ತಾಲೂಕಿನ ಮುರ್ಕವಾಡ ಗ್ರಾಮದ ಶ್ರೀ ಲಕ್ಷ್ಮಿದೇವಿ ಜಾತ್ರಾ ಮಹೋತ್ಸವದ (Rathotsava)ಅಂಗವಾಗಿ ತೇರು ಎಳೆಯುವ ಕಾರ್ಯಕ್ರಮ ಸಾಂಗವಾಗಿ ನೆರವೇರಿತು. 
ಉತ್ತರ ಕನ್ನಡ

ಭಕ್ತಿ ಭಾವದ ಮುರ್ಕವಾಡ ರಥೋತ್ಸವ Rathotsava

ಹಳಿಯಾಳ: ತಾಲೂಕಿನ ಮುರ್ಕವಾಡ ಗ್ರಾಮದ ಶ್ರೀ ಲಕ್ಷ್ಮಿದೇವಿ ಜಾತ್ರಾ ಮಹೋತ್ಸವದ (Rathotsava)ಅಂಗವಾಗಿ ತೇರು ಎಳೆಯುವ ಕಾರ್ಯಕ್ರಮ ಸಾಂಗವಾಗಿ ನೆರವೇರಿತು.
ಮರಾಠಾ ಜಗದ್ಗುರು ವೇದಾಂತಾಚಾರ್ಯ ಶ್ರೀ ಮಂಜುನಾಥ ಭಾರತೀ ಸ್ವಾಮೀಜಿಯವರು ಅರವತ್ತು ಅಡಿಗಿಂತಲೂ ಎತ್ತರವಿದ್ದ ರಥದಲ್ಲಿ ಶ್ರೀ ಲಕ್ಷ್ಮಿದೇವಿಯ ವಿಗ್ರಹ ವಿರಾಜಮಾನವಾದ ನಂತರ ರಥಕ್ಕೆ ಪೂಜೆ ಸಲ್ಲಿಸಿ ಮಂತ್ರೋದ್ಘೋಷಗಳೊಂದಿಗೆ ಆರತಿಯನ್ನು ಸಮರ್ಪಿಸಿ ಗ್ರಾಮದೇವಿ ಜಾತ್ರಾ ಮಹೋತ್ಸವ ಸಮಿತಿಯ ಮುಖಂಡರುಗಳು ಹಾಗೂ ಮರಾಠಾ ಸಮಾಜದ ಮುಖಂಡರುಗಳ ಸಮ್ಮುಖದಲ್ಲಿ ತೇರನ್ನು ಎಳೆಯುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಜಾತ್ರೋತ್ಸವ ಸಮಿತಿಯವರು 20 ಕ್ವಿಂಟಾಲ್ನಷ್ಟು ಭಂಡಾರವನ್ನು ಎರಚಲು ತಂದಿರುವ ಮಾಹಿತಿಯಿದ್ದು, ಬಹಳ ಎಚ್ಚರಿಕೆಯಿಂದ ಉಪಯೋಗಿಸಲು ತಿಳಿಸಿ ಶ್ರೀಗಳು ತಿಳಿಸಿದರು.
ಅತಿ ಕಿರಿದಾದ ರಸ್ತೆಯಲ್ಲಿ ಬೃಹತ್ ರಥವನ್ನು ಅತೀ ಸೂಕ್ಷ್ಮ ಹಾಗೂ ಎಚ್ಚರಿಕೆಯಿಂದ ಎಳೆದುಕೊಂಡು ಹೋಗಿದ್ದನ್ನು ನೋಡಲು ರೋಮಾಂಚಕಾರಿಯಾಗಿದ್ದಲ್ಲದೇ ಭಕ್ತರು ತೇರಿಗೆ ಉತ್ತತ್ತಿ ,ಬಾಳೆಹಣ್ಣು, ಎಸೆದು ತಮ್ಮ ಭಕ್ತಿಯನ್ನು ಸಮರ್ಪಿಸಿದರು.