- ಸುಪ್ರೀಂ ಕೋರ್ಟ್ ಆದೇಶದಂತೆ ಹೊಸ ಕಾಯ್ದೆ
- ಹೆದ್ದಾರಿ ಪಕ್ಕದ ಭೂ ಮಾಲೀಕರಲ್ಲಿ ಆತಂಕ
ಸುಭಾಸ ಧೂಪದಹೊಂಡ/ಗಣಪತಿ ಭಟ್
ರಾಷ್ಟ್ರೀಯ ಹೆದ್ದಾರಿ ನಡುವಿನ ರೇಖೆಯಿಂದ 75 ಮೀಟರ್‌ವೆಗೆ ವಾಣಿಜ್ಯ ಕಟ್ಟಡಗಳನ್ನು ನಿರ್ಮಿಸಲು ಅನುಮತಿ ನೀಡಬಾರದು ಎಂದು
ಹೆದ್ದಾರಿ ಪ್ರಾಽಕಾರ ಸುತ್ತೋಲೆ ಹೊರಡಿಸಿದ್ದು, ಹೈವೆ ಪಕ್ಕದ ಕಟ್ಟಡ ಹಾಗೂ ಜಮೀನಿನ ಮಾಲೀಕರ ಆತಂಕಕ್ಕೆ ಕಾರಣವಾಗಿದೆ.
ಸುಪ್ರೀಂ ಕೋರ್ಟ್ ಇದೇ ವರ್ಷ ಏಪ್ರಿಲ್‌ನಲ್ಲಿ ನೀಡಿದ ಆದೇಶದಂತೆ ಈ ಕ್ರಮ ವಹಿಸಲಾಗಿದೆ. ಇದರಿಂದ ನಿಗದಿತ ಕಟ್ಟಡ ಗಡಿ ರೇಖೆಯ ಒಳಗೆ ಸ್ವಂತ ಜಾಗದಲ್ಲಿ ನಿರ್ಮಿಸಿದ ಕಟ್ಟಡಗಳನ್ನೂ ಅಕ್ರಮ ಎಂದು ಪರಿಗಣಿಸಿ, ಅವುಗಳ ತೆರವಿಗೆ ಎನ್‌ಎಚ್‌ಎಐನಿಂದ ನೋಟಿಸ್ ನೀಡಲಾಗುತ್ತಿದೆ. ಕೃಷಿ ಜಮೀನುಗಳನ್ನು ಎನ್‌ಎ ಮಾಡಬೇಕಾದರೆ ಈ ನಿಯಮ ಜಾರಿ ಮಾಡಲಾಗುತ್ತಿದ್ದು, ಹೊಸದಾಗಿ ಯಾವುದೇ ಕಟ್ಟಡ ನಿರ್ಮಾಣ ಮಾಡಬೇಕೆಂದಲ್ಲಿ ಸ್ಥಳೀಯ ಸಂಸ್ಥೆಗಳಿAದ ಅನುಮತಿ ನಿರಾಕರಿಸಲಾಗುತ್ತಿದೆ.
ಈ ಮೊದಲು 2019ರ ಸುತ್ತೋಲೆಯಂತೆ ರಾಷ್ಟಿçಯ ಹೆದ್ದಾರಿಯ ನಡುವಿನ ರೇಖೆಯಿಂದ 40 ಮೀಟರ್ ಒಳಗಿನ ಪ್ರದೇಶವನ್ನು ಬಫರ್ ಜೋನ್ ಎಂದು ಪರಿಗಣಿಸಿ, ಅಲ್ಲಿ ಯಾವುದೇ ವಾಣಿಜ್ಯ ಹಾಗೂ ವಸತಿ ಕಟ್ಟಡ ನಿರ್ಮಾಣಕ್ಕೆ ಅವಕಾಶ ನೀಡಲಾಗುತ್ತಿರಲಿಲ್ಲ. ಸುಪ್ರೀಂ ಆದೇಶದಂತೆ ಈಗ ವಸತಿ ಕಟ್ಟಡಗಳ ನಿರ್ಮಾಣಕ್ಕೆ 40 ಮೀಟರ್ ಸೆಟ್ ಬ್ಯಾಕ್ ಮುಂದುವರಿದಿದೆ. ಆದರೆ, ವಾಣಿಜ್ಯ ಕಟ್ಟಡಗಳ ನಿರ್ಮಾಣಕ್ಕೆ ಕಟ್ಟಡ ನಿರ್ಮಾಣ ರೇಖೆಯನ್ನು 75 ಮೀಟರ್‌ವರೆಗೆ ವಿಸ್ತರಿಸಿ ಭಾರತ ಸರ್ಕಾರದ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಜೂನ್ 