ಕಾರವಾರ: ಆನ್‌ಲೈನ್ ವಹಿವಾಟು ಹೆಚ್ಚಿದೆ. ಅದರಂತೆ ದಿನದಿಂದ ದಿನಕ್ಕೆ ಆನ್‌ಲೈನ್ ವಂಚನೆಯೂ ಹೆಚ್ಚುತ್ತಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿಯೇ ವಾರಕ್ಕೆ ಒಂದು ಎರಡು ಪ್ರಕರಣಗಳು ದಾಖಲಾಗುತ್ತಿವೆ. ಅದರಲ್ಲಿ ಎರಡು ಪ್ರಕರಣಗಳ ವಿವರ ಇಲ್ಲಿದೆ.
ಪೊಲೀಸರ ವೇಷ ಧರಿಸಿ, ವಿಡಿಯೋ ಕರೆ ಮಾಡಿ ಒಂಟಿ ಮಹಿಳೆಗೆ ವಂಚಿಸಿದ ಘಟನೆ ನಡೆದಿದ್ದು, ಚಿತ್ತಾಕುಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸದಾಶಿವಗಡ ಬೆತ್‌ನಾಯ್ಕವಾಡದಲ್ಲಿ ವಾಸವಿರುವ ಒಂಟಿ ಮಹಿಳೆಗೆ ಕಳೆದ ಜ.23 ರಂದು ವ್ಯಕ್ತಿಯೊಬ್ಬ ಅವರಿಗೆ ಕರೆ ಮಾಡಿ ನಿಮ್ಮ ಹೆಸರಿಗೆ ಪಾರ್ಸಲ್ ಒಂದು ಬಂದಿದೆ. ಅದರಲ್ಲಿ ಮೊಬೈಲ್ ಐಫೋನ್ ಹಾಗೂ ಬಂಗಾರದ ಸರ ಇದೆ ಎಂದಿದ್ದ. ಆದರೆ, ಅವುಗಳು ನನ್ನದಲ್ಲ ಎಂದಾಗ ನಿಮ್ಮ ಹೆಸರು ಹಾಗೂ ಮೊಬೈಲ್ ಫೋನ್ ಬಳಸಿಕೊಂಡು ವಂಚನೆ ಮಾಡಲಾಗಿದೆ. ಈ ಸಂಬAಧ ಪೊಲೀಸರಿಗೆ ದೂರು ನೀಡುತ್ತೇನೆ ಎಂದಿದ್ದ.
ಇತ್ತೀಚೆಗೆ ಮತ್ತೆ ವಾಟ್ಸ್ಆ್ಯಪ್ ವಿಡಿಯೋ ಕರೆ ಮಾಡಿದ ವ್ಯಕ್ತಿಯೊಬ್ಬ ನಿಮ್ಮ ಹೆಸರಿನಲ್ಲಿ 2 ಕೋಟಿ ರೂ. ವಂಚನೆ ನಡೆದಿದೆ. ತನಿಖೆ ನಡೆಯುತ್ತಿದೆ. ನಿಮ್ಮನ್ನು ಡಿಜಿಟಲ್ ಅರೆಸ್ಟ್ ಮಾಡಿದ್ದೇವೆ. ಹಾಗಾಗಿ ನಿಮ್ಮ ಬಳಿ ಇರುವ ಹಣವನ್ನು ಆರ್‌ಬಿಐಗೆ ಹಸ್ತಾಂತರಿಸಿ ಎಂದು ತಿಳಿಸಿದ್ದರು. ಗಾಬರಿಗೊಂಡ ಮಹಿಳೆ ವಂಚಕರು ಹೇಳಿದ ಖಾತೆಗೆ 9.94 ಲಕ್ಷ ರೂ.ಗಳನ್ನು ವರ್ಗಾವಣೆ ಮಾಡಿದ್ದರು.
ನಂತರ ಅವರು ನಿಜವಾದ ಪೊಲೀಸರಲ್ಲ ವಂಚನೆಗೊಳಗಾಗಿದ್ದೇನೆ ಎಂದು ಗೊತ್ತಾಗಿ ಚಿತ್ತಾಕುಲಾ ಪೊಲೀಸರ ಮೊರೆ ಹೋಗಿದ್ದಾಳೆ.
ಇನ್ಸ್ಸ್ಟಾಗ್ರಾಂನಲ್ಲಿ ಬಂದ ಸಂದೇಶವನ್ನು ನಂಬಿ ಹೆಚ್ಚಿನ ಲಾಭ ಗಳಿಸುವ ಆಸೆಯಿಂದ ಆನ್‌ಲೈನ್‌ನಲ್ಲಿ ಹಣ ಹೂಡಿಕೆ ಮಾಡಿದ ವ್ಯಕ್ತಿಯೊಬ್ಬ ಭಾರಿ ಹಣ ಕಳೆದುಕೊಂಡ ಘಟನೆ ನಡೆದಿದ್ದು, ಸೈಬರ್ ಕ್ರೆÊಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಂಕೋಲಾದಲ್ಲಿ ಇಂಟರ್‌ನೆಟ್ ಸೆಂಟರ್ ಹೊಂದಿದ ವ್ಯಕ್ತಿಯೊಬ್ಬರು ಸ್ಮಾರ್ಟ್ ವೈಸ್ ಕ್ವಾಂಟ್ ಪಂಡ್ ಎಂಬ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿ 16.78 ಸಾವಿರ ರೂ. ಕಳೆದುಕೊಂಡಿದ್ದಾರೆ.
ದಿವ್ಯಾ ಎಂಬ ಮಹಿಳೆ ಕರೆ ಮಾಡಿ ಡಬ್ಲುಕ್ಯೂ ಎಂಬ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಲು ಹೇಳಿದ್ದರು. ಮತ್ತು ಹೂಡಿಕೆಯ ಬಗ್ಗೆ ತರಬೇತಿ ನೀಡುತ್ತಿದ್ದರು ಅದರಂತೆ ಮಾರ್ಚ್ನಿಂದ ಹೂಡಿಕೆ ಮಾಡುತ್ತಾ ಹೋಗಿದ್ದು, ಕೊನೆಯಲ್ಲಿ ಲಾಂಭಾAಶ ಹಾಗೂ ಹಣವನ್ನೂ ಕೊಡದೇ ವಂಚಿಸಿದ್ದಾರೆ ಎನ್ನಲಾಗಿದೆ.