ದಿನಕರ ಶೆಟ್ಟಿ  
ಉತ್ತರ ಕನ್ನಡ

ನನ್ನನ್ನು ಕಾಂಗ್ರೆಸ್‌ಗೆ ಆಹ್ವಾನಿಸಿದರು: ಬಿಜೆಪಿ ಶಾಸಕ ದಿನಕರ ಶೆಟ್ಟಿ

ಸುಭಾಸ ಹೆಗಡೆ ಧೂಪದಹೊಂಡ
ಕಾರವಾರ: `ನನ್ನನ್ನು ಕಾಂಗ್ರೆಸ್ ಪಕ್ಷಕ್ಕೆ ಆಹ್ವಾನಿಸಿದರು. ಆದರೆ, ನಾನು ಆಹ್ವಾನವನ್ನು ತಿರಸ್ಕರಿಸಿದೆ' ಎಂದು ಕುಮಟಾ ಶಾಸಕ ದಿನಕರ ಶೆಟ್ಟಿ ಹೇಳಿಕೆ ನೀಡಿದರು.
ಕುಮಟಾದ ಹೆಗಡೆ ಗ್ರಾಮದಲ್ಲಿ ಸೋಮವಾರ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಭಾನುವಾರ ಗಂಗಾವಳಿ ಸೇತುವೆ ಉದ್ಘಾಟನಾ ಕಾರ್ಯಕ್ರಮಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಇಬ್ಬರ ಎದುರೇ ಈ ವಿಚಾರ ಚರ್ಚೆಯಾಯಿತು. ಉತ್ತರ ಕನ್ನಡದ 6 ಕ್ಷೇತ್ರದಲ್ಲಿ ನಾಲ್ವರು ಕಾಂಗ್ರೆಸ್ ಶಾಸಕರಿದ್ದಾರೆ. ಹೆಬ್ಬಾರ ಅವರನ್ನೂ ಸೇರಿ ಕಾಂಗ್ರೆಸ್ ಬಲ ಐದಕ್ಕೇರಿದೆ. ಈಗ ಜಿಲ್ಲೆಯಲ್ಲಿ ನೀವೊಬ್ಬರೇ ಬಿಜೆಪಿ ಶಾಸಕರಿದ್ದೀರಿ. ನೀವು ಕಾಂಗ್ರೆಸ್‌ಗೆ ಬನ್ನಿ ಎಂದು ಆಹ್ವಾನ ನೀಡಿದರು. ಆದರೆ, ಒಬ್ಬನೇ ನಿಂತು ಹೋರಾಡುವ ಶಕ್ತಿ ನನಗಿದೆ. ಬಿಜೆಪಿ ಬಿಟ್ಟು ನಾನು ಬರುವುದಿಲ್ಲ ಎಂದು ನಾನು ಸ್ಪಷ್ಟವಾಗಿ ಹೇಳಿದೆ. ಇದರಿಂದ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಭಾಷಣದಲ್ಲಿ `ನೀವು ಅಲ್ಲೇ ಇರಿ. ನಾವು ಯಾರನ್ನೂ ಆಹ್ವಾನಿಸುವುದಿಲ್ಲ' ಎಂದು ಹೇಳಿದರು ಎಂದು ಹೇಳಿಕೆ ನೀಡಿದರು.

ಡಿ.ಕೆ.ಶಿವಕುಮಾರ್ ಸಿಎಂ ಆಗ್ಬೇಕಿತ್ತು;

ನನ್ನ ಮಾಹಿತಿಯ ಪ್ರಕಾರ ಮುಖ್ಯಮಂತ್ರಿಗಳ ವಿಚಾರದಲ್ಲಿ ಫಿಫ್ಟಿ ಫಿಪ್ಟಿ ಅಽಕಾರ ಹಂಚಿಕೆ ಮಾತುಕತೆ ಆಗಿದೆ. ಆ ಲೆಕ್ಕಾಚಾರದಲ್ಲಿ ನೋಡಿದರೆ ಇವತ್ತಿಗೆ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗಬೇಕಿತ್ತು. ಆದರೆ, ಅವರ ಪಕ್ಷದಲ್ಲಿನ ರಾಜಕೀಯ ಡಿ.ಕೆ.ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಸ್ಥಾನ ತಪ್ಪಿಸುತ್ತಿದೆ ಎಂದರು.
"

ಬಿಜೆಪಿ ಶಾಸಕ ಚಂದ್ರು ಲಮಾಣಿ ಲೋಕಾಯುಕ್ತ ಬಲೆಗೆ ಬಿದ್ದಿರುವುದರಿಂದ ಪಕ್ಷಕ್ಕೆ ತುಂಬಾ ಮುಜುಗರವಾಗಿದೆ. ಪಕ್ಷ ಇದನ್ನು ಸಹಿಸುವುದಿಲ್ಲ. ಅಂಥವರ ಬಗ್ಗೆ ಕ್ರಮ ಕೈಗೊಳ್ಳುತ್ತದೆ ಎಂಬ ವಿಶ್ವಾಸವಿದೆ. ಚಂದ್ರು ಲಮಾಣಿ ಮಾಡಿದ್ದು, ಅಕ್ಷಮ್ಯ ತಪು. ದಿನಕರ ಶೆಟ್ಟಿ ಕುಮಟಾ ಶಾಸಕ