4 ರಂದು ಸುತ್ತೋಲೆ ಹೊರಡಿಸಿದೆ. ಸುಪ್ರೀಂ ಕೋರ್ಟ್ ಆದೇಶವನ್ನು ಜಾರಿ ಮಾಡಲು ಸಂಬAಧಪಟ್ಟ ಜಿಲ್ಲಾಽಕಾರಿ ಮತ್ತು ಸ್ಥಳೀಯ ಸಂಸ್ಥೆಗಳಿಗೆ ನಿರ್ದೇಶನ ನೀಡುವಂತೆ ಎಲ್ಲ ರಾಜ್ಯಗಳ ಪಿಡಬ್ಲುಡಿ ಕಾರ್ಯದರ್ಶಿಗಳಿಗೆ ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಹೊಸ ನಿಯಮದಂತೆ ಈಗ ಹೆದ್ದಾರಿ ಪಕ್ಕದ ಭಾರಿ ಬೆಲೆ ಬಾಳುವ ಜಮೀನುಗಳು ನಿರುಪಯುಕ್ತವಾಗಲಿವೆ. ಸಾವಿರಾರು ಕಟ್ಟಡಗಳು ಅಕ್ರಮ ವ್ಯಾಪ್ತಿಗೆ ಸೇರಿ, ಪ್ರತಿನಿತ್ಯ ಸಮಸ್ಯೆ ಎದುರಿಸುವ ಆತಂಕವೂ ಇದೆ.
ಸುಪ್ರೀಂ ಕೋರ್ಟ್ ಆದೇಶವೇನು..?
ರಾಜಸ್ತಾನದ ಪಾಲೋಡಿ ಹಾಗೂ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯಲ್ಲಿ 2025 ರ ನವೆಂಬರ್ 2 ಮತ್ತು 3 ರಂದು ರಾಷ್ಟಿçÃಯ ಹೆದ್ದಾರಿಗಳಲ್ಲಿ ಸಂಭವಿಸಿದ ಅಪಘಾತಗಳಲ್ಲಿ ಒಟ್ಟು 34 ಜನ ಪ್ರಾಣ ಕಳೆದುಕೊಂಡ ಘಟನೆಯ ನಂತರ ಸುಪ್ರೀಂ ಕೋರ್ಟ್ ಸ್ವಯಂಪ್ರೇರಿತವಾಗಿ ಸಾರ್ವಜನಿಕ ಹಿತಾಸಕ್ತಿ ಪಿಟೀಶನ್ ದಾಖಲಿಸಿಕೊಂಡಿತ್ತು. ವಿಚಾರಣೆ ನಡೆಸಿ ಈ ವರ್ಷ ಏಪ್ರಿಲ್ 13 ರಂದು ಮಹತ್ವದ ಆದೇಶ ನೀಡಿದೆ.
ರಾಷ್ಟ್ರೀಯ ಹೆದ್ದಾರಿಗಳ ಪಕ್ಕ ವಾಣಿಜ್ಯ ಬಳಕೆಗೆ 75 ಮೀಟರ್ ಮತ್ತು ಸ್ತವ್ಯದ ಬಳಕೆ ಬಳಕೆಗೆ 40 ಮೀಟರ್ ಜಮೀನು ಬಳಸದಂತೆ ಪರಿಷ್ಕೃತ ಅಧಿಸೂಚನೆಯನ್ನು ಸಂಬAಧಪಟ್ಟ ರಾಜ್ಯ ಸರ್ಕಾರ ಹೊರಡಿಸಬೇಕು. ಅಲ್ಲದೇ
ರಾಷ್ಟ್ರೀಯ ಹೆದ್ದಾರಿಗಳಲ್ಲಿ , ಸರ್ವೀಸ್ ರಸ್ತೆಗಳ ಮೇಲೆ ಮತ್ತು ಪಾವ್ಡ ಶೋಲ್ಡರ್ಸ್ ವ್ಯಾಪ್ತಿಯಲ್ಲಿ ಬಸ್, ಲಾರಿ ಅಥವಾ ಯಾವುದೇ ಭಾರಿ ವಾಹನ ನಿಲುಗಡೆಯನ್ನು ಕಡ್ಡಾಯವಾಗಿ ನಿಷೇಽಸಬೇಕು. ಹೆದ್ದಾರಿ ಪಕ್ಕ (ಆರ್‌ಒಡಬ್ಲು) ನಲ್ಲಿ ಹೊಸ ದಾಬಾ, ಹೋಟೆಲ್, ಅಥವಾ ವಾಣಿಜ್ಯ ಕಟ್ಟಡ ನಿರ್ಮಿಸುವುದನ್ನು ತಕ್ಷಣ ನಿಷೇಽಸಬೇಕು. ಅಕ್ರಮವಾಗಿ ನಿರ್ಮಿಸಿದ ಹೊಸ, ಹಳೆಯ ಕಟ್ಟಡಗಳನ್ನು ನಿಯಮಾನುಸಾರ 60 ದಿನಗಳ ಒಳಗೆ ತೆರವು ಮಾಡಬೇಕು. ಇನ್ನು ಮುಂದೆ ಹೈವೆ ಸೇಫ್ಟ್ ಜೋನ್(ಕಟ್ಟಡ ನಿರ್ಮಾಣ ರೇಖೆ)ಯಲ್ಲಿ ಯಾವುದೇ ಹೊಸ ಕಟ್ಟಡ ನಿರ್ಮಾಣಕ್ಕೆ ಅವಕಾಶ ನೀಡಬಾರದು. ಅಥ ಕಟ್ಟಡಗಳಿಗೆ ಸ್ಥಳೀಯ ಸಂಸ್ಥೆಗಳು ಕಟ್ಟಡ ಪರವಾನಗಿ, ಎನ್‌ಒಸಿ ಅಥವಾ ಟ್ರೇಡ್ ಲೈಸನ್ಸ್ ನೀಡಬಾರದು. ಪ್ರತಿ ಜಿಲ್ಲೆಯಲ್ಲಿ ಹೆದ್ದಾರಿ ಸುರಕ್ಷಾ ಟಾಸ್ಕ್ ಫೋರ್ಸ್ ರಚಿಸಬೇಕು. ಅದರಲ್ಲಿ ಜಿಲ್ಲಾಽಕಾರಿ, ಎಸ್‌ಪಿ, ಎನ್‌ಎಚ್‌ಎಐ ಹಾಗೂ ಪಿಡಬ್ಲುಡಿ ಹಗೂ ಸ್ಥಳೀಯ ಸಂಸ್ಥೆಗಳ ಪ್ರತಿನಿಽಗಳು ಇರಬೇಕು ಹಾಗೂ ಎಂದು ಸುಪ್ರೀಂ ಆದೇಶದಲ್ಲಿ ತಿಳಿಸಿದೆ.
ಮಾನ್ಯ ಸುಪ್ರೀಂ ಕೋರ್ಟ್ ಆದೇಶದಂತೆ ಭಾರತ ಸರ್ಕಾರದ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಹೊರಡಿಸಿದ ಸುತ್ತೋಲೆಯ ನಿರ್ದೇಶನಗಳನ್ನು ನಾವು ಎನ್‌ಎ ಮಾಡುವಾಗ ಪಾಲಿಸುತ್ತಿದ್ದೇವೆ.
ಜಿಲ್ಲಾಧಿಕಾರಿ, ಉತ್ತರ ಕನ್ನಡ
ನಮ್ಮ ವ್ಯಾಪ್ತಿಗೆ ಬರುವ ರಾಷ್ಟ್ರೀಯ ಹೆದ್ದಾರಿಗಳ ಪಕ್ಕದಲ್ಲಿ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡುವಾಗ ಸುಪ್ರೀಂ ಕೋರ್ಟ್ನ ಇತ್ತೀಚಿನ ಆದೇಶ ಪಾಲಿಸಲು ಕ್ರಮ ವಹಿಸುವಂತೆ ಜಿಲ್ಲಾಽಕಾರಿ ಅವರಿಗೆ ಪತ್ರ ಬರೆಯಲಾಗಿದೆ. ಅಕ್ರಮ ಎಂದು ಪರಿಗಣಿಸಿದ ಕಟ್ಟಡಗಳಿಗೆ ಸಂಬಂಧಪಟ್ಟವರಿಂದ ನೋಟಿಸ್ ನೀಡುವ ಪ್ರಕ್ರಿಯೆಯೂ ನಡೆದಿದೆ.
ಪಿಡಿ, ಎನ್‌ಎಚ್‌ಎಐ ಹೊನ್ನಾವರ