ಮುಂಡಗೋಡಿನ ರೈತರು ಜಿಲ್ಲಾಧಿಕಾರಿ ಅವರಿಗೆ ಮನವಿ ಸಲ್ಲಿಸಿದರು.  
ಉತ್ತರ ಕನ್ನಡ

ಇಂದೂರು ಭಾಗದ ರೈತರು ಕಂಗಾಲು

ಸುಭಾಸ ಹೆಗಡೆ ಧೂಪದಹೊಂಡ

ಪ್ರಮುಖ ಮುಖ್ಯಾಂಶಗಳು

  • ರೈತರಿಗೆ ಮಾಹಿತಿ ಇಲ್ಲದೇ ಜಮೀನಿನ ಕ್ಷೇತ್ರ ಕಡಿತ
  • ತಹಸೀಲ್ದಾರ್‌ ವಿರುದ್ಧ ಜಿಲ್ಲಾಧಿಕಾರಿಗೆ ದೂರು ನೀಡಿದ ರೈತರು
ಕಾರವಾರ:

ಮುಂಡಗೋಡ ತಹಸೀಲ್ದಾರ್ ಹಾಗೂ ಸಣ್ಣ ನೀರಾವರಿ ಇಲಾಖೆ ಎಇಇ ಅವರ ಮೇಲೆ ಕಾನೂನು ಕ್ರಮ ವಹಿಸಬೇಕು ಎಂದು ಇಂದೂರು ಭಾಗದ ರೈತರು ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಅವರಿಗೆ ಮನವಿ ಮಾಡಿದರು.

ಬಾಚಣಕಿ ಜಲಾಶಯದ ಉಪ ಕಾಲುವೆಯ ಇಕ್ಕೆಲಗಳ ಇಂದೂರು ಭಾಗದ ಜಮೀನಿನ ಪಹಣಿಯಲ್ಲಿ ಕ್ಷೇತ್ರವನ್ನು ರೈತರಿಗೆ ಯಾವುದೇ ಪೂರ್ವ ಮಾಹಿತಿ ನೀಡದೇ ಕಡಿಮೆ ಮಾಡಿ, ಸಣ್ಣ ನೀರಾವರಿ ಇಲಾಖೆ ಹೆಸರಿಗೆ ವರ್ಗಾಯಿಸಿದ್ದು, ಕಾನೂನು ಬಾಹಿರವಾಗಿದೆ. ಇದರಿಂದ ರೈತರು ಕಂಗಾಲಾಗಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದು, ತಕ್ಷಣ ಜಿಲ್ಲಾಡಳಿತ ಸಭೆ ನಡೆಸಿ ಕ್ರಮ ವಹಿಸದಿದ್ದರೆ ತೀವ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು.
ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೈತ ಮುಖಂಡ ಡಿಎಸ್‌ಎಸ್ ಜಿಲ್ಲಾಧ್ಯಕ್ಷ ಬಸವರಾಜ ಸಂಗಮೇಶ್ವರ, ತಾಲೂಕಿನ ಬಾಚಣಕಿಯಲ್ಲಿ 1976 ರ ಅವಽಯಲ್ಲಿ ಜಲಾಶಯ ನಿರ್ಮಾಣ ಮಾಡಲಾಗಿದೆ. ಅದಕ್ಕಾಗಿ ಕಾಲುವೆ ನಿರ್ಮಿಸಿ ರೈತರಿಗೆ ಕೃಷಿಗೆ ನೀರು ಒದಗಿಸಲಾಗುತ್ತಿದೆ. ಬಾಚಣಕಿ, ಮಜ್ಜಿಗೇರಿ, ಕೊಪ್ಪ, ಇಂದೂರು, ಕೂಸುರು, ಹುನಗುಂದ, ನಂದಿಕಟ್ಟಾ ಗ್ರಾಮಗಳ ಸುಮಾರು 2000 ಎಕರೆಗೆ ಇದೇ ಜಲಾಶಯದಿಂದ ನೀರು ಒದಗಿಸಲಾಗುತ್ತಿದೆ. ಈ ನೀರನ್ನು ನಂಬಿ ಸುಮಾರು 2 ಸಾವಿರಕ್ಕೂ ಅಧಿಕ ರೈತರು ಅಡಿಕೆ, ಬಾಳೆ, ಕಬ್ಬು, ಬೆಳೆಯುತ್ತಿದ್ದಾರೆ.
ಈ ಜಲಾಶಯದ ಮುಖ್ಯ ಕಾಲುವೆಗೆ 50 ಉಪ ಕಾಲುವೆಗಳಿದ್ದು, 200 ಕ್ಕೂ ಹೆಚ್ಚು ಸಣ್ಣ ಕಾಲುವೆಗಳಿವೆ. ಈ ಕಾಲುವೆಗಳು 500 ಕ್ಕೂ ಹೆಚ್ಚು ರೈತರ ಜಮೀನಿನಲ್ಲಿ ಹಾದು ಹೋಗಿವೆ. 50 ವರ್ಷಗಳ ಹಿಂದೆ ನಿರ್ಮಿಸಿದ ಈ ಈ ಕಾಲುವೆಗಳಲ್ಲಿ ಈಗಲೂ ನೀರು ಹರಿಯುತ್ತಿದೆ. ಕಾಲ ಕಾಲಕ್ಕೆ ಗ್ರಾಪಂನಿಂದ ಕಾರ್ಮಿಕರ ಮೂಲಕ, ಇನ್ನಷ್ಟು ಜೆಸಿಬಿ ಮೂಲಕ ಕಾಲುವೆಯ ಹೂಳೆತ್ತುವ ಕಾರ್ಯವನ್ನೂ ಮಾಡಲಾಗುತ್ತಿದೆ. ಅದಕ್ಕೆ ರೈರ‍್ಯಾರೂ ಆಕ್ಷೇಪಿಸಿಲ್ಲ. ಆದರೆ, ಈಗ ಸಣ್ಣ ನೀರಾವರಿ ಇಲಾಖೆಯು ಕಾಲುವೆಯ ಇಕ್ಕೆಲಗಳ 30 ಅಡಿ ಜಮೀನು ನಮಗೆ ಸೇರಿದ್ದು, ಅಲ್ಲಿ ರಸ್ತೆ ಮಾಡಬೇಕು ಎಂದು ಹೇಳುತ್ತಿದೆ. ಈ ಸಂಬಂಧ ಕೆಲವು ಮೃತರ ಹೆಸರಿಗೆ ಸಣ್ಣ ನೀರಾವರಿ ಇಲಾಖೆ ನೋಟಿಸ್ ನೀಡಿತ್ತು. ಜಾಲ ಖಾಲಿ ಮಾಡುವಂತೆ ಸೂಚಿಸಿತ್ತು.
ಈಗ ಜು.29 ರಂದು ಮುಂಡಗೋಡ ತಹಸೀಲ್ದಾರರು ರೈತರಿಗೆ ಯಾವುದೇ ಮಾಹಿತಿ ನೀಡದೇ ಇಂದೂರು ಗ್ರಾಮದಲ್ಲಿ ಉಪ ಕಾಲುವೆಯ ಸಮೀಪದಲ್ಲಿರುವ ಸುಮಾರ 20 ರಿಂದ 25 ರೈತರ ಜಮೀನಿನ ಕ್ಷೇತ್ರದಲ್ಲಿ 2 ರಿಂದ 10 ಗುಂಟೆ ಜಮೀನನ್ನು ಕಡಿಮೆ ಮಾಡಿ ಪಹಣಿಯಲ್ಲಿ ದಾಖಲಿಸಿದ್ದಾರೆ. ಈ ಕ್ಷೇತ್ರಕ್ಕೆ ಯಾವುದೇ ಪರಿಹಾರ ನೀಡಿಲ್ಲ. 50 ವರ್ಷಗಳ ಹಿಂದೆಯೇ ಭೂ ಸ್ವಾಽÃನ ಮಾಡಲಾಗಿದೆ ಎಂದು ಸಣ್ಣ ನೀರಾವರಿ ಇಲಾಖೆ ಹೇಳುತ್ತಿದ್ದರೂ ಆ ಬಗ್ಗೆ ಇಲಾಖೆಯ ಬಳಿ ಮಾಹಿತಿ ಇಲ್ಲ.
ರೈತರ ಪಹಣಿಯಲ್ಲಿ ಇದ್ದಕ್ಕಿದ್ದಂತೆ ಕ್ಷೇತ್ರ ಕಡಿಮೆಯಾಗಿದ್ದರಿಂದ ಸಮಸ್ಯೆ ಎದುರಾಗಿದೆ. ಬ್ಯಾಂಕ್‌ನವರು ನೀಡಿದ ಸಾಲದ ಹಣ ವಾಪಸ್ ಕೇಳುತ್ತಿದ್ದಾರೆ. ಈ ಕಾಲುವೆಯ ಇಕ್ಕೆಲದಲ್ಲಿ ತೋಟ ಮಾಡಿಕೊಂಡವರು, ಮನೆ ಕಟ್ಟಿಕೊಂಡವರು ಆತಂಕಕ್ಕೆ ಒಳಗಾಗಿದ್ದಾರೆ. ಕಾಲುವೆ ನಿರ್ಮಾಣ ಮಾಡಿ 50 ವರ್ಷವಾದರೂ ಉದ್ದೇಶಕ್ಕೆ ಬಳಸದೇ ಈಗ ಇದ್ದಕ್ಕಿದ್ದಂತೆ ಜಮೀನನ್ನು ಸಣ್ಣ ನೀರಾವರಿ ಇಲಾಖೆ ಹೆಸರಿಗೆ ಮಾಡುವುದು ಕಾನೂನಿಗೆ ವಿರುದ್ಧವಾಗಿದೆ. ಈ ಬಗ್ಗೆ ತನಿಖೆ ನಡೆಯಬೇಕು. ತಹಸೀಲ್ದಾರ್ ವಿರುದ್ಧ ಕಾನೂನು ಕ್ರಮ ವಹಿಸಬೇಕು ಎಂದರು.
ರೈತ ಪ್ರಮುಖರಾದ ಮಂಜುನಾಥ ನಡಗೇರಿ, ಸಿಕಂದರ್ ಬಂಕಾಪುರ, ಅಶೋಕ ಸೂರಣ್ಣನವರ್, ಪರಮೇಶ್ವರ ಸುಣಗಾರ, ಅಬ್ದುಲ್ ರೆಹಮಾನ್ ಸಾಬ್ ಇತರರು ಸುದ್ದಿಗೋಷ್ಠಿಯಲ್ಲಿದ್ದರು.