿರ್ಮಾಣ ಸಾಧ್ಯವಿಲ್ಲ ಎಂದು ಲಿಖಿತವಾಗಿ ತಿಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಸ್ಪಷ್ಟಪಡಿಸಿದ್ದಾರೆ.
ರಾಯಚೂರು, ಶಿವಮೊಗ್ಗ ಜಿಲ್ಲೆಯ ಸಾಗರದ ಬೇಗೂರಿನಲ್ಲಿ ಸಮೀಕ್ಷೆಯ ವಿಚಾರ ಬಹಿರಂಗವಾಗುತ್ತಿದ್ದಂತೆ ಜನರಿಂದ ಪ್ರತಿರೋಧ ವ್ಯಕ್ತಿವಾಗಿತ್ತು. ಈಗ ಉತ್ತರ ಕನ್ನಡ ಜಿಲ್ಲೆಯಲ್ಲೂ ಎರಡನೇ ಅಣು ವಿದ್ಯುತ್ ಸ್ಥಾವರಕ್ಕಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂಬ ಸುದ್ದಿ ಚರ್ಚೆಗೆ ಕಾರಣವಾಗಿದೆ.
ಅಣು ವಿದ್ಯುತ್ ಸ್ಥಾವರ ನಿರ್ಮಾಣಕ್ಕೆ ಸ್ಥಳ ಪರಿಶೀಲನೆ ನಡೆಸಲು ರಾಜ್ಯ ಸಚಿವ ಸಂಪುಟವು 2025 ಜುಲೈನಲ್ಲಿ ಪ್ರಾಥಮಿಕ ಅನುಮೋದನೆ ನೀಡಿತ್ತು. ಅದರಂತೆ ಈ ಕುರಿತು ಚರ್ಚೆ ನಡೆಸಲು ಕಂದಾಯ ಇಲಾಖೆ ಅಪರ ಸಮುಖ್ಯ ಕಾರ್ಯದರ್ಶಿ ಮಹಾಂತಯ್ಯ ಎಸ್ ಹೊಸಮಠ ಅವರು ಎನ್‌ಟಿಪಿಸಿ ಅಽಕಾರಿಗಳ ಜತೆಗೂಡಿ ಫೆ.3 ರಂದು ಸಭೆಯೊಂದನ್ನು ನಡೆಸಿದ್ದರು ಎನ್ನಲಾಗಿದೆ.
ಅದರಲ್ಲಿ ಇಂಧನ ಇಲಾಖೆ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಜಾಗಕ್ಕಾಗಿ ಹುಡುಕಾಟ ನಡೆಸಲು ಎನ್‌ಟಿಪಿಸಿ ಪಟ್ಟಿ ಮಾಡಿಕೊಂಡಿರುವ ವಿಜಯಪುರ, ಕೊಪ್ಪಳ, ಶಿವಮೊಗ್ಗ, ರಾಯಚೂರು ಹಾಗೂ ಉತ್ತರ ಕನ್ನಡ ಜಿಲ್ಲಾಽಕಾರಿಗಳು ವಿಡಿಯೋ ಕಾನರೆನ್ಸ್ ಮೂಲಕ ಜಾಯಿನ್ ಆಗಿದ್ದರು ಎನ್ನಲಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಬಾವಿಕೇರಿ, ಬೇಲೆಕೇರಿ ನಡುವಿನ ಸ್ಥಳದಲ್ಲಿ ಸಮೀಕ್ಷೆ ನಡೆಸಲು ಸ್ಥಳ ಗುರುತಿಸಿತ್ತು. ಆದರೆ, ಆ ಸ್ಥಳಕ್ಕೆ ಅತಿ ಸಮೀಪವಾಗಿ ನೌಕಾನೆಲೆ ಇದೆ. ನೌಕಾ ಶಸ್ತಾçಗಾರ ಐಎನ್‌ಎಸ್ ವಜ್ರಕೋಶ ಇದೆ. ವಿಮಾನ ನಿಲ್ದಾಣ, ಬಂದರು ಹೀಗೆ ಹಲವು ಸೌಕರ್ಯಗಳು ಬರುತ್ತಿವೆ. ಮತ್ತು ಅಲ್ಲಿ ಯಾವುದೇ ಅರಣ್ಯ ಅಥವಾ ಸರ್ಕಾರಿ ಜಮೀನಿಲ್ಲ. ಸಂಪೂರ್ಣ ಜನವಸತಿ ಪ್ರದೇಶವಾಗಿದ್ದು, ಅಲ್ಲಿ ಅಣು ವಿದ್ಯುತ್ ಸ್ಥಾವರ ನಿರ್ಮಾಣಕ್ಕೆ ಅವಕಾಶವಿಲ್ಲ ಎಂದು ಸಭೆಯಲ್ಲೇ ಸ್ಪಷ್ಟಪಡಿಸಲಾಗಿದೆ ಎಂದು ಜಿಲ್ಲಾಽಕಾರಿ ಕೆ.ಲಕ್ಷಿ÷್ಮÃಪ್ರಿಯಾ ಅವರು `ವಿಜಯವಾಣಿ'ಗೆ ಸ್ಪಷ್ಟಪಡಿಸಿದ್ದಾರೆ.
ಎನ್‌ಪಿಸಿಐಎಲ್ ಜಾಗ ನೋಡುತ್ತಿದೆ
ನ್ಯೂಕ್ಲಿಯರ್ ಪವರ್ ಕಾರ್ಪೊರೇಶನ್ ಆಫ್ ಇಂಡಿಯಾ(ಎನ್‌ಪಿಸಿಐಎಲ್) ಹೊಸದಾಗಿ ಅಣು ವಿದ್ಯುತ್ ಸ್ಥಾವರ ನಿರ್ಮಾಣಕ್ಕೆ ಕೈಗಾ ಬಿಟ್ಟು ಕರ್ನಾಟಕದ ಬೇರೆಲ್ಲೂ ಸ್ಥಳಕ್ಕಾಗಿ ಇದುವರೆಗೆ ಹುಡುಕಾಟ ನಡೆಸಿಲ್ಲ. ಆದರೆ, ಎನ್‌ಪಿಸಿಐಎಲ್ ದೇಶದಲ್ಲಿ ಇನ್ನಷ್ಟು ಅಣು ವಿದ್ಯುತ್ ಸ್ಥಾವರ ನಿರ್ಮಾಣಕ್ಕೆ ಯೋಜಿಸಿದೆ. ಕರ್ನಾಟಕ ಸೇರಿ ಯಾವುದೇ ರಾಜ್ಯ ಸರ್ಕಾರ ಜಮೀನು ಒದಗಿಸಿದರೆ ಅಣು ವಿದ್ಯುತ್ ಸ್ಥಾವರ ನಿರ್ಮಾಣ ಮಾಡಲಾಗುವುದು ಎಂದು ಎನ್‌ಪಿಸಿಐಎಲ್ ಸಿಎಂಡಿ ಭುವನ್ ಚಂದ್ರ ಪಾಠಕ್ ತಿಳಿಸಿದ್ದರು. ಒಂದುವರೆ ತಿಂಗಳ ಹಿಂದೆ ಕೈಗಾಕ್ಕೆ ಆಗಮಿಸಿದ್ದ ಅವರು ಮಾಧ್ಯಮದ ಪ್ರತಿನಿಽಗಳ ಜೊತೆ ಈ ವಿಚಾರ ಚರ್ಚಿಸಿದ್ದರು.
"
ಅಂಕೋಲಾದಲ್ಲಿ ಸಮೀಕ್ಷೆಗಾಗಿ ಎನ್‌ಟಿಪಿಸಿ ಗುರುತಿಸಿದ್ದ ಜಾಗವು ಅಣು ವಿದ್ಯುತ್ ಸ್ಥಾವರ ನಿರ್ಮಾಣಕ್ಕೆ ಸೂಕ್ತವಲ್ಲ ಎಂದು ಈಗಾಗಲೇ ಸ್ಪಷ್ಟಪಡಿಸಿದ್ದೇವೆ. ಜನ ವದಂತಿಗಳಿಗೆ ಕಿವಿಗೊಡಬಾರದು.
ಕೆ.ಲಕ್ಷ್ಮೀಪ್ರಿಯಾ ಜಿಲ್ಲಾಧಿಕಾರಿ, ಉತ್ತರ ಕನ್ನಡ