ಮುಂಡಗೋಡ: ಪಟ್ಟಣದ ಬಸ್ ನಿಲ್ದಾಣದ ಎದುರಿನ ಅಂಬಿಕಾ ಹೋಟೆಲ್'ಗೆ ಊಟಕ್ಕೆ ಬಂದಿದ್ದ ರೌಡಿ ಶೀಟರ್ ಜಮೀರ್ ಅಹ್ಮದ್ ದರ್ಗಾವಾಲೆ ಮೇಲೆ ಖಾರದ ಪುಡಿ ಎರಚಿ ಚಾಕುವಿನಿಂದ ಚುಚ್ಚಿ ಕತ್ತು ಸೀಳಿ ಭೀಕರವಾಗಿ ಕೊಲೆ ಮಾಡಿದ ಘಟನೆ ಶುಕ್ರವಾರ ರಾತ್ರಿ ಜರುಗಿದೆ.
ಪಟ್ಟಣದ ನೂರಾನಿಗಲ್ಲಿ ನಿವಾಸಿಯಾಗಿರುವ ಜಮೀರ್ ಅಹ್ಮದ್ ದರ್ಗಾವಾಲೆ ಫೈನಾನ್ಸ್ ನಡೆಸುತ್ತಿದ್ದ ಅಲ್ಲದೆ ಹಲವು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ .
ಫೈನಾನ್ಸ್ ನಡೆಸುತ್ತಿದ್ದ ಜಮೀರ್ ಅಹ್ಮದ್ ಜೊತೆಯಲ್ಲಿ ಪ್ರತಿ ದಿನವೂ ಹತ್ತಾರು ಯುವಕರು ಜೊತೆಯಲ್ಲಿ ಇರುತ್ತಿದ್ದರು ಈತ ಎಲ್ಲಿಗೆ ಹೋದರು ಆತನ ಹಿಂದೆ ಮುಂದೆ ಭದ್ರತೆಗಾಗಿ ಯುವಕರು ಇರುತ್ತಿದ್ದರು. ಜೊತೆಗೆ ಪೈನಾನ್ಸನಿಂದ ಸಾಲ ಪಡೆದವರಿಂದ ಹಣ ವಸೂಲಿಯನ್ನು ಈ ಯುವಕರ ತಂಡ ಮಾಡುತಿತ್ತು.
ಊಟಕ್ಕೆ ಬಂದು ಹೆಣವಾದ:
ಜಮೀರ್ ಅಹ್ಮದ್ ಇತ್ತೀಚೆಗೆ ಆಗಾಗ ಬೈಕ್ ಮೇಲೆ ಒಬ್ಬನೇ ಪ್ರತ್ಯಕ್ಷವಾಗುತಿದ್ದ ಶುಕ್ರವಾರ ರಾತ್ರಿ ಐಪಿಎಲ್ ಕ್ರಿಕೆಟ್ ಪಂದ್ಯ ನೋಡಿ. ತನ್ನ ಸ್ನೇಹಿತ ಸಾಧಿಕ್ ಎಂಬವನ ಜೊತೆಗೂಡಿ ಜಮೀರ್ ಅಹ್ಮದ್ ಬೈಕ್ ಮೇಲೆ ಬಸ್ ನಿಲ್ದಾಣದ ಎದುರಿಗೆ ಇರುವ ಅಂಬಿಕಾ ಸಾವಜಿ ಹೋಟೆಲಿಗೆ ರಾತ್ರಿ 11.10ಕ್ಕೆ ಬಂದಿದ್ದ. ಸಾಧಿಕ್ ಮನೆಯಲ್ಲಿಯೇ ಊಟ ಮಾಡಿದ ಪರಿಣಾಮ ಸಿಗರೇಟ್ ತರಲು ಹೊರಗೆ ಹೋಗಿದ್ದ ಎನ್ನಲಾಗಿದೆ.
ನಾಲ್ಕು ಯುವಕರಿಂದ ಹತ್ಯೆ:
ಜಮೀರ್ ಅಹ್ಮದ್ ಊಟ ಮಾಡುತ್ತಿರುವಾಗ ಹೋಟೆಲ್ ಗೆ ನುಗ್ಗಿದ ನಾಲ್ವರ ತಂಡ ಕಣ್ಣಿಗೆ ಖಾರದ ಪುಡಿಯನ್ನು ಎರಚಿದ್ದಾರೆ ಈ ವೇಳೆ ತಪ್ಪಿಸಿಕೊಳ್ಳಲು ಜಮೀರ್ ಊಟದ ಟೇಬಲ್ ಬಿಟ್ಟು ಹೋಟೆಲ್ ನ ಅಡುಗೆ ಕೋಣೆಯತ್ತ ಓಡಿ ಹೋಗಿದ್ದಾನೆ ಹಿಂದಿನಿಂದ ಹೋದ ಕೊಲೆಗಾರರು ಚಾಕುವಿನಿಂದ ಎದೆಗೆ ಚುಚ್ಚಿ ನಂತರ ಕತ್ತು ಸೀಳಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.
ಸ್ಥಳಕ್ಕಾಗಮಿಸಿದ ಪೊಲೀಸರು ರಕ್ತದ ಮಡುವಿನಲ್ಲಿ ಬಿದ್ದಿದ್ದ ಜಮೀರ್ ಅಹ್ಮದ್ ನ ಮೃತ ದೇಹವನ್ನು ತಾಲೂಕಸ್ಪತ್ರೆಗೆ ರವಾನಿಸಿ ಹೋಟೆಲ್ ಅಕ್ಕ ಪಕ್ಕದ ಸಿಸಿ ಕ್ಯಾಮರಾಗಳನ್ನು ತಪಾಸಣೆ ನಡೆಸಿದ್ದು ನಾಲ್ವರಲ್ಲಿ ಒಬ್ಬ ಹೋಟೆಲಿನಲ್ಲಿ ಕೆಲಸ ಮಾಡುತ್ತಿದ್ದ ಶ್ರೀಕಾಂತ ಎಂಬ ಯುವಕನ ಗುರುತು ಸಿಕ್ಕಿದ್ದು ಉಳಿದ ಮೂವರು ಯಾರೆಂದು ಪತ್ತೆಯಾಗಿಲ್ಲ ಆರೋಪಿಗಳು ಎಲ್ಲರೂ ಬೆಂಗಳೂರನತ್ತ ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಎಸ್.ಪಿ ಭೇಟಿ:
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ ಎಂ. ಎನ್, ಶಿರಸಿ ಡಿವೈಎಸ್ ಪಿ ಗೀತಾ ಪಾಟೀಲ, ಸಿಪಿಐ ರಂಗನಾಥ್ ನೀಲಮ್ಮನವರ
ಅವರು ಶನಿವಾರ ಬೆಳಗ್ಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು ಹಾಗೂ ಹೋಟೆಲ್ ಮಾಲಿಕನಿಂದ ಘಟನೆಯ ಕುರಿತು ಮಾಹಿತಿ ಪಡೆದುಕೊಂಡರು.
ರೌಡಿ ಶೀಟರ್ ಜಮೀರ್ ಅಹ್ಮದ್ ದರ್ಗಾವಾಲೆ ಕೊಲೆ ಪ್ರಕರಣ ಪಟ್ಟಣದ ಜನತೆಯನ್ನು ಬೆಚ್ಚಿ ಬೀಳಿಸಿದೆ. ಆರೋಪಿಗಳನ್ನು ಸಹ ಶೀಘ್ರದಲ್ಲೇ ಪತ್ತೆ ಹಚ್ಚುವ ಭರವಸೆ ಪೊಲೀಸ್ ಇಲಾಖೆ ವ್ಯಕ್ತಪಡಿಸಿದೆ.
ರೌಡಿ ಶೀಟರ್ ಜಮೀರ್ ಅಹ್ಮದ್ ಎಂಬವರು ರಾತ್ರಿ ಹೋಟೆಲ್ ಗೆ ಊಟಕ್ಕೆ ಹೋದಾಗ ನಾಲ್ವರು ಸೇರಿ ಖಾರದ ಪುಡಿಯನ್ನು ಎರಚಿ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾರೆ. ಈ ಕುರಿತು ಪ್ರಕರಣ ದಾಖಲಾಗಿದೆ ಶೀಘ್ರದಲ್ಲಿಯೇ ಆರೋಪಿಗಳನ್ನು ಬಂಧಿಸಲಾಗುವುದು.
ದೀಪನ್ ಎಂ ಎನ್. ಎಸ್ ಪಿ, ಉತ್ತರ ಕನ್ನಡ