ಕೊಂಕಣ ರೈಲ್ವೆ  
ಉತ್ತರ ಕನ್ನಡ

ಜೂನ್‌ 15 ರಿಂದ ಕೊಂಕಣ ರೈಲ್ವೆ ಮಾರ್ಗದಲ್ಲಿ ಮಾನ್ಸೂನ್‌ ವೇಳಾಪಟ್ಟಿ

ಕಾರವಾರ: ಕೊಂಕಣ ರೈಲ್ವೆ ನಿಗಮವು ಮುಂಗಾರಿನ ಸವಾಲುಗಳನ್ನು ಎದುರಿಸಲು ಸಜ್ಜಾಗಿದ್ದು, ಜೂನ್ 15 ರಿಂದ ಮುಂಗಾರಿನ ವೇಳಾಪಟ್ಟಿ ಜಾರಿಯಾಗಲಿದೆ.
ಈ ಸಂಬAಧದ ಸಿದ್ಧತೆಗಳ ಬಗ್ಗೆ ನಿಗಮದ ಮುಖ್ಯ ಸಾರ್ವಜನಿಕ ಸಂಪರ್ಕ ಅಽಕಾರಿ ಸುನೀಲ ಬಿ.ನಾರ್ಕರ್ ಅವರು ಪತ್ರಿಕಾ ಹೇಳಿಕೆ ನೀಡಿದ್ದಾರೆ. ಮಳೆಗಾಲದಲ್ಲಿ ಯಾವುದೇ ಅಡಚಣೆಯಿಲ್ಲದ ರೈಲು ಸಂಚಾರ ಹಾಗೂ ಪ್ರಯಾಣಿಕರ ಸುರಕ್ಷತೆ ಬಗ್ಗೆ ನಿಗಮವು ಆದ್ಯತೆ ನೀಡಲಿದೆ ಎಂದಿದ್ದಾರೆ. ಅದಕ್ಕಾಗಿ ಸಾಕಷ್ಟು ಮುನ್ನೆಚ್ಚರಿಕಾ ಕ್ರಮಗಳು ಹಾಗೂ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಮಾನ್ಸೂನ್ ಎದುರಿಸಲು ಕೊಂಕಣ ರೈಲ್ವೆ ಹಳಿಗಳ ಸುರಕ್ಷತೆ ಬಗ್ಗೆ ಕ್ರಮ ವಹಿಸಿದೆ. ಮಾರ್ಗದಲ್ಲಿ ಗ್ಯಾಂಗ್ ಮೆನ್‌ಗಳ ಮೂಲಕ ನಿರಂತರ ನಿಗಾ ವಹಿಸಲಾಗುತ್ತಿದೆ. ತುರ್ತು ಪರಿಸ್ಥಿತಿಯನ್ನು ಎದುರಿಸಲು ವಿಶೇಷ ಸ್ಪಂದನಾ ತಂಡವನ್ನು ನಿಯೋಜಿಸಲಾಗಿದೆ. ಪ್ರತಿ ದಿನದ ಹವಾಮಾನದ ನಿಖರ ಮಾಹಿತಿ ಪಡೆಯಲು ಭಾರತೀಯ ಹವಾಮಾನ ಇಲಾಖೆಯೊಂದಿಗೆ ನಿರಂತರ ಸಂಪರ್ಕ ಸಾಽಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಮಾನ್ಸೂನ್ ವೇಳಾಪಟ್ಟಿ ಜಾರಿ:
ಮಳೆಗಾಲದ ಅವಽಯಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸದAತೆ ತಡೆಯಲು ನಿರ್ದಿಷ್ಟ ವಲಯಗಳಲ್ಲಿ ರೈಲುಗಳ ವೇಗವನ್ನು ನಿಯಂತ್ರಿಸಲಾಗುತ್ತದೆ. ಇದರ ಜೊತೆಗೆ,ಜೂನ್ 15 ರಿಂದ ಅಕ್ಟೋಬರ್ 20 ರವರೆಗೆ ವಿಶೇಷ ಮಾನ್ಸೂನ್ ವೇಳಾಪಟ್ಟಿಯಂತೆ ರೈಲುಗಳು ಸಂಚರಿಸಲಿವೆ. ಇದರಿಂದ ರೈಲುಗಳ ಆಗಮನ, ನಿರ್ಗಮನದಲ್ಲಿ ವ್ಯತ್ಯಾಸವಾಗಲಿದ್ದು, ಸಮಯವನ್ನು ಮತ್ತೊಮ್ಮೆ ಪರಿಶೀಲಿಸಿಕೊಳ್ಳುವಂತೆ ಅವರು ತಿಳಿಸಿದ್ದಾರೆ.