ಜನಶಕ್ತಿ ವೇದಿಕೆಯ ಪ್ರಮುಖರು ಎಡಿಸಿ ಅವರಿಗೆ ದೂರು ನೀಡಿದರು.
ಕಾರವಾರ: ಕಠಿಣ ಭದ್ರತೆ ಇರುವ ಇಲ್ಲಿನ ಕದಂಬ ನೌಕಾನೆಲೆಯಲ್ಲಿ ಬಾರ್ಡರ್-2 ಚಿತ್ರದ ಪ್ರಮೋಶನ್‌ಗೆ ಅವಕಾಶ ನೀಡಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಜನಶಕ್ತಿ ವೇದಿಕೆಯ ಕಾರ್ಯಕರ್ತರು ಕೇಂದ್ರ ರಕ್ಷಣಾ ಸಚಿವರು ಹಾಗೂ ಗೃಹ ಸಚಿವರಿಗೆ ದೂರು ನೀಡಿದ್ದಾರೆ.
ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ ಅವರ ಮೂಲಕ ಸೋಮವಾರ ತಮ್ಮ ಆಕ್ಷೇಪಣಾ ಪತ್ರವನ್ನು ಸಲ್ಲಿಸಿದರು. ಕದಂಬ ನೌಕಾನೆಲೆ ಸೂಕ್ಷ್ಮ ಪ್ರದೇಶವಾಗಿದ್ದು. ಇಲ್ಲಿ ಜ.14 ರಂದು ಬಾರ್ಡರ್-2 ಚಿತ್ರದ ಪ್ರಮೋಶನ್ ಆಯೋಜಿಸಲಾಗಿತ್ತು. ಸಾರ್ವಜನಿಕರಿಗೆ ಇಲ್ಲಿ ಪ್ರವೇಶವನ್ನು ಕಟ್ಟುನಿಟ್ಟಾಗಿ ನಿರ್ಬಂಧಿಸಲಾಗಿದೆ. ಮಾಧ್ಯಮಗಳ ಪ್ರವೇಶಕ್ಕೂ ನಿರ್ಬಂಧವಿದೆ.
ಒಳಗಡೆ ಮೊಬೈಲ್ ಫೋನ್‌ಗಳಿಗೆ ನಿಷೇಧವಿದೆ. ನೌಕಾ ಸಿಬ್ಬಂದಿ ಸಾಮಾಜಿಕ ಜಾಲತಾಣ ಬಳಕೆಗೆ ನಿರ್ಬಂಧವಿದೆ. ಹಾಗಿರುವಾಗ ಸಾಕಷ್ಟು ಜನ ಕ್ಯಾಮರಾಗಳ ಜೊತೆ ಬಂದು ಸಾಮಾಜಿಕ ಜಾಲತಾಣಗಳಲ್ಲಿ ಸೂಕ್ಷ್ಮ ಪ್ರದೇಶದ ಚಿತ್ರಗಳನ್ನು ಬಿತ್ತರಿಸಿರುವುದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ.
ಉನ್ನತ ಭದ್ರತಾ ವಲಯದಲ್ಲಿ ಚಲನಚಿತ್ರ ಪ್ರಚಾರಕ್ಕೆ ಅನುಮತಿ ನೀಡಿದ್ದಾದರೂ ಹೇಗೆ..?ಇಂಥ ಅನುಮತಿಯಿಂದ ನೌಕಾನೆಲೆಯ ಭದ್ರತೆಗೆ ಧಕ್ಕೆಯಾಗುವ ಸಾಧ್ಯತೆ ಇದ್ದು, ರಾಷ್ಟç ವಿರೋಽ ಚಟುವಟಿಕೆಗಳಿಗೆ ಅನುಕೂಲವಾಗುವ ಸಾಧ್ಯತೆ ಇದೆ ಎಂದು ದೂರಿದ್ದಾರೆ. ಜನಶಕ್ತಿ ವೇದಿಕೆಯ ಮಾಧವ ನಾಯ್ಕ, ಕಸಾಪ ತಾಲೂಕು ಅಧ್ಯಕ್ಷ ರಾಮಾ ನಾಯ್ಕ, ಇತರರು ಇದ್ದರು.