ಕುರುಬಾ ದಿನೇಶ ಕುಮಾರ  
ಉತ್ತರ ಕನ್ನಡ

ನೌಕಾಸೇನೆಯ ಸೇಲರ್‌ ನಾಪತ್ತೆ

ಸುಭಾಸ ಹೆಗಡೆ ಧೂಪದಹೊಂಡ

ಪ್ರಮುಖ ಮುಖ್ಯಾಂಶಗಳು

  • ಆಗಸ್ಟ್‌ 27 ರಂದು ನಾಪತ್ತೆ
ಕಾರವಾರ: ಭಾರತೀಯ ನೌಕಾಸೇನೆ ಸೇಲರ್ ಒಬ್ಬರು ನಾಪತ್ತೆಯಾಗಿದ್ದಾರೆ.
ಆಂಧ್ರಪ್ರದೇಶ ರಾಜ್ಯದ ಅನಂತಪುರ ರಾಮಗಿರಿ, ಕುಂಟಿಮಡ್ಡಿ ಬಿ.ಸಿ ಕಾಲನಿಯ ಕುರುಬಾ ದಿನೇಶ ಕುಮಾರ (28
ವರ್ಷ) ನಾಪತ್ತೆಯಾದವರು.
ಆ.27 ರಂದು ಮಧ್ಯಾಹ್ನ 2 ಗಂಟೆಯ ಸಮಯಕ್ಕೆ ಕಾರವಾರ ಅರಗಾದ ನೇವಲ್‌ಬೇಸ್ ನಿಂದ ಕೆಲಸ ಬಿಟ್ಟು ತೆರಳಿದ್ದಾರೆ. ನಂತರ ಎಲ್ಲಿಯೋ ಹೋಗಿ ಕಾಣೆಯಾಗಿದ್ದಾರೆ. ಸಿಸಿ ಟಿವಿ ಫುಟೇಜ್‌ಗಳು, ಹೆಲಿಕಾಪ್ಟರ್‌ ಮೂಲಕ ಸಾಕಷ್ಟು ಹುಡುಕಾಟ ನಡೆಸಿದ ನೌಕಾಸೇನೆಯ ಅಧಿಕಾರಿಗಳು ಅವರು ಪತ್ತೆಯಾಗದ ಕಾರಣ ಕಾರವಾರ ಗ್ರಾಮೀಣ ಠಾಣೆಗೆ ದೂರು ನೀಡಿದ್ದಾರೆ.
ಇವರು ಸಾರ್ವಜನಿಕರಿಗೆ ಕಂಡು ಬಂದಲ್ಲಿ ಕಾರವಾರ ಗ್ರಾಮೀಣ ಪೊಲೀಸ್ ಠಾಣೆ ದೂ. 08382-222443 ನ್ನು ಸಂಪರ್ಕಿಸುವಂತೆ ಕಾರವಾರ ಗ್ರಾಮೀಣ ಪೊಲೀಸ್ ಠಾಣೆಯ ತನಿಖಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